ನವದೆಹಲಿ: ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಮೇಲೆ ಹಲ್ಲೆ ನಡೆಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯಲ್ಲಿ ಚುನಾವಣಾ ಸಂಭ್ರಮದ ನಡೆಯುತ್ತಿರುವ ನಡುವೆ, ದೆಹಲಿ ಈಶಾನ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ್ದಾನೆ.
ಈ ಘಟನೆ ನಡೆದಾಗ ಕನ್ಹಯ್ಯ ಅವರು ಲೋಕಸಭೆ ಚುನಾವಣೆಯ ಪ್ರಚಾರ ನಡೆಸುತ್ತಿದ್ದರು. ಮಾಲೆ ಹಾಕುವ ನೆಪದಲ್ಲಿ ಈ ವ್ಯಕ್ತಿ ಕನ್ಹಯ್ಯನ ಬಳಿಗೆ ಬಂದು ಕಪಾಳಮೋಕ್ಷ ಮಾಡಿದ್ದಾನೆ. ವಿಶೇಷವೆಂದರೆ ಈ ವ್ಯಕ್ತಿ ಅಪರಾಧ ಮಾಡುವ ಮುನ್ನ ವೀಡಿಯೋವನ್ನೂ ಮಾಡಿಕೊಂಡಿದ್ದಾನೆ.
ಮೊಬೈಲ್ ಕ್ಯಾಮರಾ ಹಿಡಿದುಕೊಂಡಿದ್ದ ಆತನ ಸಹಚರ ಮೊದಲು ‘ಕನ್ಹಯ್ಯಾಗೆ ಈಗ ಹೊಡೆಯಲಿದ್ದಾನೆ’ ಎನ್ನುತ್ತಾನೆ. ಕನ್ಹಯ್ಯಾ ಕುಮಾರ್ ಗೆ ಮಾಲೆ ಹಾಕಿದ ಬಳಿಕ ಆರೋಪಿಯು ಕಪಾಳಮೋಕ್ಷ ಮಾಡಿದ್ದು, ಬಳಿಕ ಘಟನಾ ಸ್ಥಳದಲ್ಲಿ ಕೋಲಾಹಲ ಎದ್ದಿರುವುದನ್ನು ಕಾಣಬಹುದು. ಕನ್ಹಯ್ಯಾಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ.
ದೆಹಲಿ ಪೊಲೀಸರ ಪ್ರಕಾರ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕನ್ಹಯ್ಯಾ ಕುಮಾರ್‌ಗೆ ಕಪಾಳಮೋಕ್ಷ ಮಾಡಿದ ಇಬ್ಬರೂ ಆರೋಪಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ. ಈ ಇಬ್ಬರೂ ಆರೋಪಿಗಳನ್ನು ಈಗಾಗಲೇ ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ವಿಪಕ್ಷಗಳ ‘ಇಂಡಿಯಾ’ ಒಕ್ಕೂಟದ ಅಡಿಯಲ್ಲಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಸೀಟುಗಳ ಹಂಚಿಕೆಯಲ್ಲಿ ಒಪ್ಪಂದವಾಗಿ ಈ ಲೋಕಸಭಾ ಚುನಾವಣೆಯನ್ನು ಜಂಟಿಯಾಗಿ ಎದುರಿಸಲಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296