nammatumakuru

    Subscribe to Updates

    Get the latest creative news from FooBar about art, design and business.

    What's Hot

    ರೈಲಿನಲ್ಲಿ ಜೋರಾಗಿ ಹಾಡು, ರೀಲ್ಸ್‌ ಕೇಳಿದರೆ  ದಂಡ! ತೊಂದರೆ ನೀಡುವವರ ವಿರುದ್ಧ ದೂರು ನೀಡುವುದು ಹೇಗೆ?

    October 20, 2026

    ಫೇಸ್‌ ಬುಕ್‌, ಇನ್‌ ಸ್ಟಾಗ್ರಾಂನಲ್ಲಿ ರಾಜಕೀಯ ಪೋಸ್ಟ್‌ ಗಳಿಗೆ ಬ್ರೇಕ್‌? ಮೆಟಾಗೆ ಕೇಂದ್ರದ ಮಹತ್ವದ ಸೂಚನೆ!

    October 20, 2026

    ಇಎಸ್‌ ಐಸಿ ಮಹತ್ವದ ಅಪ್‌ ಡೇಟ್:  ಇಎಸ್‌ ಐಸಿ ವಿಮಾದಾರರಿಗೆ ಸಿಹಿ ಸುದ್ದಿ:‌ ಎಷ್ಟು ಸಿಗಲಿದೆ ಈ ಹಣ?

    October 20, 2026
    Facebook Twitter Instagram
    ಟ್ರೆಂಡಿಂಗ್
    • ರೈಲಿನಲ್ಲಿ ಜೋರಾಗಿ ಹಾಡು, ರೀಲ್ಸ್‌ ಕೇಳಿದರೆ  ದಂಡ! ತೊಂದರೆ ನೀಡುವವರ ವಿರುದ್ಧ ದೂರು ನೀಡುವುದು ಹೇಗೆ?
    • ಫೇಸ್‌ ಬುಕ್‌, ಇನ್‌ ಸ್ಟಾಗ್ರಾಂನಲ್ಲಿ ರಾಜಕೀಯ ಪೋಸ್ಟ್‌ ಗಳಿಗೆ ಬ್ರೇಕ್‌? ಮೆಟಾಗೆ ಕೇಂದ್ರದ ಮಹತ್ವದ ಸೂಚನೆ!
    • ಇಎಸ್‌ ಐಸಿ ಮಹತ್ವದ ಅಪ್‌ ಡೇಟ್:  ಇಎಸ್‌ ಐಸಿ ವಿಮಾದಾರರಿಗೆ ಸಿಹಿ ಸುದ್ದಿ:‌ ಎಷ್ಟು ಸಿಗಲಿದೆ ಈ ಹಣ?
    • ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಹೊಸ ಸಂಕಷ್ಟ? ದಾಖಲೆ ಪರಿಶೀಲನೆ ಬಗ್ಗೆ ಮಹತ್ವದ ಮಾಹಿತಿ
    • ತುಮಕೂರಿನ ದೇವರಾಯನದುರ್ಗದಲ್ಲಿ ನಿಜಕ್ಕೂ ಕಾಡುಮನುಷ್ಯರು ಪ್ರತ್ಯಕ್ಷರಾಗಿದ್ದಾರಾ? ಪೊಲೀಸರ ಸ್ಪಷ್ಟನೆ ಇಲ್ಲಿದೆ
    • ಸೆನ್ಸೆಕ್ಸ್‌–ನಿಫ್ಟಿ ಏರಿಕೆಗೆ ಕಾರಣವೇನು? ಐಟಿ ಷೇರುಗಳ ಪ್ರದರ್ಶನದಿಂದ ಮಾರುಕಟ್ಟೆಯಲ್ಲಿ ಚೈತನ್ಯ
    • ಬೆಳಗ್ಗೆ ಎದ್ದ ತಕ್ಷಣ ಸೀನುವ ಅಭ್ಯಾಸವಿದೆಯೇ? ನಿರ್ಲಕ್ಷ್ಯ ಮಾಡಬೇಡಿ, ಇದು ಈ ಲಕ್ಷಣವಾಗಿರಬಹುದು!
    • ಕ್ರೈಂ ಸುದ್ದಿಗಳು: ಮನೆ ಬೀಗ ಮುರಿದು ಚಿನ್ನಾಭರಣ ಕಳವು, ಕೇಬಲ್ ವೈರ್–ಪೈಪ್ ಕಳವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕಡ್ಡಾಯವಾಗಿ ನಿಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ: ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಮನವಿ
    ರಾಜ್ಯ ಸುದ್ದಿ March 1, 2024

    ಕಡ್ಡಾಯವಾಗಿ ನಿಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ: ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಮನವಿ

    By adminMarch 1, 2024No Comments2 Mins Read
    thuruvekere

    ತುರುವೇಕೆರೆ: ಮಕ್ಕಳ ಅಂಗವಿಕಲತೆಯನ್ನು ತಡೆಗಟ್ಟಲು ಸರ್ಕಾರ ಯೋಜನೆಯನ್ನು ರೂಪಿಸಿದ್ದು, ಅದರಂತೆ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.    ಕಡ್ಡಾಯವಾಗಿ ನಿಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ ಎಂದು ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಮನವಿ ಮಾಡಿಕೊಂಡರು.

    ಭಾರತ ಸರ್ಕಾರವು 03—03–24 ರಿಂದ 06—03–24  ರ ವರೆಗೆ ಹುಟ್ಟನಿಂದ 5 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ,ಇದರ ಬಗ್ಗೆ ಆರೋಗ್ಯ ಇಲಾಖೆಯು ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ. ಅದರಂತೆ ಮಾರ್ಚ್ 3 ರ ಭಾನುವಾರದಂದು ಬೂತ್ ಗಳನ್ನು ಸ್ಥಾಪಿಸಲಾಗಿದೆ  ಎಂದು ಅವರು ತಿಳಿಸಿದರು.

    ನಮ್ಮ ತಾಲ್ಲೂಕಿಗೆ ಸಂಬಂಧಪಟ್ಟಂತೆ  ಒಟ್ಟು 90 ಪೋಲಿಯೋ ಬೂತ್ ಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ ಪಟ್ಟಣದಲ್ಲಿ 8 ಬೂತ್ ಗಳನ್ನು ಮಾಡಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ 82 ಬೂತ್ ಗಳನ್ನೂ ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.

    ಪಟ್ಟಣದ ಬಸ್ ನಿಲ್ದಾಣದಲ್ಲಿಯೂ ಸಹ ಬೂತ್ ಸ್ಥಾಪಿಸಲಾಗಿದೆ. ಬಾಣಸಂದ್ರ ಮತ್ತು ಅಮ್ಮಸಂದ್ರ ರೈಲ್ವೆ ನಿಲ್ದಾಣಗಳಲ್ಲಿ ಪೋಲಿಯೋ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ.  ಇದರ ಮೇಲ್ವಿಚಾರಣೆಯನ್ನು 20 ಜನ ಮೇಲ್ವಿಚಾರಕರು ನಡೆಸಲಿದ್ದಾರೆ. ನಮ್ಮ ತಾಲ್ಲೂಕಿನಲ್ಲಿ ಹುಟ್ಟಿನಿಂದ 5 ವರ್ಷದ ಒಳಗಿನ ಪೋಲಿಯೋ ಹಾಕಬೇಕಾದ ಮಕ್ಕಳ ಸಂಖ್ಯೆ 9,427 ಇದೆ ಮಕ್ಕಳ ಅಂಗವಿಕಲತೆಯನ್ನು ತಡೆಗಟ್ಟಲು ಸರ್ಕಾರ ಯೋಜನೆಯನ್ನು ರೂಪಿಸಿದ್ದು ಅದರಂತೆ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

    ನಮ್ಮ ತಾಲ್ಲೂಕಿನ ಸಮಸ್ತ ನಾಗರಿಕರು ತಮ್ಮ 5 ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಿ, ಈ ಅಭಿಯಾನಕ್ಕೆ ಸರ್ಕಾರಿ ವಾಹನಗಳು ಹಾಗೂ ಅಗತ್ಯವಿರುವ ಕಡೆ ಖಾಸಗೀ ವಾಹನಗಳನ್ನು ಬಳಕೆ ಮಾಡಿಕೊಳ್ಳುತ್ತೇವೆ. ಎಲ್ಲರೂ ಕಡ್ಡಾಯವಾಗಿ ನಿಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ ಎಂದು ಮನವಿ ಮಾಡಿಕೊಂಡರು.

    ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಂಗನಾಥ್ ಮಾತನಾಡಿ, ನಮ್ಮ ಎಲ್ಲ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗಿದೆ. ಮಾರ್ಚ್ 3ರಂದು ಲಸಿಕೆ ಹಾಕಿಸಿ ಕೊಳ್ಳದ ಮಕ್ಕಳನ್ನು ನಮ್ಮ ಆಶಾ ಕಾರ್ಯಕರ್ತೆಯರು ಮನೆ ಮನೆ ಗೆ ತೆರಳಿ ಅವರುಗಳನ್ನು ಗುರುತಿಸಿ ಲಸಿಕೆಯನ್ನು ಹಾಕಲಿದ್ದಾರೆ ಎಂದು ತಿಳಿಸಿದರು.

    ಒಟ್ಟು 4 ದಿನ ಅಭಿಯಾನ ನಡೆಯಲಿದ್ದು, ನಾವು ಶೇಕಡಾ 100% ರಷ್ಟು ಗುರಿಯನ್ನು ತಲುಪಬೇಕಿದೆ. ಈ ದಿನಗಳಲ್ಲಿ ಯಾವುದೇ ಸಭೆ ಸಮಾರಂಭ ಗಳಿದ್ದರೂ ಕೂಡ ಅಲ್ಲಿಗೆ ತೆರಳಿ ಮಕ್ಕಳಿಗೆ ಲಸಿಕೆಯನ್ನುಹಾಕಲಾಗುವುದು. ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆಗಳಿಂದ ಸಹಕಾರವಿದೆ ಕಾರ್ಯಕ್ರಮವನ್ನು  ಯಶಸ್ವಿಗೊಳಿಸುತ್ತೇವೆ. ಮುಂದೆ  ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿ ಮಾಡುತ್ತೇವೆ ಎಂದರು .

    ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ  ಡಾ.ನವೀನ್ ಹಾಗೂ ಆರೋಗ್ಯ ಶಿಕ್ಷಣಾಧಿಕಾರಿ  ಬೋರೇಗೌಡ ಉಪಸ್ಥಿತರಿದ್ದರು.

    ವರದಿ: ಸುರೇಶ್ ಬಾಬು ಎಂ. ತುರುವೇಕೆರೆ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

     

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

     

    admin
    • Website

    Related Posts

    ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಹೊಸ ಸಂಕಷ್ಟ? ದಾಖಲೆ ಪರಿಶೀಲನೆ ಬಗ್ಗೆ ಮಹತ್ವದ ಮಾಹಿತಿ

    October 20, 2026

    ರೇಷನ್ ಕಾರ್ಡ್‌ದಾರರಿಗೆ ಗುಡ್‌ ನ್ಯೂಸ್‌! ಇ–ಕೆವೈಸಿ ಗಡುವು ವಿಸ್ತರಣೆ, ಎಲ್ಲಿಯವರೆಗೆ?

    October 19, 2026

    ಸ್ಟಿಂಗ್ ಆಪರೇಷನ್: ಸಿದ್ದರಾಮಯ್ಯ ಪರ ಯಡಿಯೂರಪ್ಪ ಬ್ಯಾಟಿಂಗ್, ಡಿಕೆಶಿ ಪದಚ್ಯುತಿ ಬಗ್ಗೆ ವಿಜಯೇಂದ್ರ ಹೇಳಿದ್ದೇನು?

    October 19, 2026

    Comments are closed.

    Our Picks

    ಫೇಸ್‌ ಬುಕ್‌, ಇನ್‌ ಸ್ಟಾಗ್ರಾಂನಲ್ಲಿ ರಾಜಕೀಯ ಪೋಸ್ಟ್‌ ಗಳಿಗೆ ಬ್ರೇಕ್‌? ಮೆಟಾಗೆ ಕೇಂದ್ರದ ಮಹತ್ವದ ಸೂಚನೆ!

    October 20, 2026

    ಇಎಸ್‌ ಐಸಿ ಮಹತ್ವದ ಅಪ್‌ ಡೇಟ್:  ಇಎಸ್‌ ಐಸಿ ವಿಮಾದಾರರಿಗೆ ಸಿಹಿ ಸುದ್ದಿ:‌ ಎಷ್ಟು ಸಿಗಲಿದೆ ಈ ಹಣ?

    October 20, 2026

    ಜಿಯೋ ಗ್ರಾಹಕರಿಗೆ ಶಾಕ್! ಉಚಿತ ಹಾಟ್‌ ಸ್ಟಾರ್ ಸೌಲಭ್ಯ ಬಂದ್‌; OTT ಪ್ರಿಯರಿಗೆ ಇನ್ನು ಯಾವುದು ಬೆಸ್ಟ್‌ ಪ್ಲಾನ್?

    October 19, 2026

    ತೆರಿಗೆದಾರರೇ ಗಮನಿಸಿ! ಟ್ಯಾಕ್ಸ್ ಆಡಿಟ್ ಸಲ್ಲಿಕೆಗೆ ಅಕ್ಟೋಬರ್ 21 ಕೊನೆಯ ದಿನ; ತಪ್ಪಿದರೆ ಎಷ್ಟು ಲಕ್ಷ ದಂಡ?

    October 19, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    Uncategorized

    ರೈಲಿನಲ್ಲಿ ಜೋರಾಗಿ ಹಾಡು, ರೀಲ್ಸ್‌ ಕೇಳಿದರೆ  ದಂಡ! ತೊಂದರೆ ನೀಡುವವರ ವಿರುದ್ಧ ದೂರು ನೀಡುವುದು ಹೇಗೆ?

    October 20, 2026

    ರೈಲಿನಲ್ಲಿ ಪ್ರಯಾಣಿಸುವಾಗ ಮೊಬೈಲ್‌ನಲ್ಲಿ ಜೋರಾಗಿ ಹಾಡು ಕೇಳುವುದು, ರೀಲ್ಸ್‌ ನೋಡುವುದು ಅಥವಾ ಸ್ಪೀಕರ್‌ ಆನ್‌ ಮಾಡಿ ಮಾತನಾಡುವ ಅಭ್ಯಾಸವಿದೆಯೇ? ಹಾಗಿದ್ದರೆ…

    ಫೇಸ್‌ ಬುಕ್‌, ಇನ್‌ ಸ್ಟಾಗ್ರಾಂನಲ್ಲಿ ರಾಜಕೀಯ ಪೋಸ್ಟ್‌ ಗಳಿಗೆ ಬ್ರೇಕ್‌? ಮೆಟಾಗೆ ಕೇಂದ್ರದ ಮಹತ್ವದ ಸೂಚನೆ!

    October 20, 2026

    ಇಎಸ್‌ ಐಸಿ ಮಹತ್ವದ ಅಪ್‌ ಡೇಟ್:  ಇಎಸ್‌ ಐಸಿ ವಿಮಾದಾರರಿಗೆ ಸಿಹಿ ಸುದ್ದಿ:‌ ಎಷ್ಟು ಸಿಗಲಿದೆ ಈ ಹಣ?

    October 20, 2026

    ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಹೊಸ ಸಂಕಷ್ಟ? ದಾಖಲೆ ಪರಿಶೀಲನೆ ಬಗ್ಗೆ ಮಹತ್ವದ ಮಾಹಿತಿ

    October 20, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.