ತುರುವೇಕೆರೆ: ಡಿಸೆಂಬರ್ ವೇಳೆಗೆ ತುರುವೇಕೆರೆ ತಾಲೂಕಿನಲ್ಲಿ 57 ರ ನಮೂನೆ ಅರ್ಜಿ ದಾರರಿಗೆ ಸಾಗುವಳಿ ಚೀಟಿ ವಿತರಿಸುವ ವಿಶ್ವಾಸವಿದೆ ಎಂದು ಶಾಸಕ ಮಸಾಲ ಜಯರಾಮ್ ಹೇಳಿದರು.
ತುರುವೇಕೆರೆ ಶಾಸಕ ಮಸಾಲ ಜಯರಾಮ್ ಸುದ್ದಿಗಾರರೊಂದಿಗೆ ಗುಬ್ಬಿ ಪಟ್ಟಣದಲ್ಲಿ ಮಾತನಾಡಿ, ನಮ್ಮ ತುರುವೇಕೆರೆ ತಾಲೂಕಿನಲ್ಲಿ 57 ನಮೂನೆ ಅರ್ಜಿ ಬಾಕಿ ಉಳಿದಿದ್ದು, ಅವುಗಳನ್ನು ಪರಾಮರ್ಶೆ ಮಾಡಿ ಬರುವ ಡಿಸೆಂಬರ್ ವೇಳೆಗೆ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿಗಳನ್ನು ಮಂಜೂರಿ ಕೊಡಲಾಗುವುದು ಎಂದರು.
ಇನ್ನೂ ತುರುವೇಕೆರೆ ತಾಲೂಕಿನಲ್ಲಿ ಯಾವುದೇ ಅವ್ಯವಹಾರಗಳು ನಡೆದಿರುವುದಿಲ್ಲ 2017ರ ಹಿಂದೆ ನಡೆದಿದ್ದು, ಅವುಗಳನ್ನು ವಿಭಾಗಾಧಿಕಾರಿಗಳಿಗೆ ಪರಿಶೀಲನೆ ಮಾಡಲು ಕೊಟ್ಟಿದ್ದೆವು. ಅವುಗಳಲ್ಲಿ 915 ಅರ್ಜಿಗಳನ್ನ ನಾನೇ ಕುದ್ದು ವಜಾ ಮಾಡಿಸಿರುತ್ತೇನೆ. ನನ್ನ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಭಾಗದಲ್ಲಿ ಯಾವುದೇ ಅವ್ಯವಹಾರಗಳು ನಡೆದಿರುವುದಿಲ್ಲ. ಏಕೆಂದರೆ, ನನ್ನ ಭಾಗದಲ್ಲಿ ಹಿಡಿತ ಸಾಧಿಸಿದ್ದೇನೆ ಎಂದರು.
ವರದಿ: ಸುರೇಶ್ ಬಾಬು ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy