ಪಾವಗಡ: ತಾಲೂಕಿನ ವ್ಯಾಪ್ತಿಯಲ್ಲಿ ಮರಿದಾಸನಹಳ್ಳಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶಿಕ್ಷಣ ಕಾಯ೯ಕ್ರಮದಡಿಯಲ್ಲಿ 10 ನೇ ತರಗತಿಯ ಮಕ್ಕಳಿಗೆ ವಿಶೇಷ ಟ್ಯೂಷನ್ ಕ್ಲಾಸ್ ನೀಡಲಾಗುತ್ತಿದ್ದು, ಇದರ ಉದ್ಘಾಟನೆಯನ್ನ ತಾಲೂಕು ಯೋಜನಾಧಿಕಾರಿಗಳಾದ ಮಹೇಶ್ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಡಾ. ವಿರೇಂದ್ರ ಹೆಗ್ಗಡೆಯವರ ಆಶಯದಂತೆ ತಾಲ್ಲೂಕಿನ ಗ್ರಾಮಾಂತರ 6 ಪ್ರೌಢಶಾಲೆಗಳಲ್ಲಿ 10 ನೇ ತರಗತಿಯ ಮಕ್ಕಳಿಗೆ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನ ಪಡೆಯಲು, ಗಣಿತ ಹಾಗೂ ಇಂಗ್ಲೀಷ್ ವಿಷಯಗಳಿಗೆ ಒತ್ತು ಕೊಟ್ಟು, 3 ತಿಂಗಳ ಕಾಲ ವಿಶೇಷ ಟ್ಯೂಷನ್ ಮಾಡಲು ನುರಿತ ಅನುಭವ ಹೊಂದಿರುವ ಶಿಕ್ಷಕರಿಗೆ 3 ತಿಂಗಳು ಯೋಜನೆಯಿಂದ ಗೌರವಧನ ನೀಡಿ ಸಂಜೆ 4 ಗಂಟೆಯಿಂದ 5 ಗಂಟೆಯವರಿಗೆ ಟ್ಯೂಷನ್ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ವಾಷಿ೯ಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನ ಪಡೆದು ಮುಂದಿನ ನಿಮ್ಮ ಭವಿಷ್ಯವನ್ನ ಉತ್ತಮವಾಗಿ ರೂಪಿಸಿಕೊಳ್ಳಿ ಎಂದು ತಿಳಿಸಿದರು.
ಕಾಯ೯ಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ರಾಜಗೋಪಾಲ್, ವಲಯ ಮೇಲ್ವಿಚಾರಕಿ ವೆಂಕಟರತ್ನ, ಶಾಲೆಯ ಸಹಶಿಕ್ಷಕರು ಹಾಗೂ ವಿದ್ಯಾಥಿ೯ಗಳು ಭಾಗವಹಿಸಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx