ಮಧುಗಿರಿ/ಮಿಡಿಗೇಶಿ: ಪರಸ್ಪರ ಕಿತ್ತಾಡಿಕೊಂಡು ಹೆಣ್ಣು ಕರಡಿಯು ಬಂಡೆಯ ಮೇಲಿನಿಂದ ಕೆಳಗೆ ಬಿದ್ದು ಮುಂಭಾಗದ ಕಾಲಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ತಾಲೂಕಿನ ಮಿಡಿಗೇಶಿ ಹೋಬಳಿಯ ಬಿಡರೆಕೆರೆ ಗ್ರಾಮದ ಜಮೀನೊಂದರಲ್ಲಿ ಎರಡು ಕರಡಿಗಳು ಕಿತ್ತಾಡಿಕೊಂಡು ಸುಮಾರು ಮೂರು ವರ್ಷದ ಹೆಣ್ಣು ಕರಡಿ ದೊಡ್ಡ ಗಾತ್ರದ ಗುಂಡಿನ ಮೇಲ್ಭಾಗದಿಂದ ಬಿದ್ದು ನೋವಿನಿಂದ ಚೀರಾಡುತ್ತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣವೇ ಅರಣ್ಯ ಗಸ್ತು ಪಾಲಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಗ್ರಾಮಸ್ಥರ ಮನವಿ ಮೇರೆಗೆ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಸುರೇಶ್ ಎಚ್.ಎಂ, ಡಿಆರ್‌ಆರ್‌ಓ ಶಾಲಿನಿ, ಅರಣ್ಯ ರಕ್ಷಕರಾದ ಮಹೇಶ್, ಶ್ರೀಧರ್ ಸ್ಥಳಕ್ಕೆ ಭೇಟಿ ನೀಡಿ ಹೆಣ್ಣು ಕರಡಿಯನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಬನ್ನೇರುಘಟ್ಟ ಆಸ್ಪತ್ರೆಗೆ ರವಾನಿಸಿದರು. ಕರಡಿಯ ಮುಂದಿನ ಕಾಲಿನ ಮೂಳೆ ಮುರಿದಿದೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
