ತುಮಕೂರು: ಮೇಲ್ನೋಟಕ್ಕೆ ಇದು ಅವೈಜ್ಞಾನಿಕ ಜಾತಿಗಣತಿ ಎಲ್ಲಾ ಸಮುದಾಯಕ್ಕೂ ಸಾಮಾಜಿಕ, ಶೈಕ್ಷಣಿಕ ನ್ಯಾಯ ಸಿಗಬೇಕು, ಆ ರೀತಿಯಲ್ಲಿ ವರದಿಯನ್ನ ಮತ್ತೊಮ್ಮೆ ತಯಾರಿಸಿ ಬಿಡುಗಡೆ ಮಾಡಲಿ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದ್ದಾರೆ.
ಜಾತಿ ಜನಗಣತಿ ಜಾರಿಗೆ ವಿರೋಧ ವ್ಯಕ್ತಪಡಿಸಿ ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾನಾಡಿದ ಅವರು, ನಾನು ಹಿಂದೆ ಇದರ ಬಗ್ಗೆ ಒಂದು ಸಾರಿ ಪ್ರಸ್ತಾಪ ಮಾಡಿದ್ದೆ, ನಮ್ಮ ಒಕ್ಕಲಿಗರಲ್ಲಿ ಒಳಪಂಗಡಗಳು ಇವೆ. ಲಿಂಗಾಯತರಲ್ಲೂ ಒಳಪಂಗಡಗಳು ಇವೆ ಎಂದು ಹೇಳಿದರು.
ಕುಂಚಿಟಿಗರು ಕೇವಲ ಕುಂಚಿಟಿಗ ಅಂತ ಬರೆದಿರ್ತಾರೆ ನಮ್ಮಲ್ಲಿ ಕುಂಚಿಟಿಗ ಒಕ್ಕಲಿಗ ಅಂತ ಬರೆದಿರಲ್ಲ, ಸರ್ಪ ಒಕ್ಕಲಿಗರು ಇದ್ದಾಗ ಕೇವಲ ಸರ್ಪರು ಅಂತ ಬರಿತಾರೆ, ಅದ್ಯಾವುದು ಕೂಡಾ ಆಗ ನಮ್ಮ ಸಮುದಾಯದ ಪಟ್ಟಿಯಲ್ಲಿ ಬರಲ್ಲ ಎಂದು ಹೇಳಿದರು.
ಇವರು ವರದಿ ತಯಾರು ಮಾಡಿದವರು ಕೂಡಾ ಕುಂಚಿಟಿಗ ಅಂತ ಬರೆದುಕೊಂಡು ಹೋಗಿರ್ತಾರೆ ನಮ್ಮಲ್ಲಿ ವಿರೋಧ ಯಾಕೆ ಅಂದ್ರೆ ಒಟ್ಟಿಗೆ ಒಕ್ಕಲಿಗ ಅಂತ ಮಾಡಲಿ ಅಂತ. ಲಿಂಗಾಯತ ಸಮುದಾಯದಲ್ಲೂ ಸಹ ಅದೇ ರೀತಿ ಆಗಿರಬಹುದು ಎಂದರು.
ಅವರಲ್ಲಿಯೂ ಅನೇಕ ಒಳಪಂಗಡಗಳು ಇದಾವೆ. ಆದ್ದರಿಂದ ಅದನ್ನ ಸರಿಯಾದ ರೀತಿಯಲ್ಲಿ ಮಾಡಿದ್ದಾರಾ ಅನ್ನೋ ಅನುಮಾನ ಇದೆ ಎಂದರು. ಮಾಡದೇ ಇದ್ದಾಗ ಜನಾಂಗಕ್ಕೆ ಅನ್ಯಾಯ ಆಗುತ್ತೆ ಅನ್ನುವ ಕಳಕಳಿ ಎಲ್ಲರಲ್ಲಿ ಇದೆ. ಆ ದೃಷ್ಟಿ ಇಟ್ಟುಕೊಂಡು ಈ ಸಮುದಾಯಗಳು ವಿರೋಧ ವ್ಯಕ್ತಪಡಿಸ್ತಿದ್ದಾರೆ ಅಂತ ನನಗೆ ಅನ್ಸುತ್ತೆ. ವರದಿ ಯಾವ ರೀತಿ ತಯಾರು ಮಾಡಿದ್ದಾರೆ ಅನ್ನೋದು ಯಾರಿಗೂ ಗೊತ್ತಿಲ್ಲ ಎಂದರು.
ಇದುವರೆಗೂ ಯಾರಿಗೂ ಗೊತ್ತಿಲ್ಲ. ಆ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಆ ರೀತಿಯಾದರೇ ಅನ್ಯಾಯ ಆಗುತ್ತಲ್ಲ ಎಂದರು.
ನಮ್ಮಲ್ಲಿ ಎಲ್ಲರಿಗೂ ಕೂಡಾ ಅದೊಂದು ದುಗುಡ ಇದೆ. ಯಾವ ರೀತಿಯಾಗಿ ಅವರು ತಯಾರು ಮಾಡಿದ್ದಾರೆ ಅನ್ನೊದು ನಮಗ್ಯಾರಿಗೂ ಸ್ಪಷ್ಟತೆ ಇಲ್ಲ ಎಂದರು.
ಹಾಗಾಗಿ ಅದರ ಬಗ್ಗೆ ಸ್ಪಷ್ಟನೆ ನೀಡಿ, ಅದರ ಸಾಧಕ ಭಾದಕಗಳ ಬಗ್ಗೆ ಚರ್ಚೆ ಮಾಡಿ ಜಾರಿಗೆ ತರಬೇಕಾಗುತ್ತೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296