ತುಮಕೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಮೇಲೆ ಇಡಿ ದಾಳಿ ನಡೆದಿದೆ. ಇದೀಗ 31 ಗಂಟೆ ಕಾರ್ಯಾಚರಣೆ ಬಳಿಕ ಸಿದ್ಧಾರ್ಥ ಮೆಡಿಕಲ್ ಕಾಲೇಜು ಪರಿಶೀಲನೆ ಮುಕ್ತಾಯವಾಗಿದೆ.
ಕಾರ್ಯಾಚರಣೆ ಬಳಿಕ ಒಂದು ಬ್ಯಾಗ್ ದಾಖಲೆ ಸಹಿತ ಇಡಿ ತಂಡ ನಿರ್ಗಮಿಸಿದೆ. ಕೆಲ ಮಹತ್ವದ ದಾಖಲೆ ಸಮೇತ ಓರ್ವ ಮಹಿಳಾ, ಮೂವರು ಪುರುಷ ಅಧಿಕಾರಿಗಳು ಹಾಗೂ ಇಬ್ಬರು ಶಸ್ತ್ರ ಸಜ್ಜಿತ ಮಹಿಳಾ ಸಿಬ್ಬಂದಿಗಳ ರಕ್ಷಣೆಯಲ್ಲಿ ತಂಡ ಹೊರ ನಡೆಯಿತು.
ತುಮಕೂರಿನ ಹೆಗ್ಗರೆ ಬಳಿಯ ಅಗಳ ಕೋಟೆಯಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಇಡಿ ತಂಡ ಪರಿಶೀಲನೆ ಮುಕ್ತಾಯಗೊಳಿಸಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಮರಳೂರು ದಿಣ್ಣೆಯ ಎಸ್ ಎಸ್ ಐಟಿಯಲ್ಲಿ ಮತ್ತೊಂದು ತಂಡ ಪರಿಶೀಲನೆ ಪೂರ್ಣಗೊಳಿಸಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW