nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬಾದಲಗಾಂವ ಗ್ರಾಮಕ್ಕೆ ಜಿ.ಪಂ. ಸಿಇಒ ಗಿತ್ತೆ ಮಾಧವವಿಠ್ಠಲರಾವ್ ದಿಢೀರ್ ಭೇಟಿ: ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

    September 21, 2026

    ಜನ ಮೆಚ್ಚಿದ ಅಧಿಕಾರಿಗೆ ಜನರಿಂದಲೇ ಅದ್ದೂರಿ ಸೀಮಂತ: ಕೊರಟಗೆರೆಯಲ್ಲಿ ಅಪರೂಪದ ಪ್ರೀತಿ

    September 21, 2026

    ಸರ್ಕಾರದ ಗ್ಯಾರೆಂಟಿ ಯೋಜನೆಗಳು ಮಹಿಳೆಯರು, ಯುವಕರಿಗೆ ಉಪಯುಕ್ತವಾಗಿದೆ: ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್

    September 21, 2026
    Facebook Twitter Instagram
    ಟ್ರೆಂಡಿಂಗ್
    • ಬಾದಲಗಾಂವ ಗ್ರಾಮಕ್ಕೆ ಜಿ.ಪಂ. ಸಿಇಒ ಗಿತ್ತೆ ಮಾಧವವಿಠ್ಠಲರಾವ್ ದಿಢೀರ್ ಭೇಟಿ: ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ
    • ಜನ ಮೆಚ್ಚಿದ ಅಧಿಕಾರಿಗೆ ಜನರಿಂದಲೇ ಅದ್ದೂರಿ ಸೀಮಂತ: ಕೊರಟಗೆರೆಯಲ್ಲಿ ಅಪರೂಪದ ಪ್ರೀತಿ
    • ಸರ್ಕಾರದ ಗ್ಯಾರೆಂಟಿ ಯೋಜನೆಗಳು ಮಹಿಳೆಯರು, ಯುವಕರಿಗೆ ಉಪಯುಕ್ತವಾಗಿದೆ: ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್
    • ತುಮಕೂರು ದಸರಾ ಉತ್ಸವ: ಅಕ್ಟೋಬರ್ 17ರಂದು ದಸರಾ ಕವಿಗೋಷ್ಠಿ – ಸ್ವರಚಿತ ಕವನಗಳ ಆಹ್ವಾನ
    • ಸಾಧಕರಿಗೆ ರಾಜ್ಯ ಮಟ್ಟದ ‘ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ’: ಅರ್ಜಿ ಆಹ್ವಾನ
    • ಬುಕ್ಕಾಪಟ್ಟಣದಲ್ಲಿ ಪ್ರಜಾಸೇವಾ ಆಂದೋಲನ ಸಭೆ: ತಹಶೀಲ್ದಾರ್ ಆನಂದ್ ಕುಮಾರ್ ವಿರುದ್ಧ ಎಂಎಲ್ಸಿ ಬೆಂಬಲಿಗರ ತೀವ್ರ ಆಕ್ರೋಶ
    • ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ಬಡ್ಡಿ ಮನ್ನಾ ಹಾಗೂ ಒಟಿಎಸ್ ಅವಕಾಶಕ್ಕೆ ಸೂರ್ಯಕಾಂತ್ ನಾಗಮಾರಪಳ್ಳಿ ಆಗ್ರಹ
    • ಬೀದರ್ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸಿ: ಮುಖ್ಯಮಂತ್ರಿಗೆ ರೈತ ಸಂಘದ ಆಗ್ರಹ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಭಾರತ ಮಾತಾ ಸೇವಾ ಟ್ರಸ್ಟ್ ವತಿಯಿಂದ ಪರಿಸರ ದಿನಾಚರಣೆ
    ಪಾವಗಡ June 5, 2022

    ಭಾರತ ಮಾತಾ ಸೇವಾ ಟ್ರಸ್ಟ್ ವತಿಯಿಂದ ಪರಿಸರ ದಿನಾಚರಣೆ

    By adminJune 5, 2022No Comments2 Mins Read
    parisara

    ಪಾವಗಡ: ಪರಿಸರ ದಿನಾಚರಣೆಯ ಪ್ರಯುಕ್ತ “ಭಾರತ ಮಾತಾ ಸೇವಾ ಟ್ರಸ್ಟ್” ವತಿಯಿಂದ ಪಾವಗಡ ತಾಲೂಕಿನ ಸಾಸಲಕುಂಟೆ, ಆರ್ಲಹಳ್ಳಿ, ಮಲ್ಲಮ್ಮನಹಳ್ಳಿ, ಬುದಿಬೆಟ್ಟ, ಕೋಟಗುಡ್ಡ, ದೆವಲಕೆರೆ, ಮತ್ತು ಪಾವಗಡ ನಗರದಲ್ಲಿ 100 ನೂರಕ್ಕೂ ಹೆಚ್ಚು  ಜಂಬುನೇರಳೆ, ಸಿಬೆಗಿಡ,  ,ದೊಡ್ಡ ಹಲಸಿನ ಹಣ್ಣಿನ ಗಿಡ, ಬೆಲದಕಾಯಿ ಗಿಡ, ಕಾಡುಬಾದಮಿಗಿಡ, ಹೆಬ್ಬೆವು, ಹುಣಸೆ ಗಿಡ, ಗಸಗಸೆಗಿಡ, ಬೇವಿನಗಿಡ, ತೆಗದಗಿಡ, ಸಿತಾಫಲ, ಸಿಲ್ವರ್ ಇನ್ನೂ ಇತರೆ  ವಿವಿಧ ರೀತಿಯ ಗಿಡಗಳನ್ನು ಮನೆಯ ಹತ್ತಿರ, ತೋಟದಲ್ಲಿ, ಹೊಲದಲ್ಲಿ ನೆಡುವುದರ ಮೂಲಕ ಅರ್ಥ ಪೂರ್ಣವಾಗಿ ಆಚರಿಸಲಾಯಿತು.

    ಕಾರ್ಯಕ್ರಮಕ್ಕೆ ಟ್ರಸ್ಟಿನ ಅಧ್ಯಕ್ಷರಾದ ನಾಗೇಂದ್ರ ಪ್ರತಾಪ್ ಚಾಲನೆ ನೀಡಿ ಮಾತನಾಡಿ, ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜೂನ್ 5 ರಂದು ಜಾಗತಿಕವಾಗಿ ಆಚರಿಸಲಾಗುತ್ತದೆ. ಇದು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅದನ್ನು ಸಂರಕ್ಷಿಸುವ ಅಗತ್ಯತೆಯ ದಿನವಾಗಿದೆ ಎಂದರು.

    ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ಇದು ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಜೀವನದ ಅಸ್ತಿತ್ವಕ್ಕೆ ಕಾರಣವಾಗಿದೆ. ಭೂಮಿಯು ವಿವಿಧ ಜೀವಿಗಳ ನೆಲೆಯಾಗಿದೆ ಮತ್ತು ನಾವೆಲ್ಲರೂ ಆಹಾರ, ಗಾಳಿ, ನೀರು ಮತ್ತು ಇತರ ಅಗತ್ಯಗಳಿಗಾಗಿ ಪರಿಸರದ ಮೇಲೆ ಅವಲಂಬಿತರಾಗಿದ್ದೇವೆ ಎಂದು ತಿಳಿಸಿದರು.

    ಪರಿಸರದ ಮಹತ್ವವನ್ನು ಅರ್ಥಮಾಡಿಕೊಳ್ಳದೆ ಮಾನವರು ಅದನ್ನು ನಾಶಪಡಿಸುತ್ತಿದ್ದಾರೆ. ಈಗ ಮಾನವ ಚಟುವಟಿಕೆಗಳಿಂದಾಗಿ ಗಾಳಿ, ನೀರು, ಮಣ್ಣು ಮುಂತಾದ ಪರಿಸರದ ಪ್ರತಿಯೊಂದು ಅಂಶವೂ ಕಲುಷಿತಗೊಂಡಿದೆ. ನಮ್ಮ ಅಭಿವೃದ್ಧಿಗಾಗಿ ನಾವು ಅತ್ಯಮೂಲ್ಯ ಪರಿಸರವನ್ನು ತ್ಯಾಗ ಮಾಡುತ್ತಿದ್ದೇವೆ. ನಮಗೆ ಅರಿವಿಲ್ಲದೇ ಪರಿಸರವನ್ನು ಹಾಳು ಮಾಡುವ ಮೂಲಕ ಅನೇಕ ರೋಗಗಳು ಮತ್ತು ಪ್ರಕೃತಿ ವಿಕೋಪಗಳನ್ನು ಕರೆಯುತ್ತಿದ್ದೇವೆ ಎಂದರು.

    ಪರಿಸರವನ್ನು ರಕ್ಷಿಸಲು ನಾವು ಗಮನಹರಿಸಬೇಕಾದ ಮುಖ್ಯ ವಿಷಯಗಳು. ಪರಿಸರವನ್ನು ಹೆಚ್ಚು ಆರೋಗ್ಯಕರವಾಗಿಸಲು ನಾವು ಮರಗಳನ್ನು ನೆಡುವುದರ ಮೇಲೆ ಕೇಂದ್ರೀಕರಿಸಬೇಕು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಬೇಕು ಈ ವಿಶ್ವ ಪರಿಸರ ದಿನದ 2022 ರ ಸಂದರ್ಭದಲ್ಲಿ  ನಾವೆಲ್ಲರೂ ಒಟ್ಟಾಗಿ ಭರವಸೆ ನೀಡೋಣ ಪರಿಸರ ಸಂರಕ್ಷಣೆ ಮಾಡುವೆವೆಂದು ಹೇಳಿದರು.

    ಈ ಸಂಧರ್ಭದಲ್ಲಿ ಟ್ರಸ್ಟಿನ ಗೌರವ ಅಧ್ಯಕ್ಷರಾದ ನಾರಾಯಣಮ್ಮದೊಡ್ಡೀರಪ್ಪ, ಅಧ್ಯಕ್ಷರಾದ ನಾಗೇಂದ್ರ ಪ್ರತಾಪ್, ಖಜಾಂಚಿ ಗೋಪಾಲಕೃಷ್ಣ, ಟ್ರಸ್ಟಿಗಳಾದ ದಿನೇಶ್ ಎಸ್, ಸುನೀಲ್ ಪಾಳೇಗಾರ, ಸುರೇಶ್ ಯಾದವ್, ಮಧುಗಿರಿ ನವಿನ್, ಕ್ಯಾತಗಾನಚೆರ್ಲು ಶ್ರೀನಿವಾಸುಲು, ತಿರುಮಣಿ ಅಕ್ಕಲಪ್ಪ, ನಲಿಗಾನಹಳ್ಳಿ ಹನುಮಂತರಾಯಪ್ಪ ಮತ್ತು  ಪರಮೇಶ್, ಲಿಂಗದಹಳ್ಳಿ ಬಾಲರಾಜು, ವಿಶ್ವನಾಥ್, ಪಾವಗಡ ನಗರದ ಶ್ರಿರಾಮ್, ಶ್ರೀ ಕಾಂತ್ ಹೊಸಕೋಟೆ,  ಸಾಸಲಕುಂಟೆ ಗ್ರಾಮದ ಉಪನ್ಯಾಸಕರಾದ ನರಸಿಂಹಮೂರ್ತಿ, ರಾಣಾಪ್ರತಾಪ್, ಮಂಜುಪ್ರತಾಪ್, ಮದನ್ ರೆಡ್ಡಿ,  ಮಲ್ಲಮ್ಮನಹಳ್ಳಿ ರಾಜಪ್ಪ, ದೇವಲಕೆರೆ ಸುದೀಪ್ , ಬುದಿಬೆಟ್ಟ ಪ್ರವೀಣ್ ಯಾದವ್, ಆರ್ಲಹಳ್ಳಿ ಗ್ರಾಮದ ದಾಸಪ್ಪ ಜಿ,  ಇತರರು ಹಾಜರಿದ್ದರು

    ವರದಿ: ನಂದೀಶ್ ನಾಯ್ಕ ಪಿ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

    admin
    • Website

    Related Posts

    ಕಿಲಾರ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ರಾಮಚಂದ್ರ ಹೆಚ್. ಅವಿರೋಧ ಆಯ್ಕೆ

    September 19, 2026

    ಬರದ ತೀವ್ರತೆ: ರೈತರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಲಿ: ಕುರಿಮಲ್ಲಪ್ಪ ಆಗ್ರಹ

    September 17, 2026

    ನಿಡಗಲ್ಲು ಉತ್ಸವಕ್ಕೆ ಅದ್ದೂರಿ ಚಾಲನೆ: ದುರ್ಗವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಒತ್ತಾಯ

    September 8, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಬಾದಲಗಾಂವ ಗ್ರಾಮಕ್ಕೆ ಜಿ.ಪಂ. ಸಿಇಒ ಗಿತ್ತೆ ಮಾಧವವಿಠ್ಠಲರಾವ್ ದಿಢೀರ್ ಭೇಟಿ: ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

    September 21, 2026

    ಔರಾದ್/ಬೀದರ್: ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬಾದಲಗಾಂವ ಗ್ರಾಮಕ್ಕೆ ಸೋಮವಾರ ಮುಂಜಾನೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)…

    ಜನ ಮೆಚ್ಚಿದ ಅಧಿಕಾರಿಗೆ ಜನರಿಂದಲೇ ಅದ್ದೂರಿ ಸೀಮಂತ: ಕೊರಟಗೆರೆಯಲ್ಲಿ ಅಪರೂಪದ ಪ್ರೀತಿ

    September 21, 2026

    ಸರ್ಕಾರದ ಗ್ಯಾರೆಂಟಿ ಯೋಜನೆಗಳು ಮಹಿಳೆಯರು, ಯುವಕರಿಗೆ ಉಪಯುಕ್ತವಾಗಿದೆ: ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್

    September 21, 2026

    ತುಮಕೂರು ದಸರಾ ಉತ್ಸವ: ಅಕ್ಟೋಬರ್ 17ರಂದು ದಸರಾ ಕವಿಗೋಷ್ಠಿ – ಸ್ವರಚಿತ ಕವನಗಳ ಆಹ್ವಾನ

    September 20, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.