ಬೆಂಗಳೂರು: COMEDK UGET ಫಲಿತಾಂಶ 2024 ಇಂದು ಪ್ರಕಟಿಸಿಸಲಾಗಿದೆ. ಪ್ರವೇಶ ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ತಮ್ಮ ರ್ಯಾಂಕ್ ಕಾರ್ಡ್‌ಗಳ ಸಂಖ್ಯೆಯನ್ನು COMEDK ನ ಅಧಿಕೃತ ವೆಬ್‌ಸೈಟ್ comedk.org ನಲ್ಲಿ ಪರಿಶೀಲನೆ ಮಾಡಬಹುದು. ಇನ್ನು ಪರೀಕ್ಷೆಯಲ್ಲಿ ಮೊದಲ 10 ರ್ಯಾಂಕ್ ಪಡೆದವರಲ್ಲಿ 8 ಅಭ್ಯರ್ಥಿಗಳು ಕರ್ನಾಟಕದವರು. ಮೊದಲ ರ್ಯಾಂಕ್ ಬೆಂಗಳೂರಿನ ಬಾಲಸತ್ಯ ಸರವಣನ್ ಪಡೆದುಕೊಂಡಿದ್ದಾರೆ.
2024ನೇ ಸಾಲಿನ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೇ 12 ರಂದು ಪರೀಕ್ಷೆ ನಡೆದಿತ್ತು. ಕಾಮೆಡ್ ಕೆ ಕೀ ಉತ್ತರಗಳನ್ನು ಮೇ 21ರಂದು ಬಿಡುಗಡೆ ಮಾಡಿತ್ತು. ದೇಶಾದ್ಯಾಂತ 191 ನಗರಗಳಲ್ಲಿರುವ 264 ಪರೀಕ್ಷಾ ಕೇಂದ್ರಗಳಲ್ಲಿ ಮೂರು ಸೆಷನ್‌ಗಳಲ್ಲಿ ಆನ್ ಲೈನ್ ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಎಂಜಿನಿಯರಿಂಗ್ ಯುಜಿ ಸೀಟುಗಳನ್ನು ಕೋರಿ 1,18,005 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಸುಮಾರು 1,03,799 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.
35,124 ಮಂದಿ ಕರ್ನಾಟಕದವರು ಮತ್ತು 68,675 ಕರ್ನಾಟಕೇತರ ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. ಅಭ್ಯರ್ಥಿಗಳು ತಕ್ಷಣದ ತಿದ್ದುಪಡಿಗಾಗಿ ಪರೀಕ್ಷಾ ಪ್ರಾಧಿಕಾರವನ್ನು ತಕ್ಷಣವೇ ಸಂಪರ್ಕಿಸಬಹುದು. ಟಾಪ್ ರ‍್ಯಾಂಕ್ ಪಡೆದವರು 1) ಬಾಲಸತ್ಯ ಸರವಣನ್- ಕರ್ನಾಟಕ. 2) ದೇವಾಂಶ್ ತ್ರಿಪಾಠಿ – ಕರ್ನಾಟಕ. 3) ಸನಾ ತಬಸ್ಸುಮ್ – ಕರ್ನಾಟಕ. 4) ಪ್ರಕೇತ್ ಗೋಯೆಲ್- ಕರ್ನಾಟಕ. 5)ಮಾನಸ್ ಸಿಂಗ್ ರಜಪೂತ- ಹಿಮಾಚಲ ಪ್ರದೇಶ. 6)ಗಾನಿಪಿಸೆಟ್ಟಿ ನಿಸ್ಚಲ್- ಆಂಧ್ರಪ್ರದೇಶ. 7)ನಿಕೇತ್ ಪ್ರಕಾಶ್ ಅಚಂತಾ- ಕರ್ನಾಟಕ. 8) ನೇಹಾ ಪ್ರಭು -ಕರ್ನಾಟಕ. 9)ಜಗದೀಶ್ ರೆಡ್ಡಿ ಮಾರ್ಲ -ಕರ್ನಾಟಕ. 10) ಈಶ್ವರ್ ಚಂದ್ರ ರೆಡ್ಡಿ ಮುಲ್ಕಾ- ಕರ್ನಾಟಕ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


