nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪಾವಗಡ: SCSP/TSP ನಿಧಿ ಸದ್ಬಳಕೆ ಕುರಿತು ಪಾವಗಡದಲ್ಲಿ ಜಾಗೃತಿ ಸಭೆ

    September 7, 2026

    ಪಾವಗಡ: ದೇವರಹಟ್ಟಿಯಲ್ಲಿ ಸಂಭ್ರಮದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

    September 7, 2026

    ಹಿರೇಹಳ್ಳಿ ಕೆರೆ ಒತ್ತುವರಿ ತೆರವಿಗೆ ಸಚಿವ ಈಶ್ವರ್ ಖಂಡ್ರೆ ಖಡಕ್ ಆದೇಶ!

    September 7, 2026
    Facebook Twitter Instagram
    ಟ್ರೆಂಡಿಂಗ್
    • ಪಾವಗಡ: SCSP/TSP ನಿಧಿ ಸದ್ಬಳಕೆ ಕುರಿತು ಪಾವಗಡದಲ್ಲಿ ಜಾಗೃತಿ ಸಭೆ
    • ಪಾವಗಡ: ದೇವರಹಟ್ಟಿಯಲ್ಲಿ ಸಂಭ್ರಮದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
    • ಹಿರೇಹಳ್ಳಿ ಕೆರೆ ಒತ್ತುವರಿ ತೆರವಿಗೆ ಸಚಿವ ಈಶ್ವರ್ ಖಂಡ್ರೆ ಖಡಕ್ ಆದೇಶ!
    • ಕೊರಟಗೆರೆ: ಮಳೆಗಾಲದಲ್ಲೇ ಕುಡಿಯುವ ನೀರಿಗೆ ತೀವ್ರ ಹಾಹಾಕಾರ; ಪುರಸಭೆಗೆ ಮುತ್ತಿಗೆ ಹಾಕಿ ಗ್ರಾಮಸ್ಥರ ಆಕ್ರೋಶ
    • ಅರ್ಜಿ ಕೊಟ್ಟು ಆಚೆ ಹೋಗ್! ಪ್ರಜೆಗಳಿಗೆ ಭರ್ಜರಿ ‘ಸೇವೆ..!’ ಮಾಡಿದ ಪಾವಗಡ ಶಾಸಕ ವೆಂಕಟೇಶ್!
    • ಬುದ್ಧ, ಬಸವ, ಅಂಬೇಡ್ಕರ್ ವಿರುದ್ಧ ಅವಹೇಳನ: ಕಿಡಿಗೇಡಿಯ ಗಡಿಪಾರಿಗೆ ದಲಿತ ಪರ ಸಂಘಟನೆಗಳಿಂದ ಒತ್ತಾಯ
    • ಸಿರಾ: ಬುದ್ಧ ಕರುಣೆಯ ಹೊತ್ತು ಕವನ ಸಂಕಲನ ಬಿಡುಗಡೆ
    • ಔರಾದ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬ್ರೈನ್ ಡೆಡ್ ಗೊಂಡ ಬಳಿಕ ಯಾವ್ಯಾವ ಅಂಗಗಳನ್ನು ದಾನ ಮಾಡಬಹುದು ಗೊತ್ತಾ..?
    ರಾಜ್ಯ ಸುದ್ದಿ June 7, 2024

    ಬ್ರೈನ್ ಡೆಡ್ ಗೊಂಡ ಬಳಿಕ ಯಾವ್ಯಾವ ಅಂಗಗಳನ್ನು ದಾನ ಮಾಡಬಹುದು ಗೊತ್ತಾ..?

    By adminJune 7, 2024No Comments2 Mins Read
    brain

    ಬ್ರೈನ್ ಡೆತ್ ಅಥವಾ ಮೆದುಳು ಸಾವು ಎಂದರೆ ವ್ಯಕ್ತಿ ಪೂರ್ತಿ ಸತ್ತಿದ್ದಾನೆ ಎಂದು ಅರ್ಥ. ಮೆದುಳು ಸಾವು ಎಂಬುದನ್ನ ವೈದ್ಯರು ದೃಢೀಕರಿಸಬೇಕು. ಕೆಲವೊಮ್ಮೆ ಸಹಜವಾಗಿ ಓಡಾಡುತ್ತಿರುವ ವ್ಯಕ್ತಿ ಬ್ರೈನ್ ಡೆತ್‌ ಗೆ ಒಳಗಾಗುವುದುಂಟು. ಕೆಲವೊಮ್ಮೆ ಅಪಘಾತಕ್ಕೆ ತುತ್ತಾಗಿ ಜೀವರಕ್ಷಕ ವ್ಯವಸ್ಥೆಯಲ್ಲಿರುವ ವ್ಯಕ್ತಿ ಬ್ರೇನ್ ಡೆತ್‌ಗೆ ಒಳಗಾಗುತ್ತಾನೆ/ಳೆ. ಮೆದುಳು ತನ್ನ ಕಾರ್ಯವನ್ನು ಪೂರ್ತಿಯಾಗಿ ನಿಲ್ಲಿಸಲು ನಾನಾ ಕಾರಣಗಳಿರಬಹುದು.

    ಬ್ರೈನ್ ಡೆತ್‌ ಗೆ ಒಳಗಾದಾಗ ಇತರ ಅಂಗಗಳೂ ತಮ್ಮ ಕೆಲಸ ನಿಲ್ಲಿಸುತ್ತವೆ. ಯಾಕೆಂದರೆ ಮೆದುಳಿನಿಂದ ಅವುಗಳಿಗೆ ಯಾವುದೇ ಸಂದೇಶ ಬರುವುದಿಲ್ಲವಾದ್ದರಿಂದ. ಉಳಿದಂತೆ ಅವು ಸುಸ್ಥಿತಿಯಲ್ಲಿರುತ್ತವೆ. ವ್ಯಕ್ತಿಯ ಬೇರೆ ಯಾವುದೇ ಅಂಗ ಕೆಲಸ ನಿಲ್ಲಿಸಿದರೆ ಅದನ್ನು ದುರಸ್ತಿ ಮಾಡಬಹುದು, ಕಸಿ ಮಾಡಬಹುದು ಅಥವಾ ಬೇರೆ ಅಂಗವನ್ನು ಜೋಡಿಸಬಹುದು. ಆದರೆ ಮೆದುಳು ನಿಷ್ಕ್ರಿಯವಾದರೆ, ಏನೂ ಮಾಡಲು ಸಾಧ್ಯವಿಲ್ಲ. ಕುರಿ ಸಾಕಣೆ ಪ್ರಾರಂಭಿಸುವುದು ಹೇಗೆ? ನಿರ್ವಹಣೆ ಮತ್ತು ಆರೈಕೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.!

    ಮೆದುಳು ಕೆಲಕಾಲ ಕೆಲಸ ಮಾಡುವಂತೆ ಆಮ್ಲಜನಕ ಪೂರೈಸಬಹುದು, ಜೀವರಕ್ಷಕ ವ್ಯವಸ್ಥೆಯಲ್ಲಿ ದೇಹವನ್ನು ಇಡಬಹುದು. ಆದರೆ ವ್ಯಕ್ತಿಯ ಪ್ರಜ್ಞೆ ಮರಳುವುದಿಲ್ಲ. ಜೀವರಕ್ಷಕ ವ್ಯವಸ್ಥೆಯು ಹೃದಯ ರಕ್ತ ಪಂಪ್ ಮಾಡುವಂತೆ ಮಾಡುತ್ತದೆ, ಶ್ವಾಸಕೋಶ ಉಸಿರಾಡುವಂತೆ ಮಾಡುತ್ತದೆ; ಆದರೆ ಮೆದುಳು ಕಾರ್ಯಾಚರಿಸುವಂತೆ ಮಾಡುವ ಯಾವುದೇ ವ್ಯವಸ್ಥೆ ಇಲ್ಲ. ಆದ್ದರಿಂಧ ಮೆದುಳು ಸತ್ತಿತೆಂದರೆ ವ್ಯಕ್ತಿ ಸತ್ತನೆಂದೇ ಅರ್ಥ. ಬ್ರೈನ್ ಡೆತ್ ಎಂಬುದು ಒಬ್ಬ ವ್ಯಕ್ತಿಯ ಸಾವಿನ ಕಾನೂನಿನ ಪ್ರಕಾರದ ವ್ಯಾಖ್ಯೆ. ದಾನ ಮಾಡುವುದು ಹೇಗೆ? ಸಾಮಾನ್ಯವಾಗಿ ಮೆದುಳು ಕೆಲಸ ನಿಲ್ಲಿಸಿದಾಗ, ಆಸ್ಪತ್ರೆಯಲ್ಲಿರುವ ವ್ಯಕ್ತಿಯನ್ನು ವೆಂಟಿಲೇಟರ್ ‌ನಲ್ಲಿ ಇಡಲಾಗುತ್ತದೆ.

    ಮೆದುಳು ಪೂರ್ತಿಯಾಗಿ ಕೆಲಸ ನಿಲ್ಲಿಸಿದ್ದರೂ, ವೆಂಟಿಲೇಟರ್ ಸಹಾಯದಿಂದ ೨-೩ ದಿನಗಳ ಕಾಲ ಹೃದಯ ಹೊಡೆದುಕೊಳ್ಳುವಂತೆ ನೋಡಿಕೊಳ್ಳಬಹುದು. ಇದು ಅಂಗದಾನದ ಬಗ್ಗೆ ಕುಟುಂಬಸ್ಥರಿಗೆ ನಿರ್ಧರಿಸಲು, ದೇಹದಿಂದ ಅಂಗವನ್ನು ತೆಗೆದು ಸಂರಕ್ಷಿಸುವ ಕೆಲಸ ಮಾಡಲು ವೈದ್ಯರಿಗೆ ಸಾಕಷ್ಟು ಸಮಯ ನೀಡುತ್ತದೆ. ಸಾಮಾನ್ಯವಾಗಿ ಮೆದುಳು ಸಾವಿಗೀಡಾದ ವ್ಯಕ್ತಿಯ ಮನೆಯವರನ್ನು, ಅಗದಾನ ಮಾಡುವಂತೆ ವೈದ್ಯರು ಮನವೊಲಿಸುತ್ತಾರೆ. ಯಾಕೆಂದರೆ ಅಂಗಕಸಿಯ ಅಗತ್ಯವಿರುವವರು ನಮ್ಮ ದೇಶದಲ್ಲಿ ಅತೀ ಹೆಚ್ಚು. ಆದರೆ ಅಂಗದಾನ ಮಾಡುವವರು ಅತೀ ಕಡಿಮೆ ಸಂಖ್ಯೆ ಮಂದಿ. ಭಾರತದಲ್ಲಿ 2 ಲಕ್ಷ ಜನರಿಗೆ ಕಿಡ್ನಿಯ ಅವಶ್ಯಕತೆಯಿದೆ. ದಾನಕ್ಕೆ ಮುಂದೆ ಬಂದವರ ಸಂಖ್ಯೆ 8 ಸಾವಿರ. ಯಕೃತ್ತಿನ ಜರೂರತ್ತಿರುವವರು 80 ಸಾವಿರ. 1800 ಜನ ದಾನಿಗಳು ಒಪ್ಪಿಕೊಂಡಿದ್ದಾರೆ.

    ವರ್ಷಕ್ಕೆ 2 ಲಕ್ಷ ಕಣ್ಣಿನ ಕಾರ್ನಿಯಾ ಅವಶ್ಯಕತೆಯಿದೆ. ದಾನ ದೊರೆತಿರುವುದು 50,000 ಮಾತ್ರ. ವರ್ಷಕ್ಕೆ 15,000 ಹೃದಯ ಬೇಕು. ದೊರೆಯುವುದು 250 ಮಾತ್ರ. ಅಂಗಗಳು ಸುಸ್ಥಿತಿಯಲ್ಲಿದ್ದು ಸತ್ತವರ ಮನವೊಲಿಸಿ ವೈದ್ಯರು ಅಂಗದಾನ ಮಾಡಿಸಿಕೊಳ್ಳುತ್ತಾರೆ. ಕೆಲವು ಕುಟುಂಬಗಳು ಇದಕ್ಕೂ ಒಪ್ಪುವುದಿಲ್ಲ. ಏಳು ಜೀವ ಉಳಿಸಬಹುದು! ಬ್ರೇನ್‌ ಡೆಡ್‌ ಆದ ಒಬ್ಬ ವ್ಯಕ್ತಿ ದೇಹದಾನ ಮಾಡಿದರೆ ಏಳು ಜೀವಗಳನ್ನು ಉಳಿಸಬಲ್ಲ- ಹೃದಯ, ಶ್ವಾಸಕೋಶ, ಎರಡು ಕಿಡ್ನಿಗಳು, ಪಿತ್ಥಕೋಶ, ಪಿತ್ತಜನಕಾಂಗ, ಕರುಳು ನೀಡುವ ಮೂಲಕ. ಇದಲ್ಲದೆ ಕಾರ್ನಿಯಾ, ಇತರ ಅಂಗಾಂಶಗಳನ್ನೂ ನೀಡಬಹುದು. ಒಂದುವೇಳೆ ಹೃದಯಸ್ತಂಭನದಿಂದ ವ್ಯಕ್ತಿ ಸತ್ತಿದ್ದರೆ ಹೃದಯ ಕಸಿ ಮಾಡಲು ಬರುವುದಿಲ್ಲ. ಮಧುಮೇಹ ಇತ್ಯಾದಿಗಳಿಂದ ಸತ್ತಿದ್ದರೆ ಲಿವರ್, ಕಿಡ್ನಿ, ಇತ್ಯಾದಿ ನೀಡಲು ಸಾಧ್ಯವಿಲ್ಲ.

    ಆದರೆ ಕೇವಲ ಬ್ರೈನ್ ಡೆತ್‌ ನಿಂದ ಸತ್ತವರ ಹೆಚ್ಚಿನ ಅಂಗಗಳ ಸದ್ಬಳಕೆ ಸಾಧ್ಯವಿದೆ. ಆದ್ದರಿಂದಲೇ ಮೆದುಳು ಸಾವಿಗೀಡಾದವರ ಅಂಗದಾನಕ್ಕೆ ಆದ್ಯತೆ. ಸ್ವಯಂಪ್ರೇರಿತವಾಗಿ ನೀವು ಅಂಗದಾನ ಮಾಡಬಹುದು ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಡಿ ಇರುವ National Organ and Tissue Transplant Organization NOTTO ಅಂಗದಾನಕ್ಕೆ ಪ್ರೇರೇಪಣೆ ನೀಡುತ್ತಿದೆ. ಇದರ ವೆಬ್‌ಸೈಟ್‌ www.notto.gov.inದಲ್ಲಿ ಅಂಗದಾನದ ಕುರಿತು ಎಲ್ಲ ವಿವರಗಳೂ ಲಭ್ಯವಿವೆ. ಈ ಜಾಲತಾಣದಲ್ಲಿರುವ ಅರ್ಜಿಯನ್ನು ತುಂಬಿ ಅಂಗದಾನಕ್ಕೆ ನಮ್ಮ ಸಮ್ಮತಿಯನ್ನೂ ನೀಡಬಹುದು. ಇಂತದೇ ಇನ್ನೊಂದು ಸರಕಾರಿ ಸಂಸ್ಥೆ Regional Organ and Tissue Transplant Organization ROTTO.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ: ಕಾಂಗ್ರೆಸ್ ಹೈಕಮಾಂಡ್ ಗೆ ಸ್ಪಷ್ಟ ಸಂದೇಶ!

    September 7, 2026

    ಅಹಿಂದ ಯಾರ ಆಸ್ತಿಯೂ ಅಲ್ಲ: ಸಚಿವ ಸತೀಶ್ ಜಾರಕಿಹೊಳಿ ಕಿಡಿ

    September 7, 2026

    ಶೀಘ್ರದಲ್ಲೇ ಹಳೆಯ ಪಿಂಚಣಿ ಯೋಜನೆ (OPS) ಮರುಜಾರಿ: ಡಿಸಿಎಂ ಡಾ.ಜಿ. ಪರಮೇಶ್ವರ್

    September 6, 2026

    Comments are closed.

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಪಾವಗಡ

    ಪಾವಗಡ: SCSP/TSP ನಿಧಿ ಸದ್ಬಳಕೆ ಕುರಿತು ಪಾವಗಡದಲ್ಲಿ ಜಾಗೃತಿ ಸಭೆ

    September 7, 2026

    ಪಾವಗಡ : SCSP/TSP ನಿಧಿಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ SCSP/TSP ನಿಧಿ ಸದ್ಬಳಕೆ…

    ಪಾವಗಡ: ದೇವರಹಟ್ಟಿಯಲ್ಲಿ ಸಂಭ್ರಮದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

    September 7, 2026

    ಹಿರೇಹಳ್ಳಿ ಕೆರೆ ಒತ್ತುವರಿ ತೆರವಿಗೆ ಸಚಿವ ಈಶ್ವರ್ ಖಂಡ್ರೆ ಖಡಕ್ ಆದೇಶ!

    September 7, 2026

    ಕೊರಟಗೆರೆ: ಮಳೆಗಾಲದಲ್ಲೇ ಕುಡಿಯುವ ನೀರಿಗೆ ತೀವ್ರ ಹಾಹಾಕಾರ; ಪುರಸಭೆಗೆ ಮುತ್ತಿಗೆ ಹಾಕಿ ಗ್ರಾಮಸ್ಥರ ಆಕ್ರೋಶ

    September 7, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.