nammatumakuru

    Subscribe to Updates

    Get the latest creative news from FooBar about art, design and business.

    What's Hot

    ಏಪ್ರಿಲ್ 1ರಿಂದ ಬೇಸಿಗೆ ವಿಶೇಷ ಕಲಿಕಾ ಶಿಬಿರ: 2ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ

    March 23, 2026

    ಹೆಚ್ಚುತ್ತಿದೆ ಗ್ಯಾಸ್ ಸಿಲಿಂಡರ್ ಕಳ್ಳತನ ಪ್ರಕರಣ: ಶಾಲೆಗೆ ನುಗ್ಗಿ 6 ಸಿಲಿಂಡರ್ ದೋಚಿದ ಕಳ್ಳರು!

    March 23, 2026

    ಐಪಿಎಲ್ 2026: ತುಮಕೂರು, ಮೈಸೂರು ಸೇರಿದಂತೆ ದೇಶದ 15 ನಗರಗಳಲ್ಲಿ ‘ಫ್ಯಾನ್ ಪಾರ್ಕ್’ ಘೋಷಿಸಿದ ಬಿಸಿಸಿಐ!

    March 23, 2026
    Facebook Twitter Instagram
    ಟ್ರೆಂಡಿಂಗ್
    • ಏಪ್ರಿಲ್ 1ರಿಂದ ಬೇಸಿಗೆ ವಿಶೇಷ ಕಲಿಕಾ ಶಿಬಿರ: 2ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ
    • ಹೆಚ್ಚುತ್ತಿದೆ ಗ್ಯಾಸ್ ಸಿಲಿಂಡರ್ ಕಳ್ಳತನ ಪ್ರಕರಣ: ಶಾಲೆಗೆ ನುಗ್ಗಿ 6 ಸಿಲಿಂಡರ್ ದೋಚಿದ ಕಳ್ಳರು!
    • ಐಪಿಎಲ್ 2026: ತುಮಕೂರು, ಮೈಸೂರು ಸೇರಿದಂತೆ ದೇಶದ 15 ನಗರಗಳಲ್ಲಿ ‘ಫ್ಯಾನ್ ಪಾರ್ಕ್’ ಘೋಷಿಸಿದ ಬಿಸಿಸಿಐ!
    • ಜೂನ್ 21ರಂದು ಸಿದ್ದರಬೆಟ್ಟದಲ್ಲಿ ಉಚಿತ ಸಾಮೂಹಿಕ ಆದರ್ಶ ವಿವಾಹ: ನೋಂದಾಯಿಸುವುದು ಹೇಗೆ?
    • ಜೆಡಿಎಸ್ ಬಲಪಡಿಸಲು ಒಗ್ಗಟ್ಟಿನಿಂದ ಕೆಲಸ ಮಾಡಿ: ಕಾರ್ಯಕರ್ತರಿಗೆ ಕೆ.ಎಂ.ಕೃಷ್ಣನಾಯಕ ಕರೆ
    • ಹಿಂದೆ ಜಾರಿಯಲ್ಲಿದ್ದ ಮೀಸಲಾತಿ ಮುಂದುವರಿಸಿ: ಮಾ. 24 ರಂದು ಬೆಂಗಳೂರು ಚಲೋ: ತಿಪ್ಪೇಸ್ವಾಮಿ
    • ಕಸಾಪ ಭವನಕ್ಕೆ ಜಾಗ ನೀಡಿ: ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಮನವಿ
    • ಸಚಿವ ಶಿವರಾಜ್ ತಂಗಡಗಿಗೆ ದಿಢೀರ್ ಎದೆನೋವು: ತುಮಕೂರಿನ ಆಸ್ಪತ್ರೆಗೆ ದಾಖಲು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ!
    ರಾಜ್ಯ ಸುದ್ದಿ March 3, 2022

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ!

    By adminMarch 3, 2022No Comments4 Mins Read
    bommai

    ಬಜೆಟ್ ಎಂದಾಕ್ಷಣ ಜನ ಸಾಮಾನ್ಯರಿಂದ ಹಿಡಿದು ಉದ್ಯಮಿಗಳ ತನಕ ಹತ್ತು ಹಲವು ನಿರೀಕ್ಷೆಗಳು ಗರಿಗೆದ ರುವುದು ಸಹಜ. ಇಂಥದ್ದೆ ನಿರೀಕ್ಷೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಲಿರುವ ಬಜೆಟ್ ಮೇಲೂ ಇದೆ.

     ಮೊದಲಿಂದಲೂ ರೈತ ಸಮುದಾಯಕ್ಕೆ ಬಜೆಟ್​ನಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಬಂಗಾರಪ್ಪ, ಎಸ್.ಎಂ.ಕೃಷ್ಣ ಮತ್ತು ಸಿದ್ದರಾಮಯ್ಯ, ಜೆಡಿಎಸ್ ಅಧಿಕಾರದಲ್ಲಿದ್ದಾಗ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ ವಿಶೇಷ ಕಾಳಜಿ ವಹಿಸಿದ್ದಾರೆ. ಉಚಿತ ವಿದ್ಯುತ್, ಗ್ರಾಮೀಣ ಕೃಪಾಂಕ, ಸಬ್ಸಿಡಿ ನೀಡುವ ಕಾರ್ಯಕ್ರಮ, ಸಾಲಮನ್ನಾ ಯೋಜನೆಗಳು ಆಯಾ ಕಾಲಘಟ್ಟಕ್ಕೆ ಸರ್ಕಾರದ ಜನಪ್ರಿಯತೆ ಹೆಚ್ಚಿಸಲು ಕಾರಣವಾಗಿವೆ. ವಿದ್ಯಾರ್ಥಿಗಳಿಗಾಗಿ ತಂದ ಯೋಜನೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಸೈಕಲ್, ಲ್ಯಾಪ್​ಟಾಪ್ ಉಚಿತ ವಿತರಣೆ ಯೋಜನೆಗಳು ಪ್ರಮುಖ ವಾದವು. ತಳ ಸಮುದಾಯಗಳು, ಹಿಂದುಳಿದ ವರ್ಗಗಳು, ಎಸ್ಸಿ,ಎಸ್ಟಿ, ನಾನಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿಯೂ ಹಲವು ಯೋಜನೆಗಳು ರೂಪು ಗೊಂಡಿದ್ದು ಬಜೆಟ್​ನಲ್ಲಿ ಘೋಷಣೆ ಮಾಡಿ, ಅದನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡ ನಿದರ್ಶನಗಳು ಇವೆ. ಆಯಾ ಸಂದ ರ್ಭಕ್ಕೆ ಎಲ್ಲ ವರ್ಗಗಳ ಬೇಡಿಕೆ ಹೆಚ್ಚುತ್ತಲೇ ಇದೆ. ಬಜೆಟ್​ನಲ್ಲಿ ಯಾವ ವರ್ಗದ ನಿರೀಕ್ಷೆಗಳು ಏನೇನು ಎನ್ನುವ ಚಿತ್ರಣ ಇಲ್ಲಿದೆ.


    Provided by
    Provided by

     ರೈತ ಸಮುದಾಯ:

    ರಾಗಿ, ಭತ್ತ, ಜೋಳ, ಕಬ್ಬು, ತೊಗರಿ, ಕೊಬ್ಬರಿ ಸೇರಿ ಎಲ್ಲ ಬೆಳೆಗಳ ಬೆಂಬಲ ಬೆಲೆ ಹೆಚ್ಚಳ ಮಾಡಬೇಕು. ಖರೀದಿ ಆವರ್ತ ನಿಧಿ ಮೊತ್ತವನ್ನು ಸಾವಿರ ಕೋಟಿ ರೂ.ಗೆ ಏರಿಕೆ ಮಾಡಬೇಕು. ರೈತ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ನಿಖರ ಬೆಲೆ ಸಿಗುವ ವ್ಯವಸ್ಥೆ ಆಗಬೇಕು. ಕೃಷಿ ಸಾಮಗ್ರಿ ಮತ್ತು ಯಂತ್ರೋಪಕರಣಗಳಿಗೆ ನೀಡುತ್ತಿರುವ ಸಬ್ಸಿಡಿ ಪ್ರಮಾಣವನ್ನು ಹೆಚ್ಚಳ ಮಾಡಿ ಹೆಚ್ಚು ಜನರಿಗೆ ತಲುಪುವಂತೆ ಮಾಡಬೇಕು. ಉಚಿತವಾಗಿ ಬಿತ್ತನೆ ಬೀಜ ನೀಡಬೇಕು. ರಸಗೊಬ್ಬರಕ್ಕೆ ಹೆಚ್ಚು ಸಬ್ಸಿಡಿ ನೀಡಬೇಕು. ರೈತರ ಪಹಣಿ, ಪಟ್ಟಾ ಸೇರಿ ಎಲ್ಲ ದಾಖಲೆಗಳು ಸರಳವಾಗಿ ಮನೆ ಬಾಗಿಲಿಗೆ ಸಿಗುವ ವ್ಯವಸ್ಥೆ ಮಾಡಬೇಕು. ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಬೇಕು.

     ವಿದ್ಯಾರ್ಥಿಗಳ ನಿರೀಕ್ಷೆಗಳೇನು?:

    ಬೊಮ್ಮಾಯಿ ಮುಖ್ಯ ಮಂತ್ರಿ ಗದ್ದುಗೆ ಅಲಂಕರಿಸುತ್ತಿದ್ದಂತೆ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಘೋಷಣೆ ಮಾಡಿದ ಯೋಜನೆಗೆ ಜನಮನ್ನಣೆ ಸಿಕ್ಕಿದೆ. ಈ ಯೋಜನೆಯಲ್ಲಿ ನೀಡುತ್ತಿರುವ ಪ್ರೋತ್ಸಾಹಧನ ದುಪ್ಪಟ್ಟು ಮಾಡಬೇಕು. ಕೆಲ ವರ್ಗಗಳಿಗೆ ಮಾತ್ರವೇ ಸೀಮಿತ ಮಾಡಿರುವ ಯೋಜನೆಗಳನ್ನು ಎಲ್ಲ ವಿದ್ಯಾರ್ಥಿ ಗಳಿಗೂ ವಿಸ್ತರಣೆ ಮಾಡಬೇಕು. ಉನ್ನತ ಶಿಕ್ಷಣಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು. ಶಾಲಾ ಕಾಲೇಜುಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಿ, ಲೈಬ್ರರಿ, ಕಂಪ್ಯೂಟರ್ ಸಹಿತ ಎಲ್ಲ ರೀತಿಯ ವ್ಯವಸ್ಥೆ ಮಾಡಬೇಕು. ಬೋಧನಾ ಮಟ್ಟ ಹೆಚ್ಚಿಸಲು ಕ್ರಮ ವಹಿಸಬೇಕು.

     ಎಸ್ಸಿಎಸ್ಟಿ ಸಮುದಾಯದ ಆದ್ಯತೆ:

     ಜನಸಂಖ್ಯೆ ಆಧಾರದ ಮೇಲೆ ಬಜೆಟ್ ಅನುದಾನ ನಿಗಧಿಯಾಗಬೇಕು ಎನ್ನುವುದನ್ನು ಕಾರ್ಯಗತ ಮಾಡಬೇಕು. ಎಲ್ಲ ನಿಗಮಗಳಿಗೂ ಹೆಚ್ಚಿನ ಅನುದಾನ ನೀಡಬೇಕು. ಜಮೀನು ಖರೀದಿಗಾಗಿ ನೀಡುವ ಮೊತ್ತ ಹೆಚ್ಚಿಸಿ, ಹೆಚ್ಚು ಜನ ಫಲಾನುಭವಿಗಳಿಗೆ ಸಿಗುವಂತೆ ಮಾಡಬೇಕು. ವಸತಿ ಹೀನರಿಗೆ ಉಚಿತವಾಗಿ ಮನೆ ಕೊಡಬೇಕು. ನಿಗಮ ಮಂಡಳಿಗಳಲ್ಲಿ ಸಾಲ ಸೌಲಭ್ಯ ಹೆಚ್ಚಿಸಬೇಕು. ಕಾಮಗಾರಿಗಳಿಗಾಗಿ ಗುತ್ತಿಗೆಯಲ್ಲಿ ತಂದಿರುವ ಮೀಸಲು ವ್ಯವಸ್ಥೆ ಸಮರ್ಪಕ ಅನುಷ್ಠಾನಕ್ಕೆ ಕ್ರಮ ವಹಿಸಬೇಕು.

     ತಳ ಸಮುದಾಯಗಳು ನಿರೀಕ್ಷೆ:

     ಚುನಾವಣೆ ಸಂದರ್ಭದಲ್ಲಿ ಮಾತ್ರವೇ ನೆನಪಿಗೆ ಬರುವ ತಳ ಸಮುದಾಯಗಳ ಅಭಿವೃದ್ಧಿಗೆ ಯಾವ ಸರ್ಕಾರಗಳು ಹೆಚ್ಚಿನ ನೆರವು ನೀಡುತ್ತಿಲ್ಲ ಎನ್ನುವ ನೋವು ಆ ವರ್ಗಗಳಲ್ಲಿದೆ. ಕೆಲ ಸಮುದಾಯದ ಅಭಿವೃದ್ಧಿಗಾಗಿ ಪ್ರಾರಂಭ ಮಾಡಿರುವ ನಿಗಮ ಮಂಡಳಿಗಳು ಅನುದಾನವಿಲ್ಲದೆ ಸೊರಗುತ್ತಿವೆ. ಈ ಬಜೆಟ್​ನಲ್ಲಿ ಹೆಚ್ಚಿನ ನೆರವು ನೀಡಲು ಮುಂದಾಗಬೇಕು. ಈಗಾಗಲೆ ಹಲವು ಯೋಜನೆಗಳಲ್ಲಿ ನೀಡಿರುವ ಸಾಲ ಸಂರ್ಪರ್ಣ ಮನ್ನಾ ಮಾಡಬೇಕು.

     ಉದ್ಯಮಿಗಳ ಬೇಡಿಕೆ:

    ಕೈಗಾರಿಕೆ, ಸಾರಿಗೆ ಸೇರಿ ನಾನಾ ಉದ್ಯಮಗಳು ಕೋವಿಡ್ ಸಂದರ್ಭದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಆದ್ದರಿಂದ ಆ ಸಂದರ್ಭದಲ್ಲಿ ಘೋಷಣೆ ಮಾಡಲಾಗಿದ್ದ ರಿಯಾಯಿತಿಗಳನ್ನು ಇನ್ನೊಂದು ವರ್ಷ ಮುಂದುವರಿಸಬೇಕು. ನಷ್ಟದ ಕಾರಣಕ್ಕೆ ಬಹಳ ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು. ಹೊಸ ಸಾಲ ನೀತಿ ಸರಳೀಕರಣ ಮಾಡಬೇಕು. ಜಿಎಸ್​ಟಿ ಬಂದ ಮೇಲೆ ಹಲವು ಸಮಸ್ಯೆಗಳು ಎದುರಾಗಿವೆ. ತೆರಿಗೆ ಹೆಚ್ಚಳವಾಗಿದ್ದು, ಕೈಗಾರಿಕೆ ನಡೆಸುವುದು ಕಷ್ಟವಾಗಿದೆ. ಅದಕ್ಕೆ ಪರಿಹಾರ ಮಾರ್ಗಗಳನ್ನು ಕಂಡು ಹಿಡಿದು, ತೆರಿಗೆ ಹೊರೆಯನ್ನು ಕೂಡಲೆ ಇಳಿಸಬೇಕು.

     ಕೂಲಿ ಕಾರ್ವಿುಕರ ಬೇಡಿಕೆ:

     ಕೂಲಿ ಕಾರ್ವಿುಕರಿಗಾಗಿ ತಂದ ಯೋಜನೆಗಳು ಹೆಚ್ಚು ಜನರನ್ನು ಮುಟ್ಟಲು ಸಾಧ್ಯವಾಗಿಲ್ಲ. ಅದಕ್ಕಾಗಿ ಬಜೆಟ್​ನಲ್ಲಿ ಹೆಚ್ಚು ಅನುದಾನವಿಟ್ಟು ಶ್ರಮಿಕ ವರ್ಗಕ್ಕೆ ಸಿಗುವಂತೆ ನೋಡಿಕೊಳ್ಳಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗುವಂತೆ ಮಾಡಬೇಕು. ಕೂಲಿ ಕಾರ್ವಿುಕರಿಗಾಗಿ ಪ್ರತ್ಯೇಕ ವಸತಿ ಯೋಜನೆ ರೂಪಿಸಿ ಎಲ್ಲರಿಗೂ ಮನೆ ಸಿಗುವಂತೆ ಮಾಡಬೇಕು. ಸರ್ಕಾರವೇ ಪ್ರೀಮಿಯಂ ಕಟ್ಟುವ ಉಚಿತ ಜೀವ ವಿಮೆ ಯೋಜನೆ ತರಬೇಕು.

     ಬಜೆಟ್ ಗಾತ್ರ 2.60 ಲಕ್ಷ ಕೋಟಿ ರೂ?

     ರಾಜ್ಯದ ಬಜೆಟ್ ಗಾತ್ರ ಈ ಬಾರಿ 2.60 ಲಕ್ಷ ಕೋಟಿ ರೂ. ದಾಟಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಬಜೆಟ್ ಅಂತಿಮ ಹಂತದ ಕಸರತ್ತಿನಲ್ಲಿ ತೊಡಗಿರುವ ಆರ್ಥಿಕ ಇಲಾಖೆ, ಕಳೆದ ಬಾರಿ ಬಜೆಟ್ 2.46 ಲಕ್ಷ ಕೋಟಿ ರೂ. ಇತ್ತು. ಈ ಬಾರಿ ಕನಿಷ್ಠ 15 ಸಾವಿರ ಕೋಟಿ ರೂ.ಹೆಚ್ಚಾಗಬಹುದು ಎಂದು ಖಚಿತಪಡಿಸಿದೆ. ಕಳೆದ ಬಾರಿ ಕೋವಿಡ್ ಸಂಕಷ್ಟವಿದ್ದರೂ ಬಜೆಟ್ ಗಾತ್ರ ಕಡಿಮೆ ಆಗಿರಲಿಲ್ಲ. ಈಗ ಕೋವಿಡ್ ಸೋಂಕಿನ ಹಾವಳಿ ಕಡಿಮೆಯಾಗಿದ್ದರಿಂದ ಎಲ್ಲ ಕ್ಷೇತ್ರಗಳ ವ್ಯಾಪಾರ ವಹಿವಾಟು ಸಹಜ ಸ್ಥಿತಿಗೆ ಬಂದಿದೆ. ಇದರಿಂದ ರಾಜ್ಯದ ಆದಾಯವೂ ಹೆಚ್ಚಳವಾಗುತ್ತಿದೆ. ಆದ್ದರಿಂದ ಗಾತ್ರ ಹಿಗ್ಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

     ಮುಂದುವರಿದ ಕಸರತ್ತು:

    ಬಜೆಟ್​ಗೆ ಅಂತಿಮ ರೂಪ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಆರ್ಥಿಕ ಇಲಾಖೆಯ ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದು, ಹಲವು ಸುತ್ತಿನ ಸಭೆಗಳನ್ನು ಮುಗಿಸಿದ್ದಾರೆ. ಯೋಜನೆಗಳ ಘೋಷಣೆ ಬಗ್ಗೆ ಮುಖ್ಯಮಂತ್ರಿಗಳು ಗುರುವಾರ ತೆಗೆದುಕೊಳ್ಳುವ ತೀರ್ವನವೇ ಅಂತಿಮವಾಗಲಿದೆ ಎಂದು ತಿಳಿಸಿದ್ದಾರೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕುವ ಮತ್ತು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿರುವ ಬಜೆಟ್ ಇದಾಗಿರಲಿದೆ ಎನ್ನುವುದು ಆರ್ಥಿಕ ಇಲಾಖೆ ಮೂಲಗಳು ಖಚಿತಪಡಿಸಿನೀಡುವ

    ದುಡಿಯುವ ವರ್ಗಗಳಿಗೆ ಆದ್ಯತೆ ನೀಡಲು ಆಗ್ರಹ: ಬಿಜೆಪಿ ಸರ್ಕಾರ ಕರೊನ ಹೆಸರು ಹೇಳಿಕೊಂಡು ರೈತರು, ದಲಿತರು, ಹಿಂದುಳಿದವರು, ಮಹಿಳೆಯರು, ಯುವಜನರು, ಕುಶಲ ಕರ್ವಿುಗಳು ಮತ್ತು ಸಣ್ಣ ಕೈಗಾರಿಕೆಗಳಿಗೆ ಅನುದಾನ ಕಡಿಮೆ ಮಾಡಿ ಅನ್ಯಾಯ ಮಾಡಿರುವುದನ್ನು ಈ ಬಜೆಟ್​ನಲ್ಲಿ ಸರಿದೂಗಿಸುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

     ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ಕಳೆದ ಮೂರು ವರ್ಷಗಳಿಂದ ಹಿಂದುಳಿದ ವರ್ಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಯುವ ಸಬಲೀಕರಣ, ಅಲ್ಪಸಂಖ್ಯಾತರ ಕಲ್ಯಾಣ, ಕೃಷಿ, ಸಣ್ಣ ಕೈಗಾರಿಕೆಗಳು, ಕುಶಲಕರ್ವಿು ವರ್ಗಗಳು ಮುಂತಾದವುಗಳಿಗೆ ಸಮರ್ಪಕ ಅನುದಾನಗಳನ್ನು ನೀಡುತ್ತಿಲ್ಲ. ರಾಜ್ಯದ ಬಜೆಟ್ ಗಾತ್ರ 2017-18ಕ್ಕೆ ಹೋಲಿಸಿದರೆ 2021-22ರಲ್ಲಿ ಸುಮಾರು 60 ಸಾವಿರ ಕೋಟಿಗಳಷ್ಟು ಹೆಚ್ಚಾಗಿದೆ. ಆದರೆ ಇದೇ ಸಮಯದಲ್ಲಿ ಏಳು ಇಲಾಖೆಗಳಿಗೆ ಶೇ.20.59 ರಷ್ಟು ಅನುದಾನ ಕಡಿಮೆಯಾಗಿದೆ. ಶೋಷಿತ ವರ್ಗಗಗಳಿಗೆ ನೀಡುವ

    ಅನುದಾನವನ್ನು ಕಡಿಮೆ ಮಾಡಿರುವುದೇ ಸಾಧನೆಯೇ ಎಂದು ಪ್ರಶ್ನಿಸಿದ್ದಾರೆ. ಹಿಂದುಳಿದ ವರ್ಗಗಳ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಅಭಿವೃದ್ಧಿಗಾಗಿ 12 ಕೋಟಿ ರೂ.ಗಳನ್ನು ಬಜೆಟ್​ನಲ್ಲಿ ಮೀಸಲಿರಿಸಲಾಗಿದೆ. ಆದರೆ ಒಂದು ರೂಪಾಯಿಯನ್ನೂ ಖರ್ಚು ಮಾಡಿಲ್ಲ. ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿಗಳು ಆಶ್ರಮ ಶಾಲೆಗಳಲ್ಲಿದ್ದರೆ ಅವರಿಗೆ ಶುಚಿ ಕಿಟ್ ನೀಡಲಾಗುತ್ತಿತ್ತು. ಈ ವರ್ಷ ಒಂದು ರೂಪಾಯಿಯನ್ನೂ ಖರ್ಚು ಮಾಡಿಲ್ಲ ಎಂದು ಹೇಳಿದ್ದಾರೆ. ಕೃಷಿ, ರೇಷ್ಮೆ, ತೋಟಗಾರಿಕಾ ಇಲಾಖೆಗಳಿಗೆ ನಾವು 2017-18 ರಲ್ಲಿ 6532 ಕೋಟಿ ಅನುದಾನ ನೀಡಿದ್ದೆವು. ಈಗ ಅದರ ಪ್ರಮಾಣ 5843 ಕೋಟಿಗಳಿಗೆ ಇಳಿದಿದೆ. ಸಣ್ಣ ಕೈಗಾರಿಕೆಗಳ ಪರಿಸ್ಥಿತಿಯೂ ಹೀಗೆ ಆಗಿದೆ ಎಂದು ದೂರಿದ್ದಾರೆ.

     ವರದಿ: ಮುರುಳಿಧರನ್ ಆರ್.,  ಹಿರಿಯೂರು. ( ಚಿತ್ರದುರ್ಗ- ಬೆಂಗಳೂರು)


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ಐಪಿಎಲ್ 2026: ತುಮಕೂರು, ಮೈಸೂರು ಸೇರಿದಂತೆ ದೇಶದ 15 ನಗರಗಳಲ್ಲಿ ‘ಫ್ಯಾನ್ ಪಾರ್ಕ್’ ಘೋಷಿಸಿದ ಬಿಸಿಸಿಐ!

    March 23, 2026

    ಬೆಂಗಳೂರು: ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಬ್ರೇಕ್:  ಡಿಸಿಎಂ ಡಿ.ಕೆ.ಶಿವಕುಮಾರ್

    March 21, 2026

    ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ ಪಿಜಿ ಸಿಲಿಂಡರ್ ಅಭಾವ; ಕೇಂದ್ರ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಪತ್ರ

    March 20, 2026

    Leave A Reply Cancel Reply

    Our Picks

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026

    ನಮ್ಮೊಂದಿಗೆ ಪ್ರೇಮ, ಆದ್ರೆ ಮದುವೆಯಾಗಿದ್ದು ಮೋದಿಯವರನ್ನು: ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ

    March 18, 2026

    ಕಾಂಗ್ರೆಸ್ ಯುದ್ಧದ ಭೀತಿ ಹುಟ್ಟಿಸುತ್ತಿದೆ: ಪ್ರಧಾನಿ ಮೋದಿ ವಾಗ್ದಾಳಿ

    March 14, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಏಪ್ರಿಲ್ 1ರಿಂದ ಬೇಸಿಗೆ ವಿಶೇಷ ಕಲಿಕಾ ಶಿಬಿರ: 2ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ

    March 23, 2026

    ತುಮಕೂರು: ವಿಜ್ಞಾನ ಬಿಂದು, ಭಾರತ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಹಕಾರದಲ್ಲಿ ಶೈಕ್ಷಣಿಕ ಯೋಜನೆಗಳನ್ನು ರೂಪಿಸಿದೆ. ಕಲಿಕೆಯಲ್ಲಿ ಆಸಕ್ತಿ ಮೂಡಿಸಲು…

    ಹೆಚ್ಚುತ್ತಿದೆ ಗ್ಯಾಸ್ ಸಿಲಿಂಡರ್ ಕಳ್ಳತನ ಪ್ರಕರಣ: ಶಾಲೆಗೆ ನುಗ್ಗಿ 6 ಸಿಲಿಂಡರ್ ದೋಚಿದ ಕಳ್ಳರು!

    March 23, 2026

    ಐಪಿಎಲ್ 2026: ತುಮಕೂರು, ಮೈಸೂರು ಸೇರಿದಂತೆ ದೇಶದ 15 ನಗರಗಳಲ್ಲಿ ‘ಫ್ಯಾನ್ ಪಾರ್ಕ್’ ಘೋಷಿಸಿದ ಬಿಸಿಸಿಐ!

    March 23, 2026

    ಜೂನ್ 21ರಂದು ಸಿದ್ದರಬೆಟ್ಟದಲ್ಲಿ ಉಚಿತ ಸಾಮೂಹಿಕ ಆದರ್ಶ ವಿವಾಹ: ನೋಂದಾಯಿಸುವುದು ಹೇಗೆ?

    March 23, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.