ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ನೀಡಿಗಲ್ ಹೋಬಳಿಯ ಕೆ.ಟಿ.ಹಳ್ಳಿ ಗ್ರಾಮದ ಚಾಮುಂಡೇಶ್ವರಿ ದೇವಸ್ಥಾನವನ್ನು ತೆರವುಗೊಳಿಸಲು ತಹಶೀಲ್ದಾರರು ನೋಟಿಸ್ ನೀಡಿದ್ದು ಗ್ರಾಮಸ್ಥರಿಗೆ ಧೈರ್ಯ ತುಂಬಿ ಸಹಕಾರ ನೀಡುವ ಬಗ್ಗೆ ಗ್ರಾಮಸ್ಥರೊಂದಿಗೆ ಸಭೆ ನಡೆಸಲಾಯಿತು.
ನಂತರ ಪಾವಗಡ ತಾಲೂಕು ತಹಶೀಲ್ದಾರರ ಭೇಟಿ ಮಾಡಿ, ದೇವಸ್ಥಾನ ಮತ್ತು ಸುತ್ತಮುತ್ತ ಇರುವ ಮನೆಗಳನ್ನು ತೆರವುಗೊಳಿಸದಂತೆ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ನ ಪ್ರಾಂತ ಸಹ ಕಾರ್ಯದರ್ಶಿಗಳಾದ ಮಂಗಳೂರಿನ ಶರಣ್ ಪಂಪ್ ವೆಲ್ , ತುಮಕೂರು ಬಜರಂಗದಳ ವಿಭಾಗ ಸಂಯೋಜಕರು ಮಂಜು ಭಾರ್ಗವ್, ವಿಶ್ವ ಹಿಂದೂ ಪರಿಷದ್ ತುಮಕೂರು ವಿಭಾಗ ಮಂದಿರ ಅರ್ಚಕ ಪುರೋಹಿತ್ ಪ್ರಮುಖ್ ಶ್ರೀನಿವಾಸ್ ಜಿ ಕೆ ,ಕಾರ್ಯದರ್ಶಿಗಳಾದ ಸಂಜಯ್ ಮಧುಗಿರಿ ಜಿಲ್ಲಾ ಸಂಯೋಜಕ್ ಸುಮನ್, ಪಾವಗಡ ಪ್ರಖಂಡ ವಾಸು , ರವಿ ,ರಾಕೇಶ್ ,ಲಕ್ಷ್ಮಿ ನಾಯ್ಡು, ಕಾರ್ತಿಕ್ , ಧನು ಇದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296