nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬಿಗ್‌ ಬಾಸ್ ಕನ್ನಡ 13:  ದೊಡ್ಮನೆಯಿಂದ  ಓಂ ಪ್ರಕಾಶ್‌ ರಾವ್ ಹೊರಕ್ಕೆ | ಅಸಲಿ ಕಾರಣ ಏನು?

    September 15, 2026

    ಮಳೆ ಕೊರತೆ ವಿಚಾರವನ್ನು ರಾಜಕೀಯಗೊಳಿಸಬೇಡಿ; ರೈತರ ನೆರವಿಗೆ ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್

    September 15, 2026

    ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳು ದೇಶದ ಭದ್ರತೆಗೆ ಅಡಿಪಾಯ: ಡಿಸಿಎಂ ಡಾ. ಜಿ. ಪರಮೇಶ್ವರ್

    September 15, 2026
    Facebook Twitter Instagram
    ಟ್ರೆಂಡಿಂಗ್
    • ಬಿಗ್‌ ಬಾಸ್ ಕನ್ನಡ 13:  ದೊಡ್ಮನೆಯಿಂದ  ಓಂ ಪ್ರಕಾಶ್‌ ರಾವ್ ಹೊರಕ್ಕೆ | ಅಸಲಿ ಕಾರಣ ಏನು?
    • ಮಳೆ ಕೊರತೆ ವಿಚಾರವನ್ನು ರಾಜಕೀಯಗೊಳಿಸಬೇಡಿ; ರೈತರ ನೆರವಿಗೆ ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್
    • ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳು ದೇಶದ ಭದ್ರತೆಗೆ ಅಡಿಪಾಯ: ಡಿಸಿಎಂ ಡಾ. ಜಿ. ಪರಮೇಶ್ವರ್
    • ಮಧುಗಿರಿ ರಾಷ್ಟ್ರೀಯ ಹೆದ್ದಾರಿ–69ರ ಬ್ಲಾಕ್ ಸ್ಪಾಟ್ ನಿರ್ಮೂಲನೆಗೆ ₹29.94 ಕೋಟಿ ಅನುಮೋದನೆ: ಕೇಂದ್ರ ಸಚಿವ ವಿ. ಸೋಮಣ್ಣ ಹರ್ಷ
    • ಬೀದರ್: ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಗಣೇಶ ಪ್ರತಿಷ್ಠಾಪನೆ, ವಿಶೇಷ ಪೂಜೆ
    • ಬೀದರ್: ಮಳೆಯಿಲ್ಲದೆ ಒಣಗಿದ ಬೆಳೆ; ಟ್ರ್ಯಾಕ್ಟರ್‌ ಹರಿಸಿ ಸೋಯಾಬೀನ್‌ ನಾಶಪಡಿಸಿದ ರೈತ!
    • ಕಲಬುರಗಿ: ಗಣೇಶನ ಮೂರ್ತಿ ತರಲು ತೆರಳುತ್ತಿದ್ದಾಗ ಬೈಕ್ ಅಪಘಾತ:  ಸವಾರ ದುರ್ಮರಣ, ಮತ್ತೊಬ್ಬನ ಸ್ಥಿತಿ ಗಂಭೀರ
    • ಕೊನೆಗೂ ನನಸಾಯಿತು ಮಾಜಿ ಸಿಎಂ ಸಿದ್ದರಾಮಯ್ಯ ಕನಸು: ಮೈಸೂರಿನಲ್ಲಿ ಅತ್ಯಂತ ಸರಳವಾಗಿ ನೆರವೇರಿತು ಗೃಹಪ್ರವೇಶ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹೆಚ್ಚಿನ ಬಡ್ಡಿಯಾಸೆ ತೋರಿಸಿ ಬಡವರನ್ನು ವಂಚಿಸುವವರ ಸಂರಕ್ಷಣೆಗೆ ಕಾನೂನು : ವಿಧೇಯಕ ಅಂಗೀಕಾರ
    ರಾಜ್ಯ ಸುದ್ದಿ December 17, 2024

    ಹೆಚ್ಚಿನ ಬಡ್ಡಿಯಾಸೆ ತೋರಿಸಿ ಬಡವರನ್ನು ವಂಚಿಸುವವರ ಸಂರಕ್ಷಣೆಗೆ ಕಾನೂನು : ವಿಧೇಯಕ ಅಂಗೀಕಾರ

    By adminDecember 17, 2024No Comments2 Mins Read
    vidhana sabha

    ಬೆಳಗಾವಿ ಸುವರ್ಣಸೌಧ: ಬಡವರನ್ನು ಅತಿ ಹೆಚ್ಚಿನ ಬಡ್ಡಿ ನೀಡುವ ಆಸೆಯೊಡ್ಡಿ, ಠೇವಣಿ ಪಡೆದು, ನಂತರ ವಂಚಿಸುವ ಯತ್ನವನ್ನು ತಡೆಗಟ್ಟುವುದು ಹಾಗೂ ವಂಚಕರನ್ನು ಕಠಿಣವಾಗಿ ಶಿಕ್ಷಿಸುವ ನಿಟ್ಟಿನಲ್ಲಿ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ವಿಧಾನಸಭೆಯಲ್ಲಿ ಸೋಮವಾರ 2024 ನೇ ಸಾಲಿನ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ವಿಧೇಯಕವನ್ನು ಮಂಡಿಸಿದರು. ಬಡವರು, ಮಧ್ಯವರ್ಗದವರು, ಮತ್ತಿತರರು ಹಣಕಾಸು ವ್ಯವಹಾರಗಳಲ್ಲಿ ಆಸೆಗೆ ಬಲಿಯಾಗಿ ವಂಚನೆಗೆ ಒಳಗಾಗುವುದನ್ನು ತಡೆಗಟ್ಟಲು ಹಾಗೂ ವಂಚಕರನ್ನು ಶಿಕ್ಷಿಸುವ ನಿಟ್ಟಿನಲ್ಲಿ ವಿಧೇಯಕ ತರಲಾಗುತ್ತಿದೆ. ಈ ದಿಸೆಯಲ್ಲಿ ಆಯಾ ವಿಭಾಗದ ಉಪವಿಭಾಗಾಧಿಕಾರಿಗಳು ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು, ಕಾನೂನು ಕ್ರಮ ಕೈಗೊಳ್ಳಲು ಹೆಚ್ಚಿನ ಅಧಿಕಾರ ನೀಡಲಾಗುತ್ತಿದೆ ಎಂದರು.

    ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಮಾತನಾಡಿ, 2003–04 ರಲ್ಲಿ ವಿನಿವಿಂಕ್ ಶಾಸ್ತ್ರಿ ಕೋಟ್ಯಾಂತರ ರೂ. ಗಳ ಠೇವಣಿ ಸಂಗ್ರಹಿಸಿ, ಜನರು ವಂಚನೆಗೊಳಗಾದಂತಹ ಪ್ರಕರಣದಲ್ಲಿ ಅನೇಕ ಅಮಾಯಕರು ಠೇವಣಿದಾರರು ವಂಚನೆಗೊಳಗಾಗಿದ್ದರು. ಹೀಗಾಗಿ 2004 ರಲ್ಲಿಯೇ ಇದರ ತಡೆಗೆ ಕಾನೂನನ್ನು ಜಾರಿಗೆ ತರಲಾಗಿತ್ತು. ಆದರೆ ಪಿರಮಿಡ್ ಸ್ಕೀಂ, ಸ್ಪಾಂಜ್ ಸ್ಕೀಮ್ ಮುಂತಾದ ವಂಚನೆ ಪ್ರಕರಣಗಳು ಕಾಲ ಬದಲಾದ ಹಾಗೆ ವಂಚನೆ ಸ್ವರೂಪ ಹಾಗೂ ವಂಚನೆಯ ವಿಧಾನ ಬದಲಾಗುತ್ತಿದ್ದು, ಕಾನೂನಿನಲ್ಲಿನ ಲೋಪಗಳನ್ನು ಸರಿಪಡಿಸಿ, ವಂಚಕರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಕಾನೂನಿನಲ್ಲಿಯೂ ತಿದ್ದುಪಡಿ ತರಲಾಗುತ್ತಿದೆ. ಐಎಂಎಎ ನಂತಹ ಪ್ರಕರಣಗಳಲ್ಲಿ ವಂಚಕರನ್ನು ಹಿಡಿದು, ಪ್ರಕರಣಗಳು ಸೆಟಲ್ಮೆಂಟ್ ಆಗ್ತಾ ಇದೆಯೇ ಹೊರತು, ಬಾಧಿತರಿಗೆ ಸಮರ್ಪಕ ನ್ಯಾಯ ಒದಗಿವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಬಾಧಿತರಿಗೆ ಇನ್ನಷ್ಟು ಅನುಕೂಲ ತರಲು, ವಂಚನೆ ಪ್ರಕರಣಗಳಲ್ಲಿನ ಅನುಷ್ಠಾನಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಿ, ನಷ್ಟಕ್ಕೆ ಒಳಗಾದ ಠೇವಣಿದಾರರಿಗೆ ಹಣ ವಾಪಸ್ ಕೊಡಿಸಲು ತಿದ್ದುಪಡಿ ತರಬೇಕಿದೆ. ಹೌಸಿಂಗ್ ಲೋನ್ಸ್, ಗೋಲ್ಡ್ ಲೋನ್ಸ್ ಮುಂತಾದ ಹೆಸರಿನಲ್ಲಿ ಕೆಲವೆಡೆ ವಂಚನೆ ನಡೆಯುವುದು ಕೂಡ ಗಮನಕ್ಕೆ ಬಂದಿದೆ. ಹೀಗಾಗಿ ಬಡವರು ವಂಚನೆಗೆ ಒಳಗಾಗುವುದನ್ನು ತಡೆಯಲು ಸಕ್ಷಮ ಪ್ರಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದು, ಠೇವಣಿಗಳ ಹೊಣೆ ನಿರ್ಧರಣೆ, ಹಣಕಾಸು ಸಂಸ್ಥೆಯಿAದ ವಂಚನೆಯ ಉದ್ದೇಶವನ್ನು ತಪ್ಪಿಸುವುದು, ವಿಶೇಷ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸುವುದು, ವಶ ಪಡೆದ ಸ್ವತ್ತುಗಳ ನಗದು ಪರಿವರ್ತನೆ ಮತ್ತು ಠೇವಣಿದಾರರಿಗೆ ಹಣ ಸಂದಾಯಕ್ಕೆ ವಿಶೇಷ ನ್ಯಾಯಾಲಯಕ್ಕೆ ಅಧಿಕಾರಿ ನೀಡುವುದು, ವಂಚಕರ ಸ್ವತ್ತಿನ ಜಪ್ತಿ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ವಿಧೇಯಕದಲ್ಲಿ ವಿಶೇಷ ಒತ್ತು ನೀಡಲಾಗಿದೆ ಎಂದರು.

    ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಠೇವಣಿದಾರರ ಸಂರಕ್ಷಣೆಗಾಗಿ ಮಂಡಿಸಲಾಗಿರುವ ತಿದ್ದುಪಡಿ ವಿಧೇಯಕವನ್ನು ಸ್ವಾಗತಿಸುತ್ತೇವೆ. ವಂಚನೆ ಪ್ರಕರಣದಲ್ಲಿ ವಶಕ್ಕೆ ಪಡೆದ ಸಲಕರಣೆಗಳು, ಸ್ವತ್ತು, ಉಪಕರಣಗಳನ್ನು ವಿಲೇವಾರಿ ಮಾಡುವ ವಿಧಾನ ಸರಳೀಕರಣ ಆಗಬೇಕು. ಈ ರೀತಿ ವಂಚಿಸುವವರ ಮೇಲೆ ಗೂಡಾ ಕಾಯ್ದೆ ಹಾಕಬೇಕು ಎಂದರು. ಶಾಸಕರುಗಳಾದ ಅಶ್ವತ್ಥ ನಾರಾಯಣ, ಆರಗ ಜ್ಞಾನೇಂದ್ರ, ಸಿದ್ದು ಸವದಿ, ನರೇಂದ್ರಸ್ವಾಮಿ ಅವರು ಕೂಡ ದನಿಗೂಡಿಸಿ, ಕೆಲವು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಣ ಸಂಗ್ರಹಣೆ ಹೆಸರಿನಲ್ಲಿ ನಡೆಯುವ ವಂಚನೆಗಳನ್ನು ತಡೆಗಟ್ಟಬೇಕು, ಕಾನೂನು ಇನ್ನಷ್ಟು ಬಲಪಡಿಸಿ ವಂಚನೆ ತಡೆಗಟ್ಟಬೇಕು ಎಂದು ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ತಿದ್ದುಪಡಿ ತಂದು ಕಾನೂನು ಬಿಗಿಗೊಳಿಸಲಾಗುವುದು ಎಂದು ಸಚಿವ ಕೃಷ್ಣ ಭೈರೇಗೌಡ ಭರವಸೆ ನೀಡಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

     

    admin
    • Website

    Related Posts

    ಬಿಗ್‌ ಬಾಸ್ ಕನ್ನಡ 13:  ದೊಡ್ಮನೆಯಿಂದ  ಓಂ ಪ್ರಕಾಶ್‌ ರಾವ್ ಹೊರಕ್ಕೆ | ಅಸಲಿ ಕಾರಣ ಏನು?

    September 15, 2026

    ಮಳೆ ಕೊರತೆ ವಿಚಾರವನ್ನು ರಾಜಕೀಯಗೊಳಿಸಬೇಡಿ; ರೈತರ ನೆರವಿಗೆ ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್

    September 15, 2026

    ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳು ದೇಶದ ಭದ್ರತೆಗೆ ಅಡಿಪಾಯ: ಡಿಸಿಎಂ ಡಾ. ಜಿ. ಪರಮೇಶ್ವರ್

    September 15, 2026

    Comments are closed.

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಬಿಗ್‌ ಬಾಸ್ ಕನ್ನಡ 13:  ದೊಡ್ಮನೆಯಿಂದ  ಓಂ ಪ್ರಕಾಶ್‌ ರಾವ್ ಹೊರಕ್ಕೆ | ಅಸಲಿ ಕಾರಣ ಏನು?

    September 15, 2026

    ಬಿಗ್‌ ಬಾಸ್‌ ಕನ್ನಡ ಸೀಸನ್‌ 13 ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ನಟ ಹಾಗೂ ನಿರ್ದೇಶಕ ಓಂ ಪ್ರಕಾಶ್‌ ರಾವ್…

    ಮಳೆ ಕೊರತೆ ವಿಚಾರವನ್ನು ರಾಜಕೀಯಗೊಳಿಸಬೇಡಿ; ರೈತರ ನೆರವಿಗೆ ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್

    September 15, 2026

    ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳು ದೇಶದ ಭದ್ರತೆಗೆ ಅಡಿಪಾಯ: ಡಿಸಿಎಂ ಡಾ. ಜಿ. ಪರಮೇಶ್ವರ್

    September 15, 2026

    ಮಧುಗಿರಿ ರಾಷ್ಟ್ರೀಯ ಹೆದ್ದಾರಿ–69ರ ಬ್ಲಾಕ್ ಸ್ಪಾಟ್ ನಿರ್ಮೂಲನೆಗೆ ₹29.94 ಕೋಟಿ ಅನುಮೋದನೆ: ಕೇಂದ್ರ ಸಚಿವ ವಿ. ಸೋಮಣ್ಣ ಹರ್ಷ

    September 15, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.