nammatumakuru

    Subscribe to Updates

    Get the latest creative news from FooBar about art, design and business.

    What's Hot

    ಗರ್ಭಕಂಠದ ಕ್ಯಾನ್ಸರ್ ನಿಂದ ಎಚ್ ಪಿ ವಿ ಲಸಿಕೆ ರಕ್ಷಣೆ ನೀಡುತ್ತದೆ: ತಹಶೀಲ್ದಾರ್ ಮೋಹನಕುಮಾರಿ

    March 13, 2026

    ಹಬ್ಬಗಳ ಆಚರಣೆಯ ಮಧ್ಯೆ ಧರ್ಮಗಳನ್ನು ತರಬಾರದು:  ಶಾಂತಿ ಸಭೆಯಲ್ಲಿ ಆರ್.ಕಿರಣ್

    March 13, 2026

    ಇಂದಿರಾ ಕ್ಯಾಂಟೀನ್‌ ಗೂ ತಟ್ಟಿದ ಸಿಲಿಂಡರ್ ಕೊರತೆ ಬಿಸಿ; ತುಮಕೂರಿನಲ್ಲಿ ಕ್ಯಾಂಟೀನ್ ಮುಚ್ಚುವ ಆತಂಕ

    March 13, 2026
    Facebook Twitter Instagram
    ಟ್ರೆಂಡಿಂಗ್
    • ಗರ್ಭಕಂಠದ ಕ್ಯಾನ್ಸರ್ ನಿಂದ ಎಚ್ ಪಿ ವಿ ಲಸಿಕೆ ರಕ್ಷಣೆ ನೀಡುತ್ತದೆ: ತಹಶೀಲ್ದಾರ್ ಮೋಹನಕುಮಾರಿ
    • ಹಬ್ಬಗಳ ಆಚರಣೆಯ ಮಧ್ಯೆ ಧರ್ಮಗಳನ್ನು ತರಬಾರದು:  ಶಾಂತಿ ಸಭೆಯಲ್ಲಿ ಆರ್.ಕಿರಣ್
    • ಇಂದಿರಾ ಕ್ಯಾಂಟೀನ್‌ ಗೂ ತಟ್ಟಿದ ಸಿಲಿಂಡರ್ ಕೊರತೆ ಬಿಸಿ; ತುಮಕೂರಿನಲ್ಲಿ ಕ್ಯಾಂಟೀನ್ ಮುಚ್ಚುವ ಆತಂಕ
    • ಚಿಕ್ಕನಾಯಕನಹಳ್ಳಿಯಲ್ಲಿ ಅಡುಗೆ ಅನಿಲ ಅಭಾವ: ಕಾಳಸಂತೆ ಮಾರಾಟ ಆರೋಪಿಸಿ ಗ್ರಾಹಕರ ಪ್ರತಿಭಟನೆ
    • ಪಾವಗಡ: ಎಲ್‌ ಪಿಜಿ ಸಿಲಿಂಡರ್‌ ಗಾಗಿ ಗ್ರಾಹಕರ ಪರದಾಟ; ವಿತರಣಾ ಕೇಂದ್ರದ ಮುಂದೆ ಕ್ಯೂ
    • ಒಂಟಿ ವೃದ್ಧೆಯ ಕೊಲೆ ಪ್ರಕರಣ: 24 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಿದ ತುಮಕೂರು ಪೊಲೀಸರು | 11 ಲಕ್ಷ ಮೌಲ್ಯದ ಚಿನ್ನಾಭರಣ ವಶ
    • ತುಮಕೂರಿನಿಂದ ನಿರ್ಗಮಿಸುವ–ಆಗಮಿಸುವ ಹಲವು ರೈಲು ಸಂಚಾರಗಳ ರದ್ದು: ಮಾಹಿತಿಗಳಿಗಾಗಿ ಈ ಸುದ್ದಿ ಓದಿ
    • ಭೂಸ್ವಾಧೀನದಲ್ಲಿ ರೈತರಿಗೆ ನಷ್ಟ ತಪ್ಪಿಸಲು ‘ಮಾರ್ಗಸೂಚಿ ದರ’ ಪರಿಷ್ಕರಣೆ ಅಗತ್ಯ: ಸಚಿವ ಕೃಷ್ಣ ಬೈರೇಗೌಡ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬಿಸಿಲಿನ ಝಳ: ಬೆಳಿಗ್ಗೆ 6 ಗಂಟೆಯಿಂದಲೇ ಪಡಿತರ ವಿತರಣೆಗೆ ಜಿಲ್ಲಾಧಿಕಾರಿ ಸೂಚನೆ
    ತುಮಕೂರು March 18, 2025

    ಬಿಸಿಲಿನ ಝಳ: ಬೆಳಿಗ್ಗೆ 6 ಗಂಟೆಯಿಂದಲೇ ಪಡಿತರ ವಿತರಣೆಗೆ ಜಿಲ್ಲಾಧಿಕಾರಿ ಸೂಚನೆ

    By adminMarch 18, 2025No Comments2 Mins Read
    shubha kalyan

    ತುಮಕೂರು: ದಿನೇ ದಿನೇ ಬಿಸಿಲಿನ ಝಳ ಹೆಚ್ಚಾಗುತ್ತಿರುವುದರಿಂದ ಪಡಿತರ ಧಾನ್ಯ ವಿತರಿಸಲು ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ 6 ಗಂಟೆಯಿಂದಲೇ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಅವರಿಗೆ ಸೂಚನೆ ನೀಡಿದರು.

    ಪಾವಗಡ ಪಟ್ಟಣದ ಶ್ರೀರಾಮಕೃಷ್ಣ ನ್ಯಾಯಬೆಲೆ ಅಂಗಡಿಗೆ ಭಾನುವಾರ ಬೆಳಿಗ್ಗೆ ಭೇಟಿ ನೀಡಿ ಕುಟುಂಬದ ಪ್ರತಿ ಸದಸ್ಯರಿಗೆ 15 ಕೆ.ಜಿ. ಅಕ್ಕಿ ಸಮರ್ಪಕ ವಿತರಣೆ ಬಗ್ಗೆ ಪರಿಶೀಲಿಸಿ ಮಾತನಾಡಿದ ಅವರು, ಗಂಟೆಗಟ್ಟಲೆ ಬಿಸಿಲಿನಲ್ಲಿ ಕಾಯದೆ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಎಲ್ಲಾ ನ್ಯಾಯಬೆಲೆ ಅಂಗಡಿಗಳನ್ನು ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ತೆರೆಯುವ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರಲ್ಲದೆ, ಪಡಿತರ ಧಾನ್ಯ ಪಡೆಯಲು ನ್ಯಾಯಬೆಲೆ ಅಂಗಡಿ ಮುಂದೆ ಸಾಲು ಗಟ್ಟಿ ನಿಂತಿದ್ದ ಪಡಿತರ ಧಾನ್ಯದ ಗುಣಮಟ್ಟ ಹಾಗೂ ಕ್ರಮವಾಗಿ ವಿತರಿಸುತ್ತಿರುವ ಬಗ್ಗೆ ಫಲಾನುಭವಿಗಳಿಂದ ಮಾಹಿತಿ ಪಡೆದರು.


    Provided by
    Provided by

    ನಂತರ ನಾಗಲಮಡಿಕೆ ಕ್ರಾಸ್ ಬಳಿ ಭೇಟಿ ನೀಡಿ ತುಂಗಭದ್ರಾ ಕುಡಿಯುವ ನೀರಿನ ಯೋಜನೆಯಡಿ ಪಟ್ಟಣ ಪ್ರದೇಶದಲ್ಲಿ ಪ್ರಾಯೋಗಿಕ ನೀರು ಸರಬರಾಜಾಗುತ್ತಿರುವ ಬಗ್ಗೆ ಸ್ಥಳ ಪರಿಶೀಲನೆ ಮಾಡಿದರು. ನೀರು ಸರಬರಾಜು ಮಾಡುವ ಪೈಪ್ ಲೈನ್ ನಲ್ಲಿ ಸೋರಿಕೆಯನ್ನು ಕಂಡ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರಲ್ಲದೆ, ಪೈಪ್ಲೈನ್ ಹೊಡೆದು ಹಾಕಿರುವವರಿಗೆ ತಕ್ಷಣವೇ ನೋಟಿಸ್ ನೀಡಬೇಕೆಂದು ಸೂಚನೆ ನೀಡಿದರು.

    ಜನತೆಗೆ ಶುದ್ಧ ಕುಡಿಯುವ ನೀರು ಮನೆ ಮನೆಗೆ ಪೂರೈಕೆ ಮಾಡುವ ನಿಟ್ಟಿನಲ್ಲಿ ತುಂಗಭದ್ರಾ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕೆಂದು ಅವರು ಸೂಚಿಸಿದರು. ನಂತರ ನಾಗಲಮಡಿಕೆ ಗ್ರಾಮದಲ್ಲಿ ಜೆಜೆಎಂ ಯೋಜನೆ ಹಾಗೂ ಪಿಎಂ ಆವಾಸ್ ವಸತಿ ಯೋಜನೆ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿದರು.
    ಪಾವಗಡ ತಾಲೂಕಿನ ತಿರುಮಣಿಯಲ್ಲಿರುವ ಸೌರಶಕ್ತಿ ಘಟಕಕ್ಕೆ ಭೇಟಿ ನೀಡಿ ಘಟಕದ ನಿರ್ವಹಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

    ಪಾವಗಡ ತಾಲ್ಲೂಕು ನಾಗಲಮಡಿಕೆ ಹೋಬಳಿ ಶ್ರೀರಂಗಪುರ ತಾಂಡ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಅವರು ಅಂಗನವಾಡಿಯಲ್ಲಿರುವ ಮಕ್ಕಳ ಸಂಖ್ಯೆ, ಪೌಷ್ಠಿಕ ಆಹಾರ ವಿತರಣೆ, ಮೂಲಭೂತ ಸೌಲಭ್ಯ ಕುರಿತು ಪರಿಶೀಲನೆ ನಡೆಸಿದರು. ಮಕ್ಕಳ ಕಲಿಕಾಸಕ್ತಿಯನ್ನು ವೃದ್ಧಿಸಲು ಅನುಪಯುಕ್ತ ವಸ್ತುಗಳಿಂದ ಆಕರ್ಷಕ ಮಕ್ಕಳ ಆಟಿಕೆ, ಕಲಿಕಾ ಸಾಮಗ್ರಿಗಳನ್ನು ತಯಾರಿಸಿರುವ ಅಂಗನವಾಡಿ ಕಾರ್ಯಕರ್ತೆ ಸುಶೀಲಮ್ಮ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
    ಪಾವಗಡ ವ್ಯಾಪ್ತಿಯ ಕೆ. ರಾಮಪುರ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ತುಮಕೂರು–ರಾಯದುರ್ಗ ರೈಲು ಮಾರ್ಗ ಕಾಮಗಾರಿ ಪ್ರಗತಿ ಕುರಿತು ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.

    ಮಧುಗಿರಿ ತಾಲ್ಲೂಕು ಎಂ. ಬಸವನಹಳ್ಳಿ ಅಂಗನವಾಡಿ ಕೇಂದ್ರವನ್ನು ವೀಕ್ಷಿಸಿದ ಅವರು, ನಂತರ ಚಿನಕವಜ್ರ ಗ್ರಾಮದಲ್ಲಿರುವ ಆಯುಷ್ಮಾನ್ ಆರೋಗ್ಯ ಮಂದಿರಕ್ಕೆ ಭೇಟಿ ಮಾಡಿ ಚಿಕಿತ್ಸಾ ವಿಧಾನಗಳನ್ನು ಗಮನಿಸಿದರು. ಸ್ವನಿಧಿ ಯೋಜನೆಯಡಿ ರಾಜ್ಯಮಟ್ಟದಿಂದ ಪ್ರಶಂಸೆ ದೊರೆತಿರುವ ಹಿನ್ನೆಲೆಯಲ್ಲಿ ಮಧುಗಿರಿಯ ಪುರಸಭೆಗೆ ಭೇಟಿ ನೀಡಿ ಅಧಿಕಾರಿ/ಸಿಬ್ಬಂದಿಗಳನ್ನು ಅಭಿನಂದಿಸಿದರು.

    ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರರಾದ ಡಿ.ಎನ್ ವರದರಾಜು, ಶಿರಿನ್ ತಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಚೇತನ್ ಕುಮಾರ್ ಹಾಗೂ ಕಾರ್ಯಕ್ರಮ ನಿರೂಪಣಾಧಿಕಾರಿ ದಿನೇಶ್, ಕಂದಾಯ ನಿರೀಕ್ಷಕ ಕಿರಣ್ ಕುಮಾರ್, ಸಿಡಿಪಿಒ ಸುನಿತಾ, ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

     

    admin
    • Website

    Related Posts

    ಇಂದಿರಾ ಕ್ಯಾಂಟೀನ್‌ ಗೂ ತಟ್ಟಿದ ಸಿಲಿಂಡರ್ ಕೊರತೆ ಬಿಸಿ; ತುಮಕೂರಿನಲ್ಲಿ ಕ್ಯಾಂಟೀನ್ ಮುಚ್ಚುವ ಆತಂಕ

    March 13, 2026

    ಒಂಟಿ ವೃದ್ಧೆಯ ಕೊಲೆ ಪ್ರಕರಣ: 24 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಿದ ತುಮಕೂರು ಪೊಲೀಸರು | 11 ಲಕ್ಷ ಮೌಲ್ಯದ ಚಿನ್ನಾಭರಣ ವಶ

    March 13, 2026

    ತುಮಕೂರಿನಿಂದ ನಿರ್ಗಮಿಸುವ–ಆಗಮಿಸುವ ಹಲವು ರೈಲು ಸಂಚಾರಗಳ ರದ್ದು: ಮಾಹಿತಿಗಳಿಗಾಗಿ ಈ ಸುದ್ದಿ ಓದಿ

    March 13, 2026

    Comments are closed.

    Our Picks

    ಕರೆಯದೇ ಮದುವೆಗೆ ಬಂದ್ರೆ ಹುಷಾರ್: 3 ತಿಂಗಳು ಜೈಲು, 5 ಸಾವಿರ ದಂಡ: ಪೋಸ್ಟರ್ ಕಂಡು ಜನ ಶಾಕ್

    March 12, 2026

    LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!

    March 10, 2026

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಗರ್ಭಕಂಠದ ಕ್ಯಾನ್ಸರ್ ನಿಂದ ಎಚ್ ಪಿ ವಿ ಲಸಿಕೆ ರಕ್ಷಣೆ ನೀಡುತ್ತದೆ: ತಹಶೀಲ್ದಾರ್ ಮೋಹನಕುಮಾರಿ

    March 13, 2026

    ಸರಗೂರು:  ಎಚ್ ಪಿ ವಿ ಲಸಿಕೆಯು ಗರ್ಭಕಂಠದ ಕ್ಯಾನ್ಸರ್ ಗೆ ಮುಖ್ಯ ಕಾರಣವಾದ ಹ್ಯೂಮನ್ ಪ್ಯಾಪಿಲೋಮ ವೈರಸ್ ಸೋಂಕಿನಿಂದ ರಕ್ಷಣೆ…

    ಹಬ್ಬಗಳ ಆಚರಣೆಯ ಮಧ್ಯೆ ಧರ್ಮಗಳನ್ನು ತರಬಾರದು:  ಶಾಂತಿ ಸಭೆಯಲ್ಲಿ ಆರ್.ಕಿರಣ್

    March 13, 2026

    ಇಂದಿರಾ ಕ್ಯಾಂಟೀನ್‌ ಗೂ ತಟ್ಟಿದ ಸಿಲಿಂಡರ್ ಕೊರತೆ ಬಿಸಿ; ತುಮಕೂರಿನಲ್ಲಿ ಕ್ಯಾಂಟೀನ್ ಮುಚ್ಚುವ ಆತಂಕ

    March 13, 2026

    ಚಿಕ್ಕನಾಯಕನಹಳ್ಳಿಯಲ್ಲಿ ಅಡುಗೆ ಅನಿಲ ಅಭಾವ: ಕಾಳಸಂತೆ ಮಾರಾಟ ಆರೋಪಿಸಿ ಗ್ರಾಹಕರ ಪ್ರತಿಭಟನೆ

    March 13, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.