ಬೆಂಗಳೂರು: ಇಂದಿನ ಜಾಗತೀಕರಣ, ಉದಾರಿಕರಣ ಹಾಗೂ ಯಾಂತ್ರಿಕರಣದ ಕಾಲಘಟ್ಟದಲ್ಲಿ ಯುವ ಪೀಳಿಗೆ ಸ್ಪರ್ಧಾತ್ಮಕ ಮನೋಭಾವ ರೂಪಿಸಿಕೊಂಡು ಸಂಘಟಿತರಾಗುವಂತೆ ಹಿರಿಯ ಐ.ಪಿ.ಎಸ್ ಅಧಿಕಾರಿ ಜಿನೇಂದ್ರ ಕಣಗಾವಿ ಜೈನ ಸಮುದಾಯಕ್ಕೆ ಕರೆ ನೀಡಿದರು.
ಅವರಿಂದು ಇಲ್ಲಿನ ಪೇರೆಂಟ್ ಅಸೋಸಿಯೇಷನ್ ಕಾಲೇಜಿನಲ್ಲಿ ರಾಜಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುಹಾಸ್ತಿ ಜೈನ್ ಮಿಲನ್ ದೂರದೃಷ್ಟಿ, ಕ್ರಿಯಾಶೀಲತೆ , ಹೊಂದಾಣಿಕೆ ಮನೋಭಾವತ್ವದ ಸಂಘಟನೆಯಾಗಿದ್ದು ಕಳೆದ ಹಲವಾರು ವರ್ಷಗಳಿಂದ ಉತ್ತಮ ಕಾರ್ಯಕ್ರಮಗಳ ಮೂಲಕ ಹೆಚ್ಚು ಪ್ರವರ್ಧಮಾನಕ್ಕೆ ಬಂದಿದೆ ಎಂದರು.
ಈ ಹಿಂದೆ 60 ವರ್ಷ ಮೀರಿದ್ದವರಿಗಿದ್ದ ಹಲವು ಕಾರ್ಯಕ್ರಮಗಳಿಗೆ ಯುವ ಪೀಳಿಗೆಯನ್ನ ಸಂಘಟಿಸಿ ಒಂದು ಗುಡಿಸುತ್ತಿದೆ, ಜೈನರನ್ನ ಒಂದೆಡೆ ಸೇರಿಸಿ ಸ್ಪರ್ಧಾತ್ಮಕ ಮನೋಭಾವದ ಮೂಲಕ ಜಿನ ಸಮ್ಮಿಲನವನ್ನು ಪ್ರೋತ್ಸಾಹಿಸುತ್ತಿದೆ, ಇದರ ಜೊತೆಗೆ ಧಾರ್ಮಿಕ ಮನೋಭಾವ ಸದುದ್ದೇಶವು ಮುಖ್ಯವಾಗಿದೆ ಎಂದರು. ದೈಹಿಕ ಸಾಮರ್ಥ್ಯಕ್ಕೆ ಕ್ರೀಡೆ ಸಹಕಾರಿಯಾಗಲಿದ್ದು, ಇದೊಂದು ಬಾವನಾತ್ಮಕ ಸಮ್ಮೇಳನವಾಗಿದೆ ಎಂದರು.
ಸ್ಪರ್ಧಾತ್ಮಕ ಚಟುವಟಿಕೆಯ ಬಗ್ಗೆ ಉತ್ಸಾಹ ಜೈನರಲ್ಲಿ ತುಂಬಾ ಕಡಿಮೆ ಇದ್ದು ಐ.ಎ.ಎಸ್., ಐ.ಪಿ.ಎಸ್, ಕೆ.ಎ.ಎಸ್. ಪರೀಕ್ಷೆಗಳಲ್ಲಿ ಹೆಚ್ಚು ಭಾಗವಹಿಸಬೇಕೆಂದ ಅವರು, ಸಮುದಾಯ ಇದಕ್ಕೆ ನೂರಾರು ಕೋಟಿ ರೂ.ಗಳನ್ನುಖರ್ಚು ಮಾಡುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಸುಭಾಷ್ ಜಿನ ಗೌಡ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಯುವ ಜೈನ್ ಮಿಲನ್ ಸಂಘಟಿತವಾಗುತ್ತಿದೆ, ಯುವಜನತೆಯ ಸಂಘಟನೆಯಿಂದ ಸುಹಾಸ್ತಿ ಯಶಸ್ಸು ಕಂಡಿದೆ, ಸದಸ್ಯತ್ವಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಸುಹಾಸ್ತಿ ಹೆಚ್ಚು ಹೆಚ್ಚು ಸಂಘಟಿತರಾಗಬೇಕೆಂದರು. ಕ್ರೀಡೆ ,ಸಂಸ್ಕೃತಿ ,ಡ್ರಾಯಿಂಗ್ ಇನ್ನಿತರ ಚಟುವಟಿಕೆಗಳಿಗೆ ಸುಹಸ್ತಿ ಹೆಚ್ಚು ಸಹಕಾರ ನೀಡಿದೆ ಎಂದರು.
ಭಾರತೀಯ ಜೈನ್ ಮಿಲನ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ರಾಜಾಜಿನಗರ ಪೇರೆಂಟ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಮೃತ್ಯುಂಜಯ ಮಾತನಾಡಿ, ಭಾರತೀಯ ಜೈನ್ ಮಿಲನ್ ಈ ಹಿಂದೆ ಸಮಾಜ ಸಂಘಟನೆಗೆ ಹಲವು ಪ್ರಯತ್ನ ಮಾಡಿದರು ಯಶಸ್ಸು ಕಂಡಿಲ್ಲ, ಸಂಘಟನೆಗೆ ಯುವ ಪೀಳಿಗೆ ಅಗತ್ಯವಾಗಿದ್ದು, ಈಗ ಸುಹಾಸ್ತಿ ಜೈನ್ ಯುವ ಮಿಲನ್ ನಿಂದ ಯಶಸ್ಸು ಕಾಣುತ್ತಿದೆ. ಕ್ರೀಡೆಯಿಂದ ಪ್ರಾರಂಭವಾಗಿ ಹಲವು ಚಟುವಟಿಕೆಗಳ ಮೂಲಕ ಯುವಕ , ಯುವತಿಯರಿಗೆ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಸಂಘಟಿತರಾಗುವಂತೆ ಕರೆ ನೀಡಿದರು.
ಕರ್ನಾಟಕ ಜೈನ್ ಅಸೋಸಿಯೇಷನ್ ನಿರ್ದೇಶಕ ಹಾಗೂ ವ್ಯಾನ್ ಗಾರ್ಡು ಬಿಜಿನೆಸ್ ಸ್ಕೂಲ್ ನ ಡಾ. ಅನಿಲ್ ಕುಮಾರ್ ಮಾತನಾಡಿ, ಸುಹಾಸ್ತಿ ಯುವ ಜೈನಮಿಲನ ಕಾರ್ಯಕ್ರಮಗಳನ್ನು ಶ್ಲಾಘಿಸಿ, ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜಾಜಿನಗರ ಪೇರೆಂಟ್ಸ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು, ಲೋಕಾಯುಕ್ತ ಡಿ .ವೈ .ಎಸ್ ಪಿ.ವೀರೇಂದ್ರ ಕುಮಾರ್, ಬೆಂಗಳೂರಿನ ಪುಟ್ಟೇನಹಳ್ಳಿ, ಶ್ರೀ ಶೀತಲನಾಥ ಎಜುಕೇಶನ್ ಅಂಡ್ ಚಾರಿಟಬಲ್ ಟ್ರಸ್ಟ್ ನ ರಾಜ್ಯದ್ಯಕ್ಷರಾದ ಎಸ್.ವಿ.ಧನ್ಯ ಕುಮಾರ್, ಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷ ನಾಗಶ್ರೀ ಮುಪ್ಪಾನೆ , ಸುಹಾಸ್ತಿ ಜೈನ್ ಮಿಲನ ಅಧ್ಯಕ್ಷ ವಜ್ರ ಕುಮಾರ್. ಕರ್ನಾಟಕ ಜೈನ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿಯ ಸದಸ್ಯರಾದ ಚಿತ್ತಾ ಎಂ.ಜಿನೇಂದ್ರ, ಜ್ಯೋತಿ ನೇಮಿ ರಾಜ್, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಜೈನ ಕ್ರೀಡಾ ಸಂಘಟನೆಗಳು ,ಹಲವಾರು ಯುವ ಜೈನ್ ಸಂಘಟನೆಗಳು, ಮಹಿಳಾ ಸಂಘಟನೆಗಳು, ಯುವ ಜೈನ್ ಮಿಲನ್ ಗಳು ಸುಹಾಸ್ತಿ ಯುವ ಜೈನ್ ಮಿಲನ ಪದಾಧಿಕಾರಿಗಳು, ಶ್ರಾವಕ– ಶ್ರಾವಕಿಯರು ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸುಹಾಸ್ತಿ ಯುವ ಜೈನ್ ಮಿಲನ್ ನ ದರ್ಶನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವರದಿ: ಜೆ.ರoಗನಾಥ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW