ತುಮಕೂರು : ಮೂಡ ಸೈಟ್ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಸೈಟ್ ಬೇಕು ಅಂತ ಅರ್ಜಿ ಹಾಕಿದ್ರಾ, ಯಾರಿಗಾದ್ರೂ ಪೋನ್ ಮಾಡವ್ರಾ. 15 ವರ್ಷದ ಹಿಂದಿನ ನಡಾವಳಿಕೆಗಳನ್ನ ಇಂದಿನ ರಾಜಕೀಯಕ್ಕಾಗಿ ದುರುಪಯೋಗ ಮಾಡಿಕೊಂಡು ಅವರಿಗೆ ಕೆಟ್ಟ ಹೆಸರು ಬರುವಂತೆ ಕೆಲಸ ಮಾಡ್ತಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ತುಮಕೂರಿನ ಎಂಪ್ರೆಸ್ ಕಾಲೇಜಿನಲ್ಲಿ ನಡೆದ ವಾಲ್ಮೀಕಿ ಜಯಂತೋತ್ಸವದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅನ್ನ ಭಾಗ್ಯ ಯೋಜನೆ ತಂದವರು. ಹಸಿವಿನಿಂದ ಯಾರು ಮಲಗಬಾರದು ಅಂತ ಮಾಡಿದ್ರು. ಸಿದ್ದರಾಮಯ್ಯ ಏನು ಕುರುಬರಿಗೆ ಮಾತ್ರ ಮಾಡಿದ್ರಾ, ಬದಲಾಗಿ ಎಲ್ಲಾ ಜಾತಿಯ ಬಡವರು ನೆಮ್ಮದಿಯ ಜೀವನ ಮಾಡ್ಲಿ ಅಂತ ಅದನ್ನ ಮಾಡಿದ್ರು ಎಂದರು.
ಇತ್ತೀಚೆಗೆ ಕೊರಟಗೆರೆಯಲ್ಲಿ ವಾಲ್ಮೀಕಿ ಪ್ರತಿಮೆಯನ್ನು ಅವನ್ಯಾರೋ ಅಧಿಕಾರಿ ಮೂರ್ಖ ರಾತ್ರೊರಾತ್ರಿ ಅದನ್ನ ತೆಗೆದುಬಿಟ್ಟಿದ್ದಾನೆ. ಜನರಿಗೆ ಮನವೊಲಿಸಿ ಇನ್ನೊಂದು ಕಡೆ ಇಡಬಹುದಾಗಿತ್ತು ಎಂದು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q