ತುಮಕೂರು: ತಮ್ಮ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ವಿರುದ್ಧ ತುಮಕೂರಿನಲ್ಲಿ ಶಾಸಕ ಸುರೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿ, ತಿರುಗೇಟು ನೀಡಿದರು.
ಕ್ರಿಕೆಟ್ ಸ್ಟೇಡಿಯಂ ವಿಚಾರದಲ್ಲಿ ಲಂಚ ನೀಡಿಲ್ಲ ಅಂತಾ ಹೇಳಿದ್ದಾರೆ. ಈ ವಿಚಾರವಾಗಿ ನಾನು ಮಾನನಷ್ಟ ಮೊಕದ್ದಮೆ ಹಾಕ್ತೀನಿ. ಅದು ಪ್ರೈವೆಟ್ ಕಂಪನಿ ಅದ್ರಲ್ಲಿ ಲಂಚ ಹೊಡೆಯುತ್ತಾರೆ ಅಂತಾರೆ ಅಂದ್ರೆ ಅವರಿಗೆ ಎಷ್ಟರ ಮಟ್ಟಿಗೆ ಜ್ಞಾನ ಇದೆ ಅಂತಾ ತಿಳಿದುಕೊಳ್ಳಿ. ಅವರ ತಂದೆ ಪೊಲೀಸ್ ಆಗಿದ್ದವರು ಅವರ ಕಾಲೇಜಿಗೆ ಮರಳು, ಇಟ್ಟಿಗೆ ಹೊಡೆಸಿಕೊಳ್ತಾ ಇದ್ರು ಅಂತಾ ಕೇಳಿದ್ದೇನೆ ಎಂದು ಆರೋಪಿಸಿದರು.
ಗಾಜಿನ ಮನೆಯಲ್ಲಿ ಕುಳಿತು ಇನ್ನೊಬ್ಬರಿಗೆ ಕಲ್ಲು ಒಡೆಯೋ ಕೆಲಸ ಮಾಡಬಾರದು. ಗೌರಿಶಂಕರ್ ಮೂರು ಪಕ್ಷ ನೋಡಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಪರಮೇಶ್ವರ್ ಅವರು, ಅವರಿಗೆ ಜಗತ್ ಗುರುಗಳು. ಪರಮೇಶ್ವರ್ ಮ್ಯಾಚ್ ಫಿಕ್ಸ್ ಮಾಡಿ ಕೊರಟಗೆರೆಯಲ್ಲಿ ಅವರಿಗೆ ಇಲ್ಲಿ ಇವರಿಗೆ ಓಟ್ ಹಾಕಿಸಿಕೊಳ್ತಾರೆ ಎಂದು ಸುರೇಶ್ ಗೌಡ ಆರೋಪಿಸಿದರು.
ನಾನು ಪ್ರಯಾಗ್ ರಾಜ್ ನಲ್ಲಿ ಪಾಪ ಕಳೆದುಕೊಂಡಿದ್ದೇನೋ ಪುಣ್ಯ ಪಡೆದುಕೊಂಡಿದ್ದೇನೋ ಅವರಿಗೆ ಬೇಕಿಲ್ಲ. ಅವರದ್ದೇ ಮಲ್ಲಿಕಾರ್ಜುನ ಖರ್ಗೆ ಹಿಂದೂಗಳ ಅವಹೇಳನ ಮಾಡಿದ್ರು, ಅದಕ್ಕೆ ದೆಹಲಿ ಚುನಾವಣೆಯಲ್ಲಿ ಸಂಪೂರ್ಣ ಶೂನ್ಯ ಸಂಪಾದಿಸಿದ್ದಾರೆ. ನನ್ನ ವೈಯಕ್ತಿಕ ವಿಚಾರ ಅವರಿಗೆ ಗೌರವ ತರೋದಿಲ್ಲ ಎಂದು ಸುರೇಶ್ ಗೌಡ ತಿರುಗೇಟು ನೀಡಿದರು.
ಗೌರಿಶಂಕರ್ ಪತ್ರಿಕಾಗೊಷ್ಟಿಗೆ ಕ್ಲಾರಿಟಿ ಕೊಡೋಕೆ ಬಂದಿದ್ದೇನೆ. ರಾಜಣ್ಣ ಮೇಲೆ ಮಾತನಾಡೋದು ಸುರೇಶ್ ಗೌಡಗೆ ತಿಳಿದಿದೆ. ಯಾವಾಗ ಯಾವ ಸಂಧರ್ಭದಲ್ಲಿ ಯಾರ ಮೇಲೆ ದಾಳಿ ಮಾಡಬೇಕು ಗೊತ್ತಿದೆ. ನಾನು ಶಾಸಕ ಯಾವ ಸಂಧರ್ಭದಲ್ಲಿ ಯಾವ ವಿಷಯ ತೆಗೆದುಕೊಳ್ಳಬೇಕು ಅಂತಾ ಗೊತ್ತಿದೆ. ಆ ಪತ್ರಿಕಾಗೋಷ್ಠಿ ಹಿಂದೆ ಯಾರು ಇದ್ದಾರೆ ಅಂತಾ ತಿಳಿದಿದೆ ಎಂದು ಅವರು ಹೇಳಿದರು.
ಜಿ.ಪರಮೇಶ್ವರ್ ಅವರೇ ಆ ಪತ್ರಿಕಾಗೋಷ್ಠಿ ಕರೆದಿದ್ದು. ನನಗೆ ಗೌರಿಶಂಕರ್, ಪರಮೇಶ್ವರ್, ರಾಜಣ್ಣ ಮೇಲೆ ವೈಯಕ್ತಿಕ ದ್ವೇಶ ಇಲ್ಲ. ನಾನು ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಕಪ್ಪು ಭಾವುಟ ಪ್ರದರ್ಶನಕ್ಕೆ ಮುಂದಾಗಿದ್ದೆ. ಆಗ ಪರಮೇಶ್ವರ್ ಮನವಿ ಮಾಡಿ ಹಣ ಬಿಡುಗಡೆ ಮಾಡ್ತಿನಿ ಅಂದಿದ್ರು. ಈವರೆಗೂ ಯಾವುದೇ ಹಣ ಬಿಡುಗಡೆಯಾಗಿಲ್ಲ ಎಂದರು.
ಲಿಂಕ್ ಕೆನಾಲ್ ಬಗ್ಗೆ ಪ್ರಸ್ತಾಪ ಗಣರಾಜ್ಯೋತ್ಸವದಲ್ಲಿ ಮಾತನಾಡಿದ್ರು. ರಾಜಣ್ಣ ಗೌರಿಶಂಕರ್ , ರಾಜಣ್ಣ ಗೆ ಅವರಿಗೆ ಕೇಳೋದು ಇಷ್ಟೇ. ನೀವು ಯಾಕ್ ಲಿಂಕ್ ಕೆನಾಲ್ ವಿರೋಧ ಮಾಡಬಾರದು.? ರಾಜಣ್ಣ ಅವರಿಗೆ ಕೊಡುವ ಉತ್ತರವನ್ನ ಕೊಡಿಸಬೇಕು.
ಪರಮೇಶ್ವರ್ ಅವರು ನಮಗೆ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಒಟ್ಟು ಏಳು ತಾಲೂಕಿಗೆ ನೀರು ಮರಿಚೀಕೆ ಆಗುವ ವಿಷಯ. ಒಟ್ಟು ಏಳು ತಾಲೂಕಿಗೆ ವಂಚನೆ ಮಾಡಿ ರಾಮನಗರಕ್ಕೆ ಹರಿಸೋ ವಿಚಾರ ಕೈ ಬಿಡಬೇಕು. ಗುಬ್ಬಿ ಶಾಸಕ ವಾಸು ಸೇರಿ ಅವರಿಗೆ ಮನವಿ ಮಾಡ್ತೀವಿ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx