ಬಾಗಲಕೋಟೆ : ದೆಹಲಿಯಲ್ಲಿ ಪ್ರಿಯತಮೆಯನ್ನು ಹತ್ಯೆ ಮಾಡಿ ಮೃತದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಘಟನೆ ಮಾಸುವ ಮೊದಲೇ ಅಂತಹದೇ ಆಘಾತಕಾರಿ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರ್ ಬೈಪಾಸ್ ಬಳಿ ನಡೆದಿದೆ.ತಂದೆಯನ್ನೇ ಹತ್ಯೆ ಮಾಡಿ 30 ತುಂಡುಗಳನ್ನು ಜಮೀನು ಒಂದರ ನಿರುಪಯುಕ್ತ ಬೋರ್ವೆಲ್ ನಲ್ಲಿ ಹಾಕಿದ್ದಾನೆ.
54 ವರ್ಷದ ಪರಶುರಾಮ ಕುಳಲಿ ಕೊಲೆಯಾದ ವ್ಯಕ್ತಿ. ಅವರ ಪುತ್ರ ವಿಠ್ಠಲ್(20) ಕೊಲೆ ಆರೋಪಿಯಾಗಿದ್ದಾನೆ.ಸಿಪಿಐ ಅಯ್ಯನಗೌಡ ಪಾಟೀಲ, ಎಸ್ಐ ಸಂಗಮೇಶ ಹೊಸಮನಿ, ಕ್ರೈಂ ಪಿಎಸ್ಐ ಕೆ.ಬಿ. ಮಾಂಗ ಅವರ ನೇತೃತ್ವದಲ್ಲಿ ತನಿಖೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.
ಪರಶುರಾಮ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಕಾರಣಕ್ಕೆ ವಿಠ್ಠಲ್ ಕೊಲೆ ಮಾಡಿ ನಿರುಪಯುಕ್ತ ಬೋರ್ವೆಲ್ ನಲ್ಲಿ ಅಂಗಾಂಗಗಳನ್ನು ಹಾಕಿದ್ದಾನೆ ಎನ್ನುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy