ಸರಗೂರು: ನಮ್ಮ ಯೋಜನೆವತಿಯಿಂದ ಮನೆ ನಿರ್ಮಾಣ ಮಾಡಿ, ಅವರ ಕನಸಿನ ಸೂರು ಕಟ್ಟಿಕೊಡುವ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದೇವೆ. ಬಡವರ ಪರವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಾ ಕಾಲ ಇದೆ. ಈ ನಿಟ್ಟಿನಲ್ಲಿ ಬಡವರ ನೊಂದವರ ಪರವಾಗಿ ನಿಸ್ವಾರ್ಥ ಸೇವೆಯನ್ನು ಈ ಯೋಜನೆಯಿಂದ ನಿರಂತರವಾಗಿ ಮಾಡುತ್ತೇವೆ ಎಂದು ಹುಲ್ಲಹಳ್ಳಿ ಯೋಜನಾಧಿಕಾರಿ ಗಣೇಶ ನಾಯಕ ತಿಳಿಸಿದರು.
ತಾಲೂಕಿನ ಕೋತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋತ್ತೇಗಾಲ ಗ್ರಾಮದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಯಿಂದ ಶುಕ್ರವಾರದಂದು ಪುಟ್ಟ ಲಕ್ಷ್ಮಮ್ಮ ರವರಿಗೆ ಕನಸಿನ ವಾತ್ಸಲ್ಯ ಮನೆಯ ಟೆಪ್ ಕತ್ತರಿಸುವ ಮೂಲಕ ಮನೆಯ ಗೃಹಪ್ರವೇಶ ಮಾಡಿ ಮಾತನಾಡಿದರು.
ಬಡವರಾದ ಸದಸ್ಯರಿಗೆ ಯೋಜನೆಯಡಿಯ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ರವರ ಹಾಗೂ ಅವರ ಧರ್ಮಪತ್ನಿ ಹೇಮಾವತಿರವರ ಕನಸಿನ ಕೂಸು ಮನೆ ನಿರ್ಮಾಣ ಹಾಗೂ ಕೆರೆ ಅಭಿವೃದ್ಧಿ ಸಾಮಾಜದ ಭವನಗಳು ಅಭಿವೃದ್ಧಿ ಪಡಿಸಲು ಮುಂದಾಗಿ. ಅದರಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳಲ್ಲಿ ಇರುವ ಸದಸ್ಯರಿಗೆ ಕಡುಬಡವರಿಗೆ ಮನೆ ಮತ್ತು ಸಾಲದ ರೂಪದಲ್ಲಿ ನೀಡಲಾಗುತ್ತದೆ. ಬೇರೆ ಸಂಘಗಳು ಸಾಲವನ್ನು ನೀಡಿ ಜನರಿಗೆ ತೊಂದರೆ ನೀಡುತ್ತಿದ್ದಾರೆ.ಅದರೆ ಅ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿಲ್ಲ.ನಾವು ಗ್ರಾಮಗಳು ಇನ್ನೂ ಇತರೆ ಕೆಲಸ ಕಾರ್ಯಗಳು ಮಾಡಿ ಅಭಿವೃದ್ಧಿ ಮಾಡುಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಮುಂದಾಗಿದೆ ಎಂದರು.
ಸಮಾಜ ಬದಲಾವಣೆಯಾಗಬೇಕಾದಲ್ಲಿ ಬದುಕಿಗೆ ಮೂಲಭೂತ ಸೌಕರ್ಯಗಳನ್ನು ಅವಶ್ಯಕ ಅದರಲ್ಲಿ ಪ್ರಮುಖವಾಗಿ ಸೂರು ಎನ್ನುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಿಸಿಕೊಂಡುಲಾಗುತ್ತಿದೆ ಎಂದು ತಿಳಿಸಿದರು.
ಯೋಜನೆಯಲ್ಲಿ ಉಚಿತ ವಸತಿ ನಿರ್ಮಾಣ ಮಾಡಿಕೊಡಲಾಗುತ್ತದೆ. ಸದಸ್ಯರು ನಿವೇಶನ ಹೊಂದಿದ್ದರೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬಂತೆ ಧರ್ಮಸ್ಥಳ ಸಂಸ್ಥೆ ಮಹಿಳೆಯರಿಗೆ ಆರ್ಥಿಕ ನೆರವು ನೀಡಿತ್ತಿದ್ದು.ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವಾತ್ಸಲ್ಯ ಕಾರ್ಯಕ್ರಮದಲ್ಲಿ ಮಹಿಳೆಗಾಗಿಯೇ ಪೌಷ್ಟಿಕ ಆಹಾರ ಇನ್ನೂ ಇತರೆ ಸೌಲಭ್ಯಗಳನ್ನು ನೀಡಲಾಗುತ್ತದೆ.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಚಲುವಪ್ಪ, ಒಕ್ಕೂಟ ಅಧ್ಯಕ್ಷ ಸಣ್ಣಸ್ವಾಮಿಶೆಟ್ಟಿ ಸಿ.,ಕುರುಬ ಜನಾಂಗದ ಯಜಮಾನ್ರು ಬಿರೇಗೌಡ, ವಿಶ್ವಕರ್ಮ ಜನಾಂಗದ ಯಜಮಾನ್ರು ಚಲುವಚಾರಿ, ಲಿಂಗಾಯತ ಜನಾಂಗದ ಯಜಮಾನ್ರು ನಂಜಪ್ಪ , ಗ್ರಾಮದ ಮುಖಂಡ ವಸಂತ ಪಾಟೀಲ್, ಮುಳ್ಳೂರು ವಲಯ ಮೇಲ್ವಿಚಾರಕ ನರಸಿಂಹಮೂರ್ತಿ, ಜ್ಞಾನವಿಕಾಸ ಅಧಿಕಾರಿ ಬೃಂದಾ, ಸೇವಾ ಪ್ರತಿನಿಧಿ ನಾಗರಾಜು, ಡಿ.ಎಲ್.ಇ ರಾಕೇಶ್, ಗ್ರಾಮದ ಮುಖಂಡರು ಹಾಗೂ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx