ನವಗ್ರಹ ಚಿತ್ರದಲ್ಲಿ ನಟಿಸಿದ್ದ ಧರ್ಮ ಕೀರ್ತಿರಾಜ್ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 11ಗೆ ಎಂಟ್ರಿ ನೀಡಿದ್ದಾರೆ. ಕಿಚ್ಚ ಸುದೀಪ್ ಅವರ ಜೊತೆಗೆ ವೇದಿಕೆಯಲ್ಲಿ ಮಾತನಾಡುತ್ತಿದ್ದ ವೇಳೆ ದರ್ಶನ್ ಬಗ್ಗೆ ಧರ್ಮ ಕೀರ್ತಿರಾಜ್ ಮಾತನಾಡಿದರು.
ಧರ್ಮ ಕೀರ್ತಿರಾಜ್ ಅವರು 6ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದರು. ಬಿಗ್ ಬಾಸ್ ಮನೆಯೊಳಗೆ ಹೋಗುವುದಕ್ಕೂ ಮೊದಲು ಕಿಚ್ಚ ಸುದೀಪ್ ಜೊತೆಗೆ ಧರ್ಮ ಕೀರ್ತಿರಾಜ್ ಮಾತನಾಡಿದರು.
ನವಗ್ರಹ ಸಿನಿಮಾದಲ್ಲಿ ಅಂದು ದರ್ಶನ್ ಅವರು ಅವಕಾಶ ನೀಡಿದ್ದರು ಎಂದು ಧರ್ಮ ಕೀರ್ತಿ ರಾಜ್ ಅವರು ದರ್ಶನ್ ಅವರನ್ನು ನೆನಪಿಸಿಕೊಂಡರು. ನಮ್ಮ ತಂದೆ 40 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಆಶೀರ್ವಾದ ಮತ್ತು ಜನರ ಆಶೀರ್ವಾದ ಇದೆ. ನನ್ನ ಮೊದಲ ಸಿನಿಮಾ ‘ನವಗ್ರಹ’. ತೂಗುದೀಪ ಸಂಸ್ಥೆಯಿಂದ ನಾನು ಬಂದಿದ್ದು. ದರ್ಶನ್ ಸರ್ ಮತ್ತು ದಿನಕರ್ ಸರ್ ನನಗೆ ಅವಕಾಶ ನೀಡಿದ್ದು. ‘ಕಣ್ ಕಣ್ಣ ಸಲಿಗೆ..’ ಹಾಡು ನನ್ನನ್ನು ಈವರೆಗೂ ಕಾಪಾಡಿಕೊಂಡು ಬಂದಿದೆ ಎಂದು ಧರ್ಮ ಕೀರ್ತಿರಾಜ್ ಹೇಳಿದರು.
ಧರ್ಮ ಕೀರ್ತಿರಾಜ್ ಅವರ ಮಾತುಗಳಿಗೆ ಕಿಚ್ಚ ಸುದೀಪ್ ಅವರು ತಲೆದೂಗಿದರು. ಆದ್ರೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಅಂದ ಹಾಗೆ ಬಿಗ್ ಬಾಸ್ ಮನೆಯೊಳಗೆ ತೆರಳಿದ ಧರ್ಮ ಕೀರ್ತಿರಾಜ್ ಸ್ವರ್ಗಕ್ಕೆ ಎಂಟ್ರಿ ಪಡೆದುಕೊಂಡರು. ಅವರ ಜೊತೆಗೆ ಬಂದ ನಟಿ ಅನುಷಾ ರೈ ಕೂಡ ನರಕಕ್ಕೆ ಹೋಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296