ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಸದ್ಯ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದಾರೆ. ದರ್ಶನ್ ಕನ್ನಡಕ್ಕೆ ಸಿಕ್ಕಿದ್ದ ಸೂಪರ್ ಸ್ಟಾರ್. 60ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ಮಾಸ್ ಹೀರೋ.. ಆದ್ರೆ ಆ ಒಂದು ಕೊಲೆ ದರ್ಶನ್ ಬಣ್ಣದ ಭವಿಷ್ಯವನ್ನೇ ಮುಗಿಸಿ ಬಿಡ್ತಾ? ಇಲ್ಲೊಬ್ಬ ಜ್ಯೋತಿಷಿ ದರ್ಶನ್ ಮುಂದಿನ ಜೀವನದ ಬಗ್ಗೆ ಜ್ಯೋತಿಷ್ಯ ನುಡಿದಿದ್ದಾರೆ.
ನಟ ದರ್ಶನ್ ಗೆ ಕೆಟ್ಟ ಸಮಯ. ಕೊಲೆ ಆರೋಪದ ಸುಳಿಗೆ ಸಿಕ್ಕಿ ಒದ್ದಾಡುತ್ತಿರುವ ದರ್ಶನ್ ಗೆ ಹೇಗಾದ್ರು ಮಾಡಿ ಹೊರ ಬರಬೇಕು ಅನ್ನೋ ಹಂಬಲ, ಆದ್ರೆ ಅದಕ್ಕೆ ಸದ್ಯಕ್ಕೆ ಸರಿಯಾದ ಸಮಯ ಇಲ್ವಂತೆ. ದರ್ಶನ್ ಜೀವನದ ಸರಿಯಾದ ಟೈಂ ಶುರುವಾಗೋದು 2027ಕ್ಕೆ ಅಂತೆ. ಅಲ್ಲಿವರೆಗೂ ದರ್ಶನ್ ಜೈಲಿನಿಂದ ಹೊರಬರಲ್ವಾ ಅಂತ ಚಿಂತೆ ಬೇಡ, ಜೈಲಿನಿಂದ ಹೊರ ಬಂದ್ರೂ ಈ ಕೊಲೆ ಕೇಸ್ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿ ಟಾರ್ಚರ್ ಮಾಡುತ್ತೆ ಅಂತ ಕಾನೂನು ತಜ್ಞರು ಹೇಳುತ್ತಿದ್ದಾರೆ. ಇದಕ್ಕೆ ಸರಿಯಾಗಿ ಜೋತಿಷ್ಯಿ ಒಬ್ಬರು, ದರ್ಶನ್‌ಗೆ ರೈಟ್ ಟೈಂ ಬರೋದು 2027ಕ್ಕೆ ಎಂದಿದ್ದಾರೆ. ಅದು ಕೂಡ ದರ್ಶನ್ ಚಿತ್ರರಂಗವನ್ನ ತೊರೆದು ಕಂಪ್ಲೇಟ್ ರಾಜಕೀಯಕ್ಕೆ ಬರುತ್ತಾರೆ ಅಂತ ಪ್ರಶಾಂತ್ ಕಿಣಿ ಹೆಸರಿನ ಜೋತಿಷಿ ಭವಿಷ್ಯ ನುಡಿದಿದ್ದಾರೆ.
ದರ್ಶನ್ ರಾಜಕೀಯಕ್ಕೆ ಬರುತ್ತಾರಂತೆ, 2027ರಿಂದ ದರ್ಶನ್ ರಾಜಕೀಯ ಜೀವನ ಶುರುವಾಗುತ್ತಂತೆ. ಮುಂಬರುವ ಲೋಕಸಭೆ ಎಲೆಕ್ಷನ್‌ನಲ್ಲಿ ದರ್ಶನ್ ರಾಜಕಾರಣಿ ಆಗುತ್ತಾರೆ ಅಂತ ಜೋತಿಷಿ ಪ್ರಶಾಂತ್ ಕಿಣಿ ಟ್ವಿಟ್ ಮಾಡಿ ಭವಿಷ್ಯ ಹೇಳಿದ್ದಾರೆ. ಇದೇ ಟೈಂನಲ್ಲಿ ದರ್ಶನ್ ಸಿನಿ ಖರಿಯರ್ ಬಗ್ಗೆಯೂ ಹೇಳಿರೋ ಜೋತಿಷಿ, 2024ರ ಆಗಸ್ಟ್‌ನಿಂದ 2027ರ ಅಕ್ಟೋಬರ್ ವರೆಗು ದಚ್ಚು ಸಿನಿ ಜೀವನ ಸೂಪರೋ ಸೂಪರ್. ಆ ನಂತ್ರ ಕಥಮ್ ಎಂದಿದ್ದಾರೆ.
Story of a Jailed Kannada film star guess who !!!!???
Do you know who are the other characters in this Story ???? https://t.co/ySJWSv2uy2— Prashanth Kini (@AstroPrashanth9) August 31, 2024
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q