ರಸ್ತೆಯಲ್ಲೇ ನಮಾಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ಹಾಕಿ ಹಿಂಪಡೆದಿದ್ದು ಯಾಕೆ ಎಂದು ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, “ತುಷ್ಟೀಕರಣದ ನೀತಿಯಿಂದ ಸುಮೋಟೊ ಕೇಸ್ ಹಿಂಪಡೆದಿದ್ದು, ಇದರ ವಿರುದ್ಧ ಹೇಳಿಕೆ ನೀಡಿದವರ ಮೇಲೆ ಕೇಸ್ ದಾಖಲಾಗಿದೆ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಕೆಲಸ ಮಾಡುತ್ತಾ ಇದೆ. ಸುಮೋಟೋ ಕೇಸ್ ಹಾಕಿದ್ದು ಯಾಕೆ?, ಬಳಿಕ ಹಿಂಪಡೆದಿದ್ದು ಯಾಕೆ?, ಇದನ್ನು ಬಿಜೆಪಿ ಖಂಡಿಸುತ್ತದೆ. ಸಿದ್ದರಾಮಣ್ಣನ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿದೆ. ಕೂಡಲೇ ಶರಣ್ ಪಂಪ್ ವೆಲ್ ವಿರುದ್ಧ ದಾಖಲಿಸಿದ ಕೇಸ್ ಹಿಂಪಡೆಯಬೇಕು” ಎಂದು ಸಂಸದ ನಳಿನ್ ಕುಮಾರ್ ಕಟೀಲು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


