ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಡೆಂಘಿ ಪ್ರಕರಣಗಳು ಏರಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲೂ ಹೆಚ್ಚುತ್ತಿರುವ ಡೆಂಘಿ ಪ್ರಕರಣಗಳ ನಿಯಂತ್ರಣ & ಅರಿವು ಮೂಡಿಸುವ ನಿಟ್ಟಿನಲ್ಲಿ ಬಿಬಿಎಂಪಿಯು “ಡೆಂಘಿ ವಾರಿಯರ್” ಎಂಬ ವಿನೂತನ ಸ್ಪರ್ಧೆಯನ್ನು ಆಯೋಜಿಸಿದೆ.
ಈ ಸ್ಪರ್ಧೆಯಲ್ಲಿ ನಾಗರೀಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗಿದೆ. ಡೆಂಘಿ ನಿಯಂತ್ರಣಕ್ಕಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುವುದರ ಕುರಿತು ಇತರರಿಗೆ ಅರಿವು ಮೂಡಿಸಬೇಕು.
ಅದಕ್ಕಾಗಿ ಕಿರುಚಿತ್ರಗಳನ್ನು ಮಾಡಿ ಆ ವಿಡಿಯೋವನ್ನು ಪಾಲಿಕೆಯ Facebook & Twitter @BBMPSplHealth ಗೆ ಟ್ಯಾಗ್ ಮಾಡಬೇಕು. ಜು.25ರೊಳಗೆ ವಿಡಿಯೋ ಅಪ್ಲೋಡ್ ಮಾಡಲು ಅವಕಾಶವಿದ್ದು, ಹೆಚ್ಚು ಲೈಕ್ಸ್ ಪಡೆಯುವ 5 ವಿಡಿಯೋಗಳಿಗೆ ಪಾಲಿಕೆಯು ಡೆಂಘಿ ವಾರಿಯರ್ ಎಂದು ಗುರುತಿಸಿ ಬಹುಮಾನ ನೀಡಲಿದೆ.
ಮಾಹಿತಿ ಕಡ್ಡಾಯ:
ಸಾಮಾಜಿಕ ಜಾಲತಾಣ ಹಾಗೂ ಲಿಂಕ್/ಕ್ಯೂ.ಆರ್. ಕೋಡ್ನಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಸಮಯದಲ್ಲಿ ನಾಗರೀಕರಾದರೆ ಹೆಸರು, ದೂರವಾಣಿ ಸಂಖ್ಯೆ, ವಾರ್ಡ್, ಸ್ಥಳವನ್ನು ನಮೂದಿಸಬೇಕು. ವಿದ್ಯಾರ್ಥಿಗಳಾದರೆ ಹೆಸರು, ದೂರವಾಣಿ ಸಂಖ್ಯೆ, ತರಗತಿ, ಸ್ಥಳ, ಶಾಲೆಯ ಹೆಸರು ನಮೂದಿಸಿ ಅಪ್ಲೋಡ್ ಮಾಡಬೇಕು ಎಂದು ಬಿಬಿಎಂಪಿ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA