ತಿಪಟೂರು: ತಾಲ್ಲೂಕಿನ ಹಾಲ್ಕುರಿಕೆ ಗ್ರಾಮದಲ್ಲಿ ಅಕ್ರಮ ಮದ್ಯಮಾರಾಟ ಅವ್ಯಹತವಾಗಿ ನಡೆಯುತ್ತಿದರೂ, ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ಕಣ್ಮುಚ್ಚಿ ಕುಳಿತಿವೆ.
ಹಾಲ್ಕುರಿಕೆ ಗ್ರಾಮದ ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ದೇವಾಲಯಗಳ ಬಳಿಯೇ ಅಕ್ರಮವಾಗಿ ಮದ್ಯಮಾರಾಟ ಮಾಡಲಾಗುತ್ತಿದೆ. ಪ್ರತಿದಿನ ಕುಡುಕರ ಹಾವಳಿಗೆ ಜನಹೈರಾಣಾಗಿ ಹೋಗಿದ್ದಾರೆ. ಹಾಲ್ಕುರಿಕೆ ಬಸ್ ನಿಲ್ದಾಣದ ಬಳಿಯೇ ನಾಲ್ಕೈದು ಅಕ್ರಮ ಮದ್ಯಮಾರಾಟದ ಅಂಗಡಿಗಳಿವೆ, ಒಂದೆಡೆ ಬಸ್ ನಿಲ್ದಾಣ, ಇನ್ನೊಂದೆಡೆ ತರಳಬಾಳು ವಿದ್ಯಾಸಂಸ್ಥೆಗೆ ಸೇರಿದ ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು. ಬ್ಯಾಂಕ್ ಇದ್ದರೂ ಸಹ. ರಾಜಾರೋಷವಾಗಿಯೆ ಅಕ್ರಮವಾಗಿ ಅಂಗಡಿಗಳಲ್ಲಿ ಮದ್ಯಮಾರಾಟ ಮಾಡಲಾಗುತ್ತಿದೆ.
ಪ್ರತಿದಿನ ಹಾಲ್ಕುರಿಕೆ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಜನ ಬಸ್ ಸೌಕರ್ಯಕ್ಕಾಗಿ ಹಾಲ್ಕುರಿಕೆಗೆ ಬರಬೇಕಿದೆ. ಆದರೆ, ಬಸ್ ನಿಲ್ದಾಣದ ಬಳಿ ಇತರ ಸರಕು ಸರಜಾಮುಗಳ ಮಾರಾಟಕ್ಕಿಂತ ಅಕ್ರಮ ಮದ್ಯವೇ ನಿರ್ಭಯವಾಗಿ ಮಾರಾಟವಾಗುತ್ತಿದೆ. ಬಸ್ ಗಾಗಿ ಕಾಯುವ ಮಹಿಳೆಯರು, ವೃದ್ದರು. ಮಕ್ಕಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಕುಡುಕರ ಕಾಟಕ್ಕೆ ಬೇಸತ್ತು ಹೋಗಿದ್ದಾರೆ. ಮದ್ಯಪಾನ ಮಾಡುವುದು. ಬಸ್ ನಿಲ್ದಾಣದ ಬಳಿಯ ಅರಳಿಕಟ್ಟೆಯೇ ಮಲಗುವ ಸ್ಥಳವಾಗುತ್ತಿದೆ. ಇನ್ನೂ ಪಕ್ಕದಲ್ಲೇ ಇರುವ ಅಕ್ರಮ ಮದ್ಯದಂಗಡಿಗಳಲ್ಲಿ ಮದ್ಯಖರೀದಿ ಮಾಡುವ, ಮದ್ಯವ್ಯಸನಿಗಳು ನೇರವಾಗಿ ಸಾರ್ವಜನಿಕ ಆಸ್ಪತ್ರೆಯ ಜಗಲಿಕಟ್ಟೆ ಹಾಗೂ ಆಸ್ಪತ್ರೆಯ ಆವರಣದಲ್ಲಿ ಮದ್ಯಸೇವನೆಯಲ್ಲಿ ತೊಡಗುತ್ತಾರೆ, ಆಸ್ಪತ್ರೆ ಆವರಣದಲ್ಲಿ ಮದ್ಯಸೇವಿಸಬೇಡಿ ಎಂದು ಹೇಳಲು ಹೋದ ಸಿಬ್ಬಂದಿಯ ಮೇಲೂ ಗಲಾಟೆ ಮಾಡುತ್ತಾರೆ. ಕುಡುಕರು ಬಸ್ ಗಾಗಿ ಕಾಯುವ ಮಹಿಳಾ ಪ್ರಯಾಣಿಕರ ಚುಡಾಯಿಸುವುದು. ಅಸಹ್ಯ ಭಾಷೆಯಲ್ಲಿ ವಾಚಾಮಾಗೋಚರವಾಗಿ ಬೈಯ್ಯುತ್ತಿದ್ದು, ಕುಡುಕರ ಹಾವಳಿಯಿಂದ ವಿದ್ಯಾರ್ಥಿಗಳು ಶಿಕ್ಷಕರು ಬಸ್ ನಿಲ್ದಾಣಕ್ಕೆ ಬರಲು ಹಿಂಜರಿಯುತ್ತಿದ್ದಾರೆ.
ಇಷ್ಟೆಲ್ಲ ಅವಾಂತರ ಸೃಷ್ಟಿಮಾಡುತ್ತಿರುವ ಅಕ್ರಮ ಮದ್ಯಂಗಡಿಗಳಿಂದ ಸಾರ್ವಜನಿಕರಿಗೆ ತೀವ್ರವಾದ ತೊಂದರೆಯಾಗುತ್ತಿದ್ದರೂ. ಅಬಕಾರಿ ಇಲಾಖೆ. ಹಾಗೂ ಹೊನ್ನವಳ್ಳಿ ಪೊಲೀಸ್ ಅಸಹಾಯಕವಾಗಿ ಕುಳಿತಿದೆ. ಹಾಲ್ಕುರಿಕೆ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಿಗೆ ಹೊನ್ನವಳ್ಳಿ ಭಾಗದ ಬಾರ್ ನವರೇ ನೇರವಾಗಿ ತಮ್ಮ ವಾಹನಗಳಲ್ಲಿಯೇ ರಾಜಾರೋಷವಾಗಿ ಅಕ್ರಮವಾಗಿ ಮದ್ಯಸರಬರಾಜು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರ ಆರೋಪವಿದ್ದರೂ. ಕ್ರಮಕೈಗೊಳ್ಳಲು ಇಲಾಖೆ ವಿಫಲವಾಗಿದೆ. ಹಾಲ್ಕುರಿಕೆಯಲ್ಲಿ ನಡೆಯುತ್ತಿರುವ ಅಕ್ರಮ ಮದ್ಯಮಾರಾಟ ನಿಲ್ಲಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————