ತುರುವೇಕೆರೆ: ರಾಮನಗರ ಚನ್ನಪಟ್ಟಣಕ್ಕೆ ನೀರು ಕೊಡಲು ಎಕ್ ಪ್ರೆಸ್ ಚಾನಲ್ ಅನ್ನು ನಿರ್ಮಿಸಲು ಮುಂದಾಗಿದ್ದರು. ಆ ಕಾಮಗಾರಿಯನ್ನು ಜಿಲ್ಲಾ ರೈತರ ನಾಯಕರುಗಳ ಸಹಕಾರದಿಂದ ಮುಚ್ಚಿಸಿದ್ದೇವೆ.
ಈ ಚಾನಲ್ ಅನ್ನು ನಿರ್ಮಿಸಲು ಸುಮಾರು 12:1/2ಅಡಿ ಆಳದ ಚಾನೆಲ್ ಹಾಗೂ ದೊಡ್ಡ ವ್ಯಾಸದ ಪೈಪುಗಳನ್ನು ಅಳವಡಿಸಲು ಬಿಟ್ಟರೆ, ಟಿಬಿಸಿ ನಾಲೆಯಿಂದ ಒಂದು ಹನಿ ನೀರು ಕೂಡ ಉಳಿಯುವುದಿಲ್ಲ.
ಇದೊಂದು ಕಾಮಗಾರಿಯನ್ನು ಮಾಡಲು ಅವಕಾಶ ಮಾಡಿಕೊಟ್ಟರೆ, ತುರುವೇಕೆರೆ ತಾಲೂಕಿಗೆ ಮೀಸಲಾಗಿರುವ 2.80 ಟಿಎಂಸಿ ನೀರಿನಲ್ಲಿ ಸಿಗುವುದಿಲ್ಲ ಎಂದು ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ. ಕೃಷ್ಣಪ್ಪ ತಮ್ಮ ಸ್ವಗೃಹದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.
ಇದೇ ತಿಂಗಳ 30 /05/2024 ರ ಗುರುವಾರ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರ ತುಮಕೂರಿನ ನಿವಾಸದ ಮುಂಭಾಗ ಬೆಳಿಗ್ಗೆಯಿಂದ ಸಂಜೆಯವರೆಗೆ ಲಿಂಕ್ ಕೆನಾಲ್ ವಿರೋಧಿಸಿ ಧರಣಿ ನಡೆಸಲಾಗುವುದು ಎಂದು ಹೇಳಿ, ಈ ಕಾಮಗಾರಿಯನ್ನು ಮಾಡಲು ಬಿಟ್ಟರೆ, ಜಿಲ್ಲೆಯ ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು, ಮಧುಗಿರಿ, ಕೊರಟಗೆರೆ, ತುಮಕೂರು ಗ್ರಾಮಾಂತರ ಕ್ಷೇತ್ರಗಳಿಗೆ ಒಂದು ಹನಿ ನೀರನ್ನು ನೋಡಲು ಅಸಾಧ್ಯವಾಗಿದೆ.
ಈ ಕಾರಣಕ್ಕಾಗಿ ಜಿಲ್ಲೆಯ ಹಲವಾರು ರೈತರು, ರಾಜಕೀಯ ಮುಖಂಡರುಗಳು ನಮ್ಮ ಜೊತೆ ಸೇರಿ ಸಹಕಾರ ಮತ್ತು ಬೆಂಬಲವನ್ನು ನೀಡಿದ ಫಲವಾಗಿ, ಗುಬ್ಬಿ ತಾಲೂಕಿನ ಸಿ ಎಸ್ ಪುರ ಬಳಿ ನಡೆಯುತ್ತಿದ್ದ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯ ಚಾನೆಲ್ ಅನ್ನು ಮುಚ್ಚಿಸಿದ್ದೇವೆ.
ಈ ಹೋರಾಟಕ್ಕೆ ಜನರು ಸಾಗರೋಪಾದಿಯಲ್ಲಿ ಬಂದು ಯಶಸ್ವಿಗೊಳಿಸಿದ್ದಾರೆ. ಜನರು ಈ ಕಾಮಗಾರಿಯ ಬಗ್ಗೆ ಜಾಗೃತರಾಗಿದ್ದಾರೆ.
ಆದರೆ, ಯಾಕೋ ತುರುವೇಕೆರೆ ತಾಲೂಕಿನ ಜನ ಇನ್ನೂ ಜಾಗೃತವಾಗಿಲ್ಲ. ಈ ಮಾಧ್ಯಮದ ಮೂಲಕ ಜಿಲ್ಲೆಯ ಜನರಲ್ಲಿ ಕಳಕಳಿ ಏನೆಂದರೆ, ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷವೇದ ಮರೆತು ಈ ಹೋರಾಟಕ್ಕೆ ಅಣಿಯಾಗಬೇಕು. ನಮ್ಮ ಜಿಲ್ಲೆಯ ಜನರು ಯಾರದ್ದು ಹಣ ಆಮಿಷಗಳಿಗೆ ಒಳಗಾಗಿ ಮೈ ಮರೆತರೆ, ಈ ಜಿಲ್ಲೆಗೆ ಮಾಡಿದಂತಹ ಮೋಸ ಎಂದು ನಾನು ಭಾವಿಸುತ್ತೇನೆ.
ನಮ್ಮವಿರುದ್ಧ ಮಾಗಡಿ, ಚನ್ನಪಟ್ಟಣ, ರಾಮನಗರಗಳಲ್ಲಿ ಪ್ರತಿಭಟನೆ ಮಾಡಿದ್ದಾರೆ. ಸಂತೋಷ ಅವರ ಬಗ್ಗೆ ನಾವು ಮಾತನಾಡುವುದಿಲ್ಲ. 3.8 ಟಿಎಂಸಿ ನೀರು ಕುಣಿಗಲ್ ಮಾಗಡಿಗೆ ಹಂಚಿಕೆಯಾಗಿದೆ. ಅದನ್ನು ತೆಗೆದುಕೊಂಡು ಹೋಗಲಿ. ಅದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ವಿರೋಧವೂ ಇಲ್ಲ. ಈ ಕಾಮಗಾರಿಗೆ 700 ರಿಂದ 800 ಕೋಟಿ ರೂಪಾಯಿಗಳನ್ನು ಸರ್ಕಾರ ಖರ್ಚು ಮಾಡಿ ಚಾನಲ್ ಕಾಮಗಾರಿ ಮಾಡಿದ್ದಾರೆ. ಅದರಲ್ಲಿ 560 ಕ್ಯೂಸೆಕ್ಸ್ ನೀರು ಕುಣಿಗಲ್ ಗೆ ಹೋಗುತ್ತದೆ ಅದನ್ನು ಬಳಸಿಕೊಳ್ಳಲಿ. ಮಾಗಡಿ ಕುಣಿಗಲ್ ಗೆ ಹಂಚಿಕೆಯಾಗಿರುವ 3.8 ಟಿಎಂಸಿ ನೀರನ್ನು ಮೊದಲ ಹಂತದಲ್ಲೇ ತೆಗೆದುಕೊಳ್ಳಲಿ.
ಇನ್ನೂ 200 ಕ್ಯೂ ಸೆಕ್ಸ್ ನೀರು ಹೆಚ್ಚಾಗಿ ತೆಗೆದುಕೊಂಡು ಹೋಗಿ ಅದನ್ನು ಬಿಟ್ಟು ಎಕ್ಸ್ ಪ್ರೆಸ್ ಕೆನಾಲ್ ನಿರ್ಮಿಸಿ ಚನ್ನಪಟ್ಟಣ, ಮಾಗಡಿಗೆ ತೆಗೆದುಕೊಂಡು ಹೋಗುವುದಕ್ಕೆ ವಿರೋಧವಿದೆ.
ನಮ್ಮ ಜಿಲ್ಲೆಯ ನಾಯಕರುಗಳೊಂದಿಗೆ ಸಭೆ ನಡೆಸಿ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರ ಡಾ.ಜಿ. ಪರಮೇಶ್ವರ್ ಅವರ ತುಮಕೂರಿನ ನಿವಾಸದ ಮುಂದೆ, ದಿನಾಂಕ 30/05/2024 ರಂದು ಗುರುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಧರಣಿ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಿಲ್ಲಾ ಸಚಿವರು ಈ ಜಿಲ್ಲೆಯ ಜನತೆಗೆ ಆಗುವ ಅನ್ಯಾಯವನ್ನು ತಡೆದು ಜಿಲ್ಲೆಯ ಜನತೆಯ ಪರವಾಗಿ ನಿಲ್ಲಬೇಕು.
ಜಿಲ್ಲೆಯ ಹಾಗೂ ನನ್ನ ಕ್ಷೇತ್ರದ ಜನತೆಗೆ ಮಾಧ್ಯಮದ ಮೂಲಕ ಮನವಿ ಮಾಡಿಕೊಳ್ಳುವುದು ಏನೆಂದರೆ, ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿ ಯಶಸ್ವಿಗೊಳಿಸುವಂತೆ ಮನವಿ ಮಾಡುತ್ತೇನೆ ಎಂದು ಹೇಳಿ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ ಇಂತಹ ಹೋರಾಟಗಳಿಗೆ ನನ್ನ ವಿರುದ್ಧ ಎಷ್ಟೇ ಕೇಸುಗಳು ದಾಖಲಾದರೂ ನಾನು ಹೆದುರುವುದಿಲ್ಲ. ನಾನು ಜನತೆಯ ಪರವಾದ ಹೋರಾಟ ಮಾಡುತ್ತಿರುವುದು. ರೈತರ ಹಿತ ಮುಖ್ಯ ಎಂದು ಹೇಳಿದ್ದಾರೆ.
ಕನಕಪುರ ಮಾಗಡಿಗೆ ಸತ್ಯಗಾಲದಿಂದ ಕಾವೇರಿ ನೀರನ್ನು ಕುಡಿಯಲು ನೀಡಿದ್ದಾರೆ. ಹೇಮಾವತಿಯಿಂದ 3.8 ಟಿಎಂಸಿ ನೀರು ತೆಗೆದುಕೊಂಡು ಹೋಗಿದ್ದಾರೆ. ಅದಕ್ಕೆ ನಮ್ಮ ವಿರೋಧವಿಲ್ಲ. ದೊಡ್ಡ ಕೊಳವೆಯ ಮೂಲಕ ನೀರನ್ನು ಬಸಿದುಕೊಂಡು ಹೋದರೆ ನಾವು ಏನು ಮಾಡಬೇಕು? ನಮ್ಮ ವಿರುದ್ಧ ಮಾಗಡಿ, ಚನ್ನಪಟ್ಟಣದ ಜನತೆ ಪ್ರತಿಭಟನೆ ಮಾಡಿದರೆ ಯಾವುದೇ ಪ್ರಯೋಜನವಾಗದು. ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ನಾನು ಸಂತೋಷ ಪಡುತ್ತೇನೆ. ನಮ್ಮ ಹೋರಾಟವು ಸರ್ಕಾರದ ವಿರುದ್ಧವೇ ನಿಮ್ಮ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್, ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿಜಯೇಂದ್ರ ಮಾದಿಹಳ್ಳಿ ಕಾಂತರಾಜ್ ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ, ತುರುವೇಕೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


