ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಡಿಸೆಂಬರ್ 2ರಂದು ಆಯೋಜಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಇಲಾಖಾ ಯೋಜನೆಗಳ ಫಲಾನುಭವಿಗಳ ಸವಲತ್ತು ವಿತರಣಾ ಕಾರ್ಯಕ್ರಮಗಳಿಗೆ ಸಿಎಂ ಸಿದ್ದರಾಮಯ್ಯ ಆಗಮನಕ್ಕೆ ಪ್ರಕೃತಿ ವಿಕೋಪದ ಬಿಸಿ ತಟ್ಟಿದೆ.
ಹೌದು..! ಸಿಎಂ ಆಗಮನಕ್ಕೂ ಫಂಗಲ್ ಚಂಡಮಾರುತದ ಬಿಸಿ ತಟ್ಟಿದೆ. ಮೋಡಕವಿದ ವಾತಾವರಣವಿರೋದರಿಂದ ಸಿಎಂ ಹೆಲಿಕಾಪ್ಟರ್ ಮೂಲಕ ಆಗಮನ ರದ್ದಾಗಿದೆ.
ಮೋಡ ಮುಸುಕಿದ ವಾತವರಣ ಹಿನ್ನೆಲೆ ಹೆಲಿಕಾಪ್ಟರ್ ಜರ್ನಿ ರದ್ದಾದ ಹಿನ್ನೆಲೆ ಬೆಂಗಳೂರಿನಿಂದ ತುಮಕೂರಿಗೆ ರಸ್ತೆ ಮೂಲಕ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ. ಮೊದಲಿಗೆ ಪಿ.ಗೊಲ್ಲಹಳ್ಳಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx