ತುಮಕೂರು: ಅಡಗೂರು ಗ್ರಾಮದ ಜಯಲಕ್ಷ್ಮೀ ಅವರುವ ಮೂಲಸೌಕರ್ಯ ವಂಚಿತ ಮಹಿಳೆಯಾಗಿದ್ದು, ಅವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘ ಗುರುತಿಸಿ ಮನೆ ಕಟ್ಟಿಕೊಟ್ಟಿದೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಅಡಗೂರುನಲ್ಲಿ ಈ ಘಟನೆ ನಡೆದಿದೆ. ಜ್ಞಾನ ವಿಕಾಸ ಕಾರ್ಯಕ್ರಮದಡಿ ಮನೆ ನಿರ್ಮಾಣ ಮಾಡಿ ಕೊಡಲಾಗಿದ್ದು, ವೀರೇಂದ್ರ ಹೆಗ್ಗಡೆ ಹಾಗೂ ಅವರ ಧರ್ಮಪತ್ನಿ ಹೇಮಾವತಿ ಅವರ ಆಶಯದಂತೆ ಮನೆ ನಿರ್ಮಾಣ ಮಾಡಿಕೊಡಲಾಯಿತು.
ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಹಾಗೂ ತಾಲೂಕಿನ ಜಯಲಕ್ಷ್ಮಿ, ಪಿಓ ರಾಜೇಶ್ ದೀಪ ಬೆಳಗುವ ಮೂಲಕ ಮನೆ ಉದ್ಘಾಟಿಸಿದ್ರು. ಬಳಿಕ ಸಂಸ್ಥೆಯಿಂದ ಗ್ರಾಮದ ಜಯಲಕ್ಷ್ಮಿ ಅವರಿಗೆ ಮನೆ ಹಸ್ತಾಂತರಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4