ತುಮಕೂರು: ಇತ್ತೀಚಿನ ದಿನಗಳಲ್ಲಿ ತುಮಕೂರು ಜಿಲ್ಲೆಯಾದ್ಯಂತ ಹಲವಾರು ಅಪರಾಧ ಕೃತ್ಯಗಳು ನಿರಂತರವಾಗಿ ನಡೆಯುತ್ತಿದೆ. ಇದನ್ನು ನಿಯಂತ್ರಿಸುವಲ್ಲಿ ಪೊಲೀಸ್ ವ್ಯವಸ್ಥೆ ವಿಫಲವಾಗಿದೆ ಎನ್ನುವ ಮಾತು ಕೇಳಿ ಬಂದಿದೆ.
ಕಳ್ಳರು ಬೈಕ್ ಕಳ್ಳತನ ಮಾಡಲು ಬಂದಾಗ ಮನೆಯವರಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅಪರಾಧಕ್ಕೆ ಕುಮಕ್ಕು ನೀಡುತ್ತಿದ್ದ ಪೊಲೀಸರು ಸಸ್ಪೆಂಡ್ ಆಗಿದ್ದಾರೆ. ಹೀಗೆ ಹತ್ತು ಹಲವು ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸರು ವಿಫಲರಾಗಿದ್ದಾರೆ. ಈ ನಿಷ್ಕ್ರಿಯಕ್ಕೆ ಮೂಲ ಕಾರಣವನ್ನು ಹುಡುಕಿದರೆ ಜನಸಂಖ್ಯೆಗನುಗುಣವಾಗಿ ಪೋಲಿಸ್ ಸಿಬ್ಬಂದಿ ಇಲ್ಲದಿರುವುದು ಮತ್ತು ಪೊಲೀಸ್ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರದಿಂದ ನಾಗರಿಕರು ತಲ್ಲಣಗೊಂಡಿರುವುದು ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.
ತಿಪಟೂರಿನಲ್ಲಿ ನಡೆದ ಘಟನೆ:
ಮುಂಜಾನೆ ತಿಪಟೂರಿನಲ್ಲಿ ನಾಲ್ಕು ಮೂವತ್ತರ ಸುಮಾರಿಗೆ ಕಳ್ಳ ಮನೆಗೆ ನುಗ್ಗಲು ಯತ್ನಿಸಿದ ಸಂದರ್ಭದಲ್ಲಿ ಮನೆ ಮಾಲೀಕರು ಲೈಟ್ ಗಳನ್ನು ಹಾಕಿ ಕೂಗಾಡಿದರು ಆಗ ಕಳ್ಳ ತಕ್ಷಣ ಓಡಿ ಹೋಗಿದ್ದಾನೆ. ಈ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ .
ಪೊಲೀಸರ ಭಯವಿಲ್ಲ!!
ತವರು ಜಿಲ್ಲೆಯ ಜನಪ್ರತಿನಿಧಿ ಗೃಹ ಸಚಿವರಾಗಿರುವುದರಿಂದ ಜಿಲ್ಲೆಯ ಅವರ ಪ್ರವಾಸ ಇತ್ಯಾದಿ ಚಟುವಟಿಕೆಗಳಲ್ಲಿ ಪೊಲೀಸರು ಭಾಗವಹಿಸಿ ಅವರನ್ನು ಸಂತೃಪ್ತಿಗೊಳಿಸುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಅಪರಾಧಿಗಳಿಗೆ ಒಂದು ರೀತಿಯ ದೀಪಾವಳಿ ಹಬ್ಬವಾಗುತ್ತಿದೆ. ಇದನ್ನು ನಿಯಂತ್ರಿಸುವಲ್ಲಿ ವಿಫಲರಾದ ಅಧಿಕಾರಿಗಳು ಜನರು ಇನ್ನಷ್ಟು ತೊಂದರೆ ಅನುಭವಿಸುವ ಮೊದಲು ಬೇರೆ ಕಡೆಗೆ ವರ್ಗಾವಣೆಗೆ ಕೋರಿಕೊಳ್ಳುವುದು ಬಹಳ ಒಳ್ಳೆಯದು ಎನ್ನುವ ಮಾತು ಕೇಳಿ ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q