ತುರುವೇಕೆರೆ: ವಡವನಘಟ್ಟ ಪಂಚಾಯ್ತಿ ವ್ಯಾಪ್ತಿಯ ಆಯರಹಳ್ಳಿಯಲ್ಲಿ ಸುಮಾರು 33 ಲಕ್ಷ ವೆಚ್ಚದಲ್ಲಿ ಸಿ.ಸಿ. ರಸ್ತೆ ಅಭಿವೃದ್ಧಿಗೆ ಶಾಸಕ ಮಸಾಲಾ ಜಯರಾಮ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕೆ ಜೆ.ಡಿ.ಎಸ್. ಹಾಗೂ ಬೇರೆ ಪಕ್ಷಗಳಿಂದ ಗ್ರಾ.ಪಂ. ಮಾಜಿ ಹಾಗೂ ಹಾಲಿ ಸದಸ್ಯರುಗಳು ಮತ್ತು ಅಧ್ಯಕ್ಷರುಗಳು ಸೇರ್ಪಡೆಯಾಗಿದ್ದಾರೆ. ಗ್ರಾಮದ ಅಭಿವೃದ್ಧಿಯಾದರೆ, ಬಿಜೆಪಿಗೆ ಬರುವುದಾಗಿ ಅವರು ತಿಳಿಸಿದ್ದರು. ಅವರೆಲ್ಲರ ಆಶಯದಂತೆ ನಮ್ಮ ಗ್ರಾಮದ ಅಭಿವೃದ್ಧಿ ಮಾಡಿದ್ದು, ಕೊಟ್ಟ ಆಶ್ವಾಸನೆಯಂತೆ ಮುಖಂಡರಾದ ಸಿದ್ದೇಗೌಡ. ಗಿರೀಶ್. ಕೇಶವ . ಕಿಶೋರ್. ಮಂಜುನಾಥ್. ರಾಮ. ರಮೇಶ್. ಕುಮಾರ್. ಚನ್ನಕೇಶವ. ಗೋಪಾಲ್. ರಂಗಸ್ವಾಮಿ. ಈಶ್ವರಯ್ಯ. ಗೋವಿಂದರಾಜ್. ಬಿ.ಜೆ.ಪಿ. ಪಕ್ಷ ಸೇರ್ಪಡೆಯಾಗಿದ್ದಾರೆ ಎಂದರು.
ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೊಚಿಹಳ್ಳಿ, ಚಿಕ್ಕಕಲ್ಲೂರು ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದವು. ನಾನು ಶಾಸಕನಾದ ತಕ್ಷಣ 25ಕೋಟಿ ಅನುದಾನ ಬಿಡುಗಡೆ ಮಾಡಿಸಿ ಟಿ.ಬಿ. ಕ್ರಾಸ್ ನಿಂದ ನಿಟ್ಟೂರು ವರೆಗಿನ ರಸ್ತೆ ಮಾಡಿಸಿದ್ದೇನೆ. ಬೋಚಿಹಳ್ಳಿ ಸ್ಕೂಲ್ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು. ಅದನ್ನು ದುರಸ್ತಿ ಮಾಡಲಾಯಿತು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇನೆ. ಗ್ರಾಮಗಳಲ್ಲಿನ ಉಳಿದಿರುವ ಪ್ರತಿಯೊಂದು ರಸ್ತೆಯನ್ನೂ ಸಹ ಸಿ.ಸಿ. ರಸ್ತೆ ಮಾಡಲಾಗುವುದು ಎಂದರು.
ಪಕ್ಕದ ವರಾಹಾಸಂದ್ರದಲ್ಲಿ ಸುಮಾರು 80 ಲಕ್ಷ ರೂಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇವೆ. ಚಿಕ್ಕ ಕಲ್ಲೂರು ರಸ್ತೆ ಇತಿಹಾಸ ಪೂರ್ವದಿಂದಲೂ ಅಭಿವೃದ್ಧಿ ಕಂಡಿರಲಿಲ್ಲ. ಸುಮಾರು 1.50 ವೆಚ್ಚದಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೊಂಡಿದ್ದೇವೆ. ಇನ್ನು ಒಂದು ಕಿಲೋಮೀಟರ್ ರಸ್ತೆ ಕಾಮಗಾರಿ ಬಾಕಿ ಉಳಿದಿದೆ. ಅದನ್ನು ಸದ್ಯದಲ್ಲೇ ಮುಗಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಆಯರಹಳ್ಳಿ ಪಾಂಡು ,ಪುಟ್ಟಸ್ವಾಮಿಗೌಡ ,ಸಿದ್ದಪ್ಪಾಜಿ, ದೊಂಬರಹಳ್ಳಿ ಬಸವರಾಜು, ಜಿ.ವಿ .ಪ್ರಕಾಶ್. ಸಂಪಿಗೆ ಹೊಸಹಳ್ಳಿ , ವಿ ಎಸ್ ಎಸ್ ಎನ್ ನಿರ್ದೇಶಕ ಕಿರಣ್ ಮುಂತಾದವರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz