ತುಮಕೂರು: ಬಂಡೆ ಛಿದ್ರಗೊಳಿಸುವ ಸ್ಫೋಟಕ ಸಿಡಿದು ಬಾಲಕನಿಗೆ ಗಂಭೀರ ಗಾಯವಾಗಿರೋ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಇಡಗೂರಿನಲ್ಲಿ ನಡೆದಿದೆ.
ಸ್ಫೋಟಗೊಂಡ ಪರಿಣಾಮ ಬಾಲಕನ ಮೂರು ಬೆರಳು ಛಿದ್ರವಾಗಿವೆ. ಮೋನಿಷ್ ಗಾಯಗೊಂಡ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯಾಗಿದ್ದು, ಈತನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಶಾಲೆಯ ಕಾಂಪೌಂಡ್ ನಿರ್ಮಾಣ ಮಾಡಲು ತಂದು ಸುರಿಯಲಾಗಿದ್ದ ಕಲ್ಲುಗಳ ನಡುವೆ ಇದ್ದ ಸ್ಪೋಟಕವನ್ನು ಕೈಗೆತ್ತಿಕೊಂಡು ಎಸೆದ ವೇಳೆ ಅದು ಸ್ಫೋಟಗೊಂಡಿದೆ .
ಆಟದ ವಸ್ತು ಇರಬಹುದು ಎಂದು ಕೆಂಪು ಬಣ್ಣದ ಸ್ಫೋಟಕವನ್ನು ಮುಟ್ಟಿದ್ದನು. ಈ ಸಂಬಂಧ ಸಿಎಸ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296