ಬಳ್ಳಾರಿ: ಜೈಲಿನಲ್ಲಿ ನಟ ದರ್ಶನ್ ಟಿವಿ, ಸರ್ಜಿಕಲ್ ಚೇರ್ ಮತ್ತು ವೆಸ್ಟರ್ನ್ ಟಾಯ್ಲೆಟ್ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದ ಬಳಿಕ ಇದೀಗ ಮತ್ತೊಂದು ಬೇಡಿಕೆಯಿಟ್ಟಿದ್ದಾರಂತೆ.
ಜೈಲಿನಲ್ಲಿರುವ ದರ್ಶನ್ ಗೆ ಫಿಟ್ ನೆಸ್ ಕಾಯ್ದುಕೊಳ್ಳುವುದೇ ದೊಡ್ಡ ಚಿಂತೆಯಾಗಿದೆಯಂತೆ. ಹೀಗಾಗಿ ಅನ್ನಕ್ಕೆ ಬ್ರೇಕ್ ಹಾಕಿರುವ ದರ್ಶನ್, ಚಪಾತಿ, ಮುದ್ದೆ ಮತ್ತು ವಿಟಮಿನ್ಸ್ ಮಾತ್ರೆಗಳ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿ ನೀಡುತ್ತಿರುವ ಚಪಾತಿ ದರ್ಶನ್ ಗೆ ಸಾಕಾಗುತ್ತಿಲ್ಲ. ಹೀಗಾಗಿ ಹೆಚ್ಚಿನ ಚಪಾತಿ ನೀಡುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ. ಆದರೆ, ಜೈಲಿನ ಆಹಾರ ಮೆನು ಪ್ರಕಾರ ಪ್ರತಿ ಕೈದಿಗೆ ಇಂತಿಷ್ಟೇ ಆಹಾರ ನೀಡಬೇಕೆಂಬ ನಿಯಮವಿದೆ. ಆದರೆ, ಅದನ್ನು ಮೀರಿ ದರ್ಶನ್ ಹೆಚ್ಚಿನ ಚಪಾತಿಗೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಪರಿಶೀಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ದೇಹದ ಫಿಟ್ ನೆಸ್ ನಿರ್ವಹಣೆ ಮಾಡಬೇಕಾಗುತ್ತದೆ. ಹೀಗಾಗಿ ಹೆಚ್ಚಿನ ಚಪಾತಿ ನೀಡಿ ಎಂದು ದರ್ಶನ್ ಮನವಿ ಮಾಡಿದ್ದಾರೆ. ದೇಹದ ತೂಕ ಕಳೆದುಕೊಳ್ಳುವ ಭಯ ದರ್ಶನ್ ಅವರಲ್ಲಿ ಕಾಡುತ್ತಿದೆ. ಸಾಮಾನ್ಯವಾಗಿ ಜಿಮ್ ಮಾಡಿದವರು ಕೂಡಲೇ ವರ್ಕೌಟ್ ಬಿಟ್ಟರೆ ಚರ್ಮ ಜೋತು ಬಿದ್ದು ವಿಲಕ್ಷಣವಾಗಿ ಕಾಣುತ್ತದೆ. ಹೀಗಾಗಿ ದಾಸ ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳಲು ಮುಂದಾಗಿದ್ದು, ಹೆಚ್ಚಿನ ಚಪಾತಿ ಕೇಳುತ್ತಿದ್ದಾರೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q