ಬೆಂಗಳೂರು: ಪಾಲಿಕೆ ಚುನಾವಣೆ ಮುನ್ಸೂಚನೆ ಕೂಡ ಸಿಗ್ತಿರೋ ಬೆನ್ನಲ್ಲೆ, ಚುನಾವಣೆ ಘೋಷಣೆಗೂ ಮೊದಲೇ ಬಾಕಿ ತೆರಿಗೆ ವಸೂಲಿಗೆ ಪಾಲಿಕೆ ಪ್ಲಾನ್ ಮಾಡಿದೆ. ಇನ್ನು ಲೋಕಸಭಾ ಚುನಾವಣೆ ಶುರುವಾದಾಗಿನಿಂದ ಪಾಲಿಕೆ ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ಬ್ಯುಸಿಯಾಗಿದ್ರು. ಇದರಿಂದ ತೆರಿಗೆ ಬಾಕಿದಾರರು ಇನ್ನೂ ಟ್ಯಾಕ್ಸ್ ವಿಚಾರ ಚರ್ಚೆಗೆ ಬರಲ್ಲ ಅಂತಾ ಬಿಂದಾಸ್ ಆಗಿದ್ರು. ಆದ್ರೆ ಇದೀಗ ಬಾಕಿ ತೆರಿಗೆ ವಸೂಲಿಗೆ ತೆರೆಮರೆಯಲ್ಲೇ ಪ್ಲಾನ್ ರೆಡಿಮಾಡಿರೋ ಪಾಲಿಕೆ,
ಜೂನ್ 7 ರ ನಂತರ ನೋಟಿಸ್ ನೀಡಿದ್ರೂ ಟ್ಯಾಕ್ಸ್ ಕಟ್ಟದವರಿಗೆ ಬಿಸಿ ಮುಟ್ಟಿಸೋಕೆ ತಯಾರಿ ನಡೆಸಿದೆ. ಸದ್ಯ ಈ ಹಿಂದೆ ಪ್ರತಿ ವಲಯದಲ್ಲಿ ಅತಿಹೆಚ್ಚು ತೆರಿಗೆ ಬಾಕಿದಾರರ ಪಟ್ಟಿ ರಿಲೀಸ್ ಮಾಡಿದ್ದ ಪಾಲಿಕೆ, ಇದೀಗ ಆ ಪಟ್ಟಿಯಲ್ಲಿರೋ ಬಾಕಿದಾರರು ತೆರಿಗೆ ಪಾವತಿಸಿದ್ದಾರಾ, ಇಲ್ವಾ ಅನ್ನೋದನ್ನ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ. ಪದೇ ಪದೇ ತೆರಿಗೆ ಬಾಕಿ ಉಳಿಸಿಕೊಂಡು ಲಾಕ್ ಆಗಿದ್ದ ಮಂತ್ರಿ ಮಾಲ್ ಸೇರಿದಂತೆ ಇತರೆ ಮಾಲ್, ಅಂಗಡಿ–ಮುಂಗಟ್ಟುಗಳ ತೆರಿಗೆ ಪಾವತಿಯನ್ನೂ ಪರಿಶೀಲಿಸಲಿದ್ದು, ತೆರಿಗೆ ಬಾಕಿದಾರರ ವಿರುದ್ಧ ಸಮರಕ್ಕೆ ವೇದಿಕೆ ರೆಡಿಯಾಗ್ತಿದೆ.
ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಫಲಿತಾಂಶಕ್ಕಾಗಿ ಕಾದು ಕುಳಿತ ಸರ್ಕಾರ, ಸದ್ದಿಲ್ಲದೇ ಪಾಲಿಕೆ ಬೊಕ್ಕಸ ಏರಿಕೆಗೂ ಸೂಚನೆ ನೀಡಿದೆ. ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗೋ ಮೊದಲೇ ಬಾಕಿ ವಸೂಲಿಗೆ ತಯಾರಿ ನಡೆದಿದ್ದು, ಚುನಾವಣಾ ಫಲಿತಾಂಶದ ಬಳಿಕ ಯಾವ ಮಾಲ್, ಅಂಗಡಿ–ಮುಂಗಟ್ಟು ಮಾಲೀಕರಿಗೆ ಪಾಲಿಕೆ ಶಾಕ್ ಕೊಡುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


