ಚಿತ್ರದುರ್ಗದ ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣ ಸಂಬಂಧ, ದಯಾಮರಣ ಕೋರಿ ರಾಷ್ಟ್ರಪತಿಗೆ ಸಂತ್ರಸ್ತ ಬಾಲಕಿಯ ತಾಯಿ ಪತ್ರ ಬರೆದಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಸಂತ್ರಸ್ತ ಬಾಲಕಿಯ ತಾಯಿ, ‘ನನಗೆ ಹಾಗೂ ನನ್ನ ಮಕ್ಕಳಿಗೆ ದಯಾ ಮರಣ ನೀಡಿ. ನನ್ನ ಹಾಗೂ ಮಕ್ಕಳ ಜೀವನದ ಘನತೆ ಉಳಿಸುವಂತೆ ಪತ್ರದಲ್ಲಿ ಕೋರಿದ್ದಾರೆ.
ಪ್ರಧಾನಿಯವರ ‘ಭೇಟಿ ಬಚಾವೋ, ಭೇಟಿ ಪಡಾವೋ’ ಎಲ್ಲಿ ಹೋಯ್ತು. 20 ದಿನಗಳ ಕಾಲ ನಾನು ನರಕ ನೋಡಿದ್ದೇನೆ. ನನಗೆ ಈ ನರಕದಿಂದ ಮುಕ್ತಿಕೊಡಿ. ಒಡಲ ಉರಿಯಿಂದ ಈ ಕಣ್ಣೀರ ಪತ್ರ ಬರೆಯುತ್ತಿರುವೆ. ನಮ್ಮಂತಹವರು ನ್ಯಾಯ ಕೇಳಲು ಹೊರಗೆ ಬರಬಾರದು ಎಂದು ತೀವ್ರ ಮನನೊಂದು ಸಂತ್ರಸ್ತ ಬಾಲಕಿಯ ತಾಯಿ ಅಳಲು ತೋಡಿಕೊಂಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy