ಉತ್ತರ ಕನ್ನಡ: ಗೋಕರ್ಣ ಮತ್ತು ಅಂಕೋಲಾ ಸಂಪರ್ಕಿಸುವ ಹೊಸದಾಗಿ ನಿರ್ಮಿಸಲಾದ ಗಂಗಾವಳಿ ಸೇತುವೆಯ ಮೇಲೆ ಮಗುವಿನೊಂದಿಗೆ ದಂಪತಿಗಳು ಅಪಾಯಕಾರಿಯಾಗಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದು, ಸ್ವಲ್ಪದರಲ್ಲೇ ಮೂವರೂ ಅಪಾಯದಿಂದ ಪಾರಾಗಿದ್ದಾರೆ.
ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ತಕ್ಷಣವೇ ಉತ್ತರ ಕನ್ನಡ ಪೊಲೀಸರು, ವೈ-ಫೈ ಸಂಪರ್ಕಿತ ಇಂಟೆಲಿಜೆಂಟ್ ಕ್ಯಾಮೆರಾವನ್ನು ಬಳಸಿ, ದಂಪತಿಗಳಿಗೆ ಲೈವ್ ಎಚ್ಚರಿಕೆ ನೀಡಿದ್ದಾರೆ. ಕೆಳಗೆ ಪ್ರಬಲವಾದ ನದಿ ಪ್ರವಾಹವಿದ್ದು ತಕ್ಷಣ ಸ್ಥಳದಿಂದ ಹೊರಹೋಗುವಂತೆ ಸೂಚಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳಲ್ಲಿ ಏಕಾಏಕಿ ಪೊಲೀಸರ ಧ್ವನಿ ಕೇಳಿದ ಕೂಡಲೇ ಆ ದಂಪತಿ, ಪೊಲೀಸರ ಸೂಚನೆಯಂತೆ ಮಗುವನ್ನು ಎತ್ತಿಕೊಂಡು ಆಚೆ ಹೋಗಿದ್ದಾರೆ.
ಪೊಲೀಸರ ಈ ಮುನ್ನೆಚ್ಚರಿಕಾ ಕ್ರಮ ಗೋಕರ್ಣದಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು ತಮ್ಮನ್ನು ಕ್ಯಾಮರಾ ಮೂಲಕ ನೋಡುತ್ತಿದ್ದಾರೆ ಎಂದು ದಂಪತಿಗೆ ತಿಳಿದಿರಲಿಲ್ಲ. ಸ್ವಲ್ಪ ಯಾಮಾರಿದ್ದರೆ ಮಗು ನದಿಗೆ ಬೀಳುವ ಅಪಾಯವಿತ್ತು. ಸಕಾಲಿಕ ಎಚ್ಚರಿಕೆಯು ಬಹುಶಃ ಜೀವವನ್ನು ಉಳಿಸಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW