ತುಮಕೂರು: ದಲಿತ ಸಂಘಟನೆಗಳ ಒಕ್ಕೂಟ ಮತ್ತು ಭೀಮಬಾಯಿ ಮಹಿಳಾ ಸ್ವಸಹಾಯ ಅರಕೆರೆ, ಕಸಬಾ ಹೋಬಳಿ ಇವರ ಸಹಯೋಗದೊಂದಿಗೆ ಭೀಮಬಾಯಿ ಮಹಿಳಾ ಸ್ವ-ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮ ಮಂಗಳವಾರ ಅರಕೆರೆ ಗ್ರಾಮದ ತೋವಿನಕೆರೆ ರಸ್ತೆ ಬಳಿ ನಡೆಯಿತು.
ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಅವರು ಭೀಮಬಾಯಿ ಮಹಿಳಾ ಸ್ವ-ಸಹಾಯ ಸಂಘವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ರಾಮಯ್ಯ, ಸಾಮಾಜಿಕ ಹೋರಾಟಗಾರ ರವಿ ತೊಂಡಗೆರೆ, ಆರ್ ಪಿ ಐ ಪ್ರಧಾನ ಕಾರ್ಯದರ್ಶಿ ಕೆಂಚರಾಯ ಕಲಾಕಾರ್ ಹುಲಿಕುಂಟೆ ಭಾಗವಹಿಸಿದ್ದರು.
ಆರ್ ಪಿಐ ತುಮಕೂರು ಜಿಲ್ಲಾಧ್ಯಕ್ಷ ನಟರಾಜ್ ಜಿ.ಎಲ್., ಆರ್ ಪಿಐ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ಎನ್.ಮಂಜುಳ ಹಾಗೂ ರೂಪಾ, ನರಸಿಂಹ ಮೂರ್ತಿ, ಶಿವಣ್ಣ, ರವೀಶ್, ಅನಿಲ್ ಪಟೇಲ್, ವನಜಾಕ್ಷಿ ಚಂದ್ರಶೇಖರ್ ಪ್ರೇಮಕುಮಾರಿ ಮೊದಲಾದವರು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.
ನರಸಿಂಹ ಮೂರ್ತಿ ಸಮಾಜ ಸೇವಕರು ಮತ್ತು ಶಿವಣ್ಣ ಹೊಸಹಳ್ಳಿ ಕಾರ್ಯಾಧ್ಯಕ್ಷರು ಮತ್ತು ಗೋಪಾಲ್ ಹಾಗೂ ರವೀಶ್ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ತುಮಕೂರು ಹಾಜರಿದ್ದರು.
ಗ್ರಾಮದ ಭೀಮಬಾಯಿ ಸ್ವ ಸಹಾಯ ಮಹಿಳಾ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಎಲ್ಲಾ ಪದಾಧಿಕಾರಿಗಳು ಇದ್ದು ಕಾರ್ಯಕ್ರಮ ದಲ್ಲಿ ಸಂವಿಧಾನ ಪೀಠಿಕೆ ಯನ್ನು ಓದುವ ಮೂಲಕ ಯಶಸ್ವಿಯಾಗಿ ಕಾರ್ಯಕ್ರಮ ನೆರವೇರಿಸಲಾಯಿತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy