ನಟ ರವಿಚಂದ್ರನ್ 63ನೇ ವರ್ಷದ ಹುಟ್ಟು ಹಬ್ಬವನ್ನು ತಮ್ಮ ಅಭಿಮಾನಿಗಳ ಜೊತೆಗೆ ಇಂದು ಆಚರಿಸಿಕೊಂಡರು. ರವೀಚಂದ್ರನ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಬೆಂಗಳೂರಿನ ರಾಜಾಜಿನಗರದಲ್ಲಿರುವ ಅವರ ಮನೆಯ ಎದುರು ಫ್ಯಾನ್ಸ್ ನೆರೆದಿದ್ದು, ಫ್ಯಾನ್ಸ್ ಜೊತೆ ಕೇಕ್ ಕತ್ತರಿಸಿ ಅವರು ಹುಟ್ಟು ಹಬ್ಬ ಆಚರಿಸಿದರು.
ಇದೇ ವೇಳೆ ಅಭಿಮಾನಿಗಳು ತಂದ ಉಡುಗೊರೆಗಳನ್ನು ಸ್ವೀಕರಿಸಿದ್ದಾರೆ. ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಪ್ರೇಮಲೋಕ 2′ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಪ್ರೇಮಲೋಕ ಸೀಕ್ವೆಲ್ ಗೆ ಟ್ರೇಲರ್ ರೆಡಿ ಇದೆ. ಗಜಿಬಿಜಿ ಆಗೋದು ಬೇಡ ಅಂತ ಇಂದು ಲಾಂಚ್ ಮಾಡಿಲ್ಲ. ಒಂದು ವಾರದಲ್ಲಿ ದೊಡ್ಡ ನ್ಯೂಸ್ ಕೊಡ್ತೀನಿ. ನಾನು ಹಾಗೂ ನನ್ನ ಇಬ್ಬರು ಮಕ್ಕಳು ಈ ಚಿತ್ರದಲ್ಲಿ ಇದ್ದೇವೆ. ಪ್ರೇಮಲೋಕ ಸಿನಿಮಾನ ಅಂದು ಒಂದು ರೂಪಾಯಿ ಕೊಟ್ಟು ನೋಡಿದ್ರು. ಈಗ 2 ಸಾವಿರ ಕೊಟ್ಟು ನೋಡುತ್ತಾರೆ ಎಂದು ರವಿಚಂದ್ರನ್ ಹೇಳಿದರು.
ಇತ್ತೀಚೆಗೆ ಜನರು ಥಿಯೇಟರ್ ಗೆ ಬರುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಳ್ಳೆಯ ಸಿನಿಮಾ ಮಾಡಿದರೆ ಜನ ಥಿಯೇಟರ್ ಗೆ ಬರುತ್ತಾರೆ. ಯಶ್ ತಿಂಗಳಿಗೊಂದು ಸಿನಿಮಾ ಮಾಡೋಕೆ ಆಗಲ್ಲ. ಕೆಜಿಎಫ್ ಗೆ ಫೈಟ್ ಕೊಡೋತರ ಸಿನಿಮಾ ಮಾಡಬೇಕು ಎಂದರಲ್ಲದೇ, ಸಿನಿಮಾ ಮಾಡೋಕೆ ನಾನು ರೆಡಿ ಇದ್ದೇನೆ. ಆದರೆ, ನಮಗೆ ಮಾರುಕಟ್ಟೆ ಇಲ್ಲ. ಸಾವಿರ ಕೋಟಿ ಹಾಕೋರೇ ಇಲ್ಲ ಎಂದು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296