ದಾವಣಗೆರೆ: ವಿಶೇಷ ಚಿತ್ರಕಲೆ, ಮಕ್ಕಳಿಗೆ ಬಣ್ಣದ ಕಿರೀಟ, ಹೂವು ನೀಡುವುದು, ಪಠ್ಯಪುಸ್ತಕ ವಿತರಣೆ ಹಾಗೂ ಸಿಹಿ ಊಟದ ವ್ಯವಸ್ಥೆ ಮಾಡುವುದರ ಮೂಲಕ ಹಬ್ಬದ ರೀತಿಯಲ್ಲಿ ಶಾಲಾ ಪ್ರಾರಂಭೋತ್ಸವ ಚನ್ನಗಿರಿ ತಾಲೂಕಿನಲ್ಲಿ ಮಾಡಿದ್ದೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ ಹೇಳಿದರು.
ಸಂತೆಬೆನ್ನೂರು ಗ್ರಾಮದಲ್ಲಿ ಗುರುವಾರ ಕೆಪಿಎಸ್ ಶಾಲೆಯ ಪ್ರಾಥಮಿಕ ವಿಭಾಗದ ಶಾಲಾ ಮಕ್ಕಳನ್ನು ವಿಶೇಷವಾಗಿ ಸ್ವಾಗತಿಸಿ ಮಾತನಾಡಿದರು .
ಪೋಷಕರಿಗೆ ಮಕ್ಕಳನ್ನು ಕಳಿಸಿಕೊಡಿ ಎಂದು ಆಹ್ವಾನ ಪತ್ರ ಬರೆದಿದ್ದೆವು. ಅದೇ ರೀತಿ ಮಕ್ಕಳ ಶಾಲೆ ಪ್ರಾರಂಭೋತ್ಸವ ದಿನ ಮಕ್ಕಳು ಸಂಭ್ರಮದಿಂದ ಬಂದಿದ್ದಾರೆ. ಹಿಂದಿನಿಂದಲೇ ಇಲಾಖೆ ಆದೇಶ ಪ್ರಕಾರ ಸೇತುಬಂಧ ಪ್ರಾರಂಭಿಸಿದ್ದೇವೆ. ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಹಳೆಯ ವಿದ್ಯಾರ್ಥಿಗಳು ಪೋಷಕರು ಶಾಲಾಭಿವೃದ್ಧಿ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ಸಹಕಾರ ಕೋರಲಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ರೇಣುಕಾ ಮೂರ್ತಪ್ಪ ಮಾತನಾಡಿ, ಸಂತೆವೆನ್ನೂರು ಹೋಬಳಿಯಲ್ಲಿ ಕೆಪಿಎಸ್ ಶಾಲೆ ಕೇಂದ್ರಬಿಂದುವಾಗಿದೆ ಆದ್ದರಿಂದ ಹೆಚ್ಚುವರಿ ಆಂಗ್ಲ ಮಾಧ್ಯಮ ಶಾಲೆಯನ್ನು ತೆರೆಯಲು ಶಿಕ್ಷಣ ಇಲಾಖೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು
ಈ ವೇಳೆ ಎಸ್ ಡಿಎಂಸಿ ಅಧ್ಯಕ್ಷ ಡಿವಿಕಿರಣ್ ಮುಖ್ಯ ಶಿಕ್ಷಕ ಎಚ್.ಎನ್. ರವಿ ಪಾಪಯ್ಯ ಸಿಆರ್ ಪಿ ಕುಸುಮ, ಶಂಕರ್ ಗೌಡ, ಸಂತೋಷ್, ಎಂ ಬಿ ನಾಗರಾಜ್ ಕಾಕನೂರು, ಉಜ್ಜನಪ್ಪ, ವೀರಭದ್ರಪ್ಪ, ಮಂಜುನಾಥ್ ಹಾಗೂ ಶಿಕ್ಷಕರ ವೃಂದ ಉಪಸ್ಥಿತರಿದ್ದರು.
ವರದಿ: ಕುಳೇನೂರು ಅರುಣ್ ಕುಮಾರ್, ಚನ್ನಗಿರಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW