ಹುಬ್ಬಳ್ಳಿ: ಪರಿಣಾಮಕಾರಿಯಾದ ಸಾರಿಗೆ ಸೌಲಭ್ಯಗಳನ್ನು ಒದಗಿಸುವ ಮೂಲಕ ಮಕ್ಕಳಿಗೆ ಪೋಷಾಕಾಂಶವನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ನಡೆಯೊಂದರಲ್ಲಿ ಡಾ. ಅಗರ್ವಾಲ್ಸ್ ನೇತ್ರ ಹಾಸ್ಪಿಟಲ್ ತನ್ನ ಕಾಪೆರ್ಟ್ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಹುಬ್ಬಳ್ಳಿಯಲ್ಲಿ ಅಕ್ಷಯ ಪಾತ್ರ ಫೌಂಡೇಶನ್‍ಗೆ ಆಹಾರ ಡೆಲಿವರಿ ವ್ಯಾನ್ ಅನ್ನು ಒದಗಿಸಿದೆ.
ಹೊಸದಾಗಿ ದೇಣಿಗೆ ನೀಡಿದ ವಾಹನವು ಹುಬ್ಬಳ್ಳಿ ವ್ಯಾಪ್ತಿಯಲ್ಲಿನ 28 ಶಾಲೆಗಳಿಗೆ ಅಂದಾಜು 6,000 ಊಟವನ್ನು ಪ್ರತಿ ದಿನ ವಿತರಣೆ ಮಾಡಲು ಅನುಕೂಲ ಮಾಡಿಕೊಡಲಿದೆ. ಸಮುದಾಯದ ಕಲ್ಯಾಣಕ್ಕೆ ಆಸ್ಪತ್ರೆ ಎಷ್ಟು ಬದ್ಧವಾಗಿದೆ ಮತ್ತು ಶಾಲೆಯಲ್ಲಿ ಹಸಿವನ್ನು ನಿರ್ಮೂಲನೆ ಮಾಡಲು ಅಕ್ಷಯ ಪಾತ್ರದ ಧ್ಯೇಯಕ್ಕೆ ಎಷ್ಟು ಪೂರಕವಾಗಿದೆ ಎಂಬುದಕ್ಕೆ ಈ ಕೊಡುಗೆಯು ಸಾಕ್ಷಿಯಾಗಿದೆ.
ಅಗರ್ವಾಲ್ಸ್ ಐ ಹಾಸ್ಪಿಟಲ್ ನ ಕ್ಲಿನಿಕಲ್ ಸೇವೆಗಳ ಮುಖ್ಯಸ್ಥ ಡಾ. ಶ್ರೀಕೃಷ್ಣ ನಾಡಗೌಡ ಹೇಳುವಂತೆ “ಈ ಉಪಕ್ರಮದ ಭಾಗವಾಗಲು ನಮಗೆ ಹೆಮ್ಮೆಯಾಗುತ್ತದೆ. ಇದು ಕಣ್ಣಿನ ಆರೋಗ್ಯವನ್ನು ಪ್ರೋತ್ಸಾಹಿಸಲು ತನ್ನ ಬದ್ಧತೆಯನ್ನು ಪ್ರತಿಫಲಿಸುವುದಷ್ಟೇ ಅಲ್ಲ, ಸಮುದಾಯದಲ್ಲಿ ಸಮಗ್ರ ಯೋಗಕ್ಷೇಮವನ್ನು ಕಲ್ಪಿಸುವುದಕ್ಕೂ ಇದು ಪೂರಕವಾಗಿದೆ.
ಯುವಜನತೆಯಲ್ಲಿ ಅರ್ಥವತ್ತಾದ ಬದಲಾವಣೆಯನ್ನು ಉಂಟು ಮಾಡುವಲ್ಲಿ ನಾವು ಬದ್ಧತೆ ಹೊಂದಿದ್ದೇವೆ. ಅದೇ ವೇಳೆ ಅವರ ದೈಹಿಕ ಮತ್ತು ಜ್ಞಾನ ಬೆಳವಣಿಗೆಗೂ ನಾವು ಕೊಡುಗೆ ನೀಡುತ್ತಿದ್ದೇವೆ”ಎಂದರು.
ಹುಬ್ಬಳ್ಳಿಯ ಅಕ್ಷಯ ಪಾತ್ರ ಫೌಂಡೇಶನ್ ನ ವಕ್ತಾರ ಹಾಗೂ ಯುನಿಟ್ ಅಧ್ಯಕ್ಷ ರಾಜೀವ ಲೋಚನ ದಾಸ್ ಹೇಳುವಂತೆ “ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ನೀಡಿದ ಈ ಉಪಯುಕ್ತ ದಾನವು ಹೆಚ್ಚು ಮಕ್ಕಳಿಗೆ ಬಿಸಿ ಮತ್ತು ಪೌಷ್ಠಿಕಾಂಶಯುಕ್ತ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಕ್ಕೆ ಇನ್ನಷ್ಟು ನೆರವಾಗಲಿದೆ. ವಿಭಿನ್ನ ವಲಯಗಳು ಹೇಗೆ ಸಹಭಾಗಿತ್ವ ಸಾಧಿಸಿ ಸಮಾಜದ ಕಲ್ಯಾಣಕ್ಕೆ ಕೊಡುಗೆ ನೀಡಬಹುದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಈ ಪಾಲುದಾರಿಕೆಗೆ ನಾವು ಅಪಾರ ಆಭಾರಿಯಾಗಿದ್ದೇವೆ. ಇದರಿಂದ ನಮ್ಮ ಸಾರಿಗೆ ಸಾಮರ್ಥ್ಯ ಹೆಚ್ಚಲಿದೆ ಮತ್ತು ನಾವು ಒದಗಿಸುವ ಪ್ರತಿ ಊಟವೂ ನಮ್ಮ ಮಕ್ಕಳ ಆರೋಗ್ಯಕರ ಭವಿಷ್ಯದ ಕಡೆಗೆ ಒಂದು ಹೆಜ್ಜೆಯಾಗಲಿದೆ.” ವಾಹನದಲ್ಲಿ ಸುಧಾರಿತ ಸೌಲಭ್ಯಗಳಿದ್ದು, ಊಟದ ತಾಪಮಾನ ಮತ್ತು ತಾಜಾತನವನ್ನು ಕಾಯ್ದುಕೊಳ್ಳಲು ಅನುಕೂಲವಾಗಲಿದೆ. ಲೋಡ್ ಮಾಡುವುದಕ್ಕೂ ಮೊದಲು ವಾಹನವನ್ನು ಸ್ಟೀಮ್ ನಿಂದ ಸ್ಟೆರಿಲೈಸ್ ಮಾಡಲಾಗುತ್ತದೆ. ಇದು ಫೌಂಡೇಶನ್ ಎಷ್ಟು ಶುಚಿತ್ವದ ಮಾನದಂಡವನ್ನು ಹೊಂದಿದೆ ಎಂಬುದನ್ನು ಪ್ರತಿಫಲಿಸುತ್ತದೆ” ಎಂದು ಕಂಪನಿ ಪಿಆರ್ ಓ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296