ತುಮಕೂರು: ಶಿಕ್ಷಣ ಸಂಸ್ಥೆಗಳಿಗೆ ಗ್ರಂಥಾಲಯ ಮತ್ತು ಅದರಲ್ಲಿನ ಗ್ರಂಥಗಳು ದೇಹದ ಹೃದಯ ಭಾಗವಿದ್ದಂತೆ ಎಂದು ಪ್ರಾಂಶುಪಾಲರಾದ ಡಾ.ಪಿ.ಹೇಮಲತಾ ತಿಳಿಸಿದ್ದಾರೆ.
ನಗರದ ಸರಸ್ವತಿಪುರಂನಲ್ಲಿ ಇರುವ ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಸಿಲಿಬ್ ಸಾಫ್ಟ್ವೇರ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗ್ರಂಥಾಲಯ ಆಟೋಮೇಷನ್ ಮತ್ತು ಹೊಸ ಟ್ರೆಂಡ್ ಕುರಿತಾದ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಹಂತದಲ್ಲಿ ಗ್ರಂಥಗಳನ್ನು ಪಠಿಸುವುದು ಮತ್ತು ಹೊಸ ಹೊಸ ಗ್ರಂಥಗಳ ಬಗ್ಗೆ ಅಧ್ಯಯನ ನಡೆಸುವುದನ್ನು ಅಭ್ಯಾಸ ಮಾಡಬೇಕು, ಹಿರಿಯರು ಹೇಳಿದಂತೆ “ದೇಶ ಸುತ್ತು ಇಲ್ಲ ಕೋಶ ಓದು” ಎನ್ನುವಂತೆ ಒಂದೆಡೆ ಇದ್ದು ಗ್ರಂಥಗಳಿಂದ ಅಪಾರಜ್ಞಾನವನ್ನು ಸಂಪಾದಿಸಬಹುದಾಗಿದೆ ಎಂದರು.
ಕಾರ್ಯಾಗಾರದ ಪ್ರಸ್ತಾವಿಕ ನುಡಿಯನ್ನು ಗ್ರಂಥಾಲಯ ಸಹಾಯಕಿ ಲಕ್ಷ್ಮಮ್ಮ ಎಚ್.ಜಿ. ಮಾತನಾಡಿ, ನಮ್ಮ ಕಾಲೇಜಿನಲ್ಲಿ ಸುಂದರವಾದಂತಹ ಗ್ರಂಥಾಲಯವಿದ್ದು, ಗ್ರಂಥಾಲಯದಲ್ಲಿ ಶೈಕ್ಷಣಿಕಕ್ಕೆ ಸಂಬಂಧಪಟ್ಟಂತಹ ಎಲ್ಲಾ ತರಹದ ಪುಸ್ತಕಗಳು ದೊರೆಯುತ್ತದೆ. ಜೊತೆಗೆ ಪ್ರತಿದಿನ ಕನ್ನಡ, ಇಂಗ್ಲಿಷ್ ಹಾಗೂ ನಿಯತಾಕಲಿಕೆಗಳು ಸಿಗುತ್ತದೆ. ಅದನ್ನು ತಾವುಗಳು ಎಲ್ಲಾ ವಿದ್ಯಾರ್ಥಿಗಳು ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಈಸಿಲಿಬ್ ಸಾಫ್ಟ್‌ವೇರ್ ಪ್ರೈ.ಲಿ. ನ ಸಹ–ಸಂಸ್ಥಾಪಕರು ವಾಸು.ಎಂ.ದೇಶಪಾಂಡೆ ಅವರು ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು,ಸಹಾಯಕ ಪ್ರಾಧ್ಯಾಪಕರು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ಬೇರೆ ಬೇರೆ ಕಾಲೇಜುಗಳಿಂದ ಆಗಮಿಸಿದ ಗ್ರಂಥಪಾಲಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW