ಬಿಟ್ರೋಟ್ ಸೇವನೆ ಈ ನಾಲ್ಕು ರೋಗಗಳನ್ನು ಬೇರಿನಿಂದಲೇ ನಿರ್ನಾಮ ಮಾಡಲು ಸಹಕಾರಿಯಾಗಿದೆ. ಬಿಟ್ರೋಟ್ ನಲ್ಲಿ ಫೈಬರ್,ನೈಸರ್ಗಿಕ ಸಕ್ಕರೆ,ಮೆಗ್ನೀಸಿಯಮ್, ಸೋಡಿಯಂ ಕೂಡಾ ಅಧಿಕವಾಗಿದೆ. ಪೊಟ್ಯಾಸಿಯಮ್ ಕೂಡಾ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. ಬೀಟ್ರೂಟ್ ಅನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅದರ ಪರಿಣಾಮ ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ.
* ಬೆಳಗ್ಗೆ ದಿನವೂ ಬೀಟ್ರೋಟ್ ಜ್ಯೂಸ್ ಸೇವನೆ ಮಾಡುವುದರಿಂದ ಮೂತ್ರಕ್ಕೆ ಸಂಬಂಧಿಸಿದ ರೋಗಗಳ ನಿರ್ನಾಮ ಮಾಡಲು ಸಾಧ್ಯವಿದೆ. ಮೂತ್ರದ ಸೋಂಕು, ಮೂತ್ರ ಮಾಡಲು ಅಸಮರ್ಥತೆ, ಮೂತ್ರದಲ್ಲಿ ಸುಡುವಂತಹ ಸಂವೇದನೆಗಳಿಂದ ಮುಕ್ತಿ ನೀಡಲು ಬಿಟ್ರೋಟ್ ಸಹಕಾರಿಯಾಗಿದೆ.
* ನಮ್ಮ ದೇಹದಲ್ಲಿ ನೀರಿನಾಂಶ ಕಡಿಮೆಯಾಗಬಾರದು. ಹಾಗೇನಾದ್ರೂ ನೀರಿನಾಂಶದ ಕೊರೆತೆಯಾದರೆ. ಅನೇಕ ರೋಗಗಳನ್ನು ಎದುರಿಸಬೇಕಾಗುತ್ತದೆ. ಬಿಟ್ರೋಟ್ ದೇಹದಲ್ಲಿ ನೀರಿನಾಂಶದ ಕೊರತೆಯಾಗದಂತೆ ಕಾಪಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಬಿಟ್ರೋಟ್ ಸೇವನೆಯಿಂದ ದೇಹದಲ್ಲಿ ನೀರಿನಾಂಶದ ಕೊರತೆ ಬಾರದಂತೆ ಕಾಪಾಡಿಕೊಳ್ಳಲು ಸಾಧ್ಯ
* ಹೆಚ್ಚುತ್ತಿರುವ ತೂಕ, ಹೊಟ್ಟೆ ಮತ್ತು ಸೊಂಟದ ಕೊಬ್ಬಿನಿಂದ ತೊಂದರೆಗೊಳಗಾದವರು ಬಿಟ್ರೋಟ್ ಸೇವನೆ ಮಾಡಬಹುದು. ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಫೈಬರ್ ಅಂಶ ಇರುವುದರಿಂದ ಜೀರ್ಣ ಕ್ರಿಯೆ ಸರಾಗವಾಗಿ ನಡೆದು ತೂಕ ಇಳಿಕೆಗೆ ಸಹಕಾರಿಯಾಗಲಿದೆ.
* ಬೀಟ್ರೂಟ್ ಸ್ವತಃ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಹೆಚ್ಚಿನ ಆರೋಗ್ಯ ತಜ್ಞರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಏಕೆಂದರೆ ಹಾಗೆ ಮಾಡುವುದರಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆ ಹೆಚ್ಚಾಗುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA