ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟ ಧ್ರುವ ಸರ್ಜಾ ಅವರು ತನ್ನ ಅಣ್ಣ ಚಿರಂಜೀವಿ ಸರ್ಜಾ ಅವರ ಬೈಕ್ ನಲ್ಲಿ ರೈಡ್ ಮಾಡುವ ಮೂಲಕ ತಮ್ಮ ಅಣ್ಣನ ನೆನಪನ್ನು ಸ್ಮರಿಸಿ ಭಾವುಕರಾಗಿದ್ದಾರೆ.
2020ರ ಜೂನ್ 7ರಂದು ಚಿರಂಜೀವಿ ಸರ್ಜಾ ಹೃದಯಾಘಾತಕ್ಕೆ ನಿಧನರಾಗಿದ್ದರು. ಚಿರಂಜೀವಿ ಸರ್ಜಾ ಅವರ ನಿಧನದಿಂದ ಧ್ರುವ ಸರ್ಜಾ ಮತ್ತು ಕುಟುಂಬ ತೀವ್ರ ದುಃಖಿತವಾಗಿತ್ತು. ಅಣ್ಣನ ನೆನಪಲ್ಲೇ ಧ್ರುವ ಸರ್ಜಾ ಈಗಲೂ ಕಳೆಯುತ್ತಿದ್ದಾರೆ.
ಚಿರು ಇಷ್ಟದ ಯಮಹಾ ಆರ್‌ಡಿ 350 (Yamaha RD 350) ಬೈಕ್ ನಲ್ಲಿ ಅಣ್ಣ–ತಮ್ಮ ಜಾಲಿ ರೈಡ್ ಹೋಗುತ್ತಿದ್ದರು. ಕಾಲೇಜಿಗೆ ಹೋಗ್ತಿದ್ರು, ಸಿನಿಮಾ ಥಿಯೇಟರ್‌ಗೂ ಹೋಗುತ್ತಿದ್ದರು. ಮೈಸೂರಿಂದ ಬೆಂಗಳೂರಿಗೂ ಪ್ರಯಾಣ ಮಾಡುತ್ತಿದ್ದರು.
ಅಣ್ಣನ ಇಷ್ಟದ ಈ ಬೈಕ್ ನ್ನ ಹಾಗೇ ಉಳಿಸಿಕೊಂಡ ಧ್ರುವ ಸರ್ಜಾ ಅದನ್ನ ಮತ್ತೆ ಸಂಪೂರ್ಣ ರೆಡಿ ಮಾಡಿಸಿ ತಂದೆಯನ್ನ ಹಿಂದೆ ಕೂರಿಸಿಕೊಂಡು ಮನೆಯ ಮುಂದಿನ ರಸ್ತೆಯಲ್ಲಿ ರೈಡ್ ಮಾಡಿದ್ದಾರೆ. ಅಗಲಿದ ಮಗನ ಇಷ್ಟದ ಬೈಕ್ ನ್ನ ತಂದೆಯೂ ಓಡಿಸಿ ಖುಷಿಪಟ್ಟಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW