ತುಮಕೂರು: ಊರ್ಡಿಗೆರೆ ಗೊಲ್ಲಹಳ್ಳಿಯಲ್ಲಿರುವ ಪಿಎಂ ಜವಾಹರ್ ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್ ಲೈನ್ ಅರ್ಜಿ ಸಲ್ಲಿಕೆ ಅವಧಿಯನ್ನು ಅಕ್ಟೋಬರ್ 7 ವರೆಗೆ ವಿಸ್ತರಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು NVSHQ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಸಾಮಾನ್ಯ/ಹಿಂದುಳಿದ ವರ್ಗ/ಗ್ರಾಮೀಣ/ನಗರ/ವಿಕಲ ಚೇತನ/ಲಿಂಗ/ಭಾಷಾ ಮಾಧ್ಯಮ ಸೇರದಂತೆ ಮತ್ತಿತರ ವಿಷಯಗಳಲ್ಲಿ ತಿದ್ದುಪಡಿ ಮಾಡಲು ಕಡೆಯ ದಿನಾಂಕದ ನಂತರ 2 ದಿನಗಳ ಕಾಲಾವಕಾಶವಿದೆ.
ಇದಕ್ಕಾಗಿ “ತಿದ್ದುಪಡಿ ಕಿಟಕಿ” (CORRECTION WINDOW) ತೆರೆದಿರುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296