ರಜನಿಕಾಂತ್ ಅನೇಕ ನಟಿಯರೊಂದಿಗೆ ನಟಿಸಿದ್ದಾರೆ. ಆದ್ರೆ ನಟಿ ಶ್ರೀದೇವಿಯನ್ನು ರಜಿನಿ ತುಂಬಾ ಪ್ರೀತಿ ಮಾಡುತ್ತಿದ್ದರು. ಇಬ್ಬರು ಜೊತೆಯಾಗಿ ಒಂದೇ ಸಿನಿಮಾಗಳಲ್ಲಿ ಮಾಡುತ್ತಿರುವಾಗ ರಜಿನಿ ಹಲವು ಬಾರಿ ಅವರಲ್ಲಿ ಪ್ರೇಮ ನಿವೇದನೆ ಹಂಚಿಕೊಂಡಿದ್ದರು. ಆದರೆ ಶ್ರೀದೇವಿ ಅವರಿಗೆ ಸೂಪರ್ ಸ್ಟಾರ್ ಮೇಲೆ ಅಂತ ಭಾವನೆ ಇರಲಿಲ್ಲ ಎನ್ನಲಾಗಿದೆ ಆದರೆ ರಜನಿಕಾಂತ್ ಹಾಗೂ ಶ್ರೀದೇವಿ ಉತ್ತಮ ಸ್ನೇಹಿತರಾಗೆ ಮುಂದುವರೆದಿದ್ರು.
ಒಂದು ದಿನ ರಜಿನಿಕಾಂತ್ ಸ್ವತಃ ನಟಿ ಶ್ರೀದೇವಿ ಅವರ ಮನೆಗೆ ಹೋಗಿ ಮದುವೆ ಮಾಡಿಕೊಳ್ಳಬೇಕೆಂಬ ನಿರ್ಧಾರ ಹೇಳಬೇಕು ಎಂದುಕೊಂಡಿದ್ದರು. ರಜಿನಿಕಾಂತ್ ಹಾಗೂ ಬಾಲಚಂದರ್ ಅವರು ಶ್ರೀದೇವಿ ಮನೆಯ ಗೃಹಪ್ರವೇಶಕ್ಕೆ ಹೋದಾಗ, ಸಡನ್ ಆಗಿ ಮನೆಯಲ್ಲಿ ಕರೆಂಟ್ ಕಟ್ ಆಗಿತ್ತು. ವಿದ್ಯುತ್ ಇಲ್ಲದಕ್ಕೆ ಮನೆಯೆಲ್ಲಾ ಕತ್ತಲಾಗಿತ್ತು. ಈ ಶಕುನ ಸರಿಯಿಲ್ಲ ಎಂದು ಮದುವೆಯ ವಿಚಾರ ಹೇಳದೆಯೇ ಬೇಸರದಿಂದ ರಜಿನಿ ಹಿಂದಿರುಗಿದ್ದರು ಎಂದು ಹೇಳಲಾಗಿದೆ.
ನಟ ರಜನಿಕಾಂತ್ ಅವರು ಹಲವಾರು ಚಿತ್ರಗಳಲ್ಲಿ ಸಹ-ನಟಿಸುವ ಮೊದಲು ಶ್ರೀದೇವಿಯವರ ಕುಟುಂಬದೊಂದಿಗೆ ವಿಶೇಷವಾಗಿ ಶ್ರೀದೇವಿಯವರ ತಾಯಿಯೊಂದಿಗೆ ನಿಕಟ ಸ್ನೇಹಿತರಾಗಿದ್ದರು. ಶ್ರೀದೇವಿ ರಜನಿಕಾಂತ್‌ಗಿಂತ 13 ವರ್ಷ ಚಿಕ್ಕವರು.ರಜನಿಕಾಂತ್ ಮತ್ತು ಶ್ರೀದೇವಿ ಹಾಗು ಅವರ ತಾಯಿ ಉತ್ತಮ ಸ್ನೇಹಿತರಾಗಿದ್ದರು. ವಾಸ್ತವವಾಗಿ, ಶ್ರೀದೇವಿ ಹಾಗು ಅವರ ಕುಟುಂಬದ ಜೊತೆ ರಜನಿಕಾಂತ್ ಕೊನೆಯವರೆಗೂ ಇದ್ದರು . ಅವರ ಸುದೀರ್ಘ ಒಡನಾಟವು ಚಲನಚಿತ್ರಗಳಲ್ಲಿ ಮತ್ತು ಹೊರಗೆ ಸುಮಾರು 40 ವರ್ಷಗಳ ಹಿಂದಿನದು.
ಒಮ್ಮೆ ನಟ ರಜನಿಕಾಂತ್ ಅವರು ಅನಾರೋಗ್ಯದ ಕಾರಣ ಸಿಂಗಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಶ್ರೀದೇವಿ 7 ದಿನಗಳ ಕಾಲ ಉಪವಾಸ ಮಾಡಿ ದೇವಸ್ಥಾನದ ಕಾಣಿಕೆಗಳನ್ನು ಕಳುಹಿಸಿದರು ಎಂದು ಹೇಳಲಾಗುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


