ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾಗೌಡ ಜೈಲು ಸೇರಿದ್ದಾರೆ. ಇತ್ತ ಪವಿತ್ರಾಗೌಡ ಮನೆಯಲ್ಲಿದ್ದ ಶ್ವಾನಗಳು ಸರಿಯಾದ ಆರೈಕೆಯಿಲ್ಲದೇ ಸೊರಗಿದ್ದವು.
ಪವಿತ್ರಾ ಮನೆಯಲ್ಲಿದ್ದ ನಾಯಿಗಳನ್ನು ಪವನ್ ಎಂಬಾತ ನೋಡಿಕೊಳ್ಳುತ್ತಿದ್ದ. ಆದರೆ ಆತ ಕೂಡ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದರಿಂದ ನಾಯಿಗಳು ಅನಾಥವಾಗಿವೆ.
ಈ ವಿಷಯ ತಿಳಿಯುತ್ತಿದ್ದಂತೆ ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆಯ ಹರೀಶ್ ಹಾಗೂ ಲೀನಾ ಆರ್.ಆರ್.ನಗರ ಪೊಲೀಸರಿಗೆ ಹಾಗೂ ಪಶುಸಂಗೋಪನಾ ಇಲಾಖೆಯ ಗಮನಕ್ಕೆ ತಂದಿದ್ದರು. ಇದೀಗ ಅಧಿಕಾರಿಗಳ ನೆರವಿನಿಂದ ಪವಿತ್ರಾ ಗೌಡ ಮನೆಯಲ್ಲಿದ್ದ ಬುಲ್ ಡಾಗ್ ಹಾಗೂ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಶ್ವಾನಗಳನ್ನು ದರ್ಶನ್ ಮನೆಗೆ ಶಿಫ್ಟ್ ಮಾಡಲಾಗಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಉಳಿದ ಮತ್ತೊಂದು ಶ್ವಾನವನ್ನು ಪವಿತ್ರಾ ಗೌಡ ಸ್ನೇಹಿತರು ತೆಗೆದುಕೊಂಡು ಹೋಗಿದ್ದು, ಆರೈಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q