ತುಮಕೂರು : ಕುಡಿಯುವ ನೀರಿನ ವಿಚಾರಕ್ಕೆ ನಡು ಬೀದಿಯಲ್ಲೇ ಬಡಿದಾಟ ನಡೆದಿರುವ ಘಟನೆ ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ ನಡೆದಿದೆ.
ಇಕ್ಬಾಲ್ ಅಹಮದ್(46) ಅಬ್ದುಲ್ ಖಾದರ್( 27) ಹಲ್ಲೆಗೊಳಗಾದವರಾಗಿದ್ದು, ಸಲ್ಮಾನ್ ಪಾಷ, ಫರ್ಮಾನ್ ಫಾಷ, ಫಯಾಸ್ ಫಾಷ, ರಕೀಭಾ ಎಂಬುವರಿಂದ ಹಲ್ಲೆ ನಡೆದಿದೆ ಎಂದು ಆರೋಪ ಕೇಳಿ ಬಂದಿದೆ.
ನಗರದ ವೀರಸಾಗರದ ನಿವಾಸಿ ಇಕ್ಬಾಲ್ ಅಹಮದ್ ಅಕ್ಕನ ಮನೆಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಅಕ್ಕ ಸೈದಾ ಬಾನು ನೀರು ಹಿಡಿದುಕೊಳ್ಳಲು ಹೋದಾಗ ಜಗಳ ತೆಗೆದಿದ್ದ ಫಯಾಸ್ ಕುಟುಂಬ, ಸಾರ್ವಜನಿಕ ಟ್ಯಾಪ್ ನಲ್ಲಿ ನೀರಿಡಿದುಕೊಳ್ಳಲು ಅಡ್ಡಿ ಪಡಿಸಿತ್ತು. ಈ ವೇಳೆ ಜಗಳ ಬಿಡಿಸಲು ಹೋದ ಇಕ್ಬಾಲ್ ಅಹಮದ್ ಮೇಲೆ ಹಲ್ಲೆ ನಡೆಸಲಾಗಿದೆ.
ಇಕ್ಬಾಲ್ ನ ತಲೆ ಹಾಗೂ ಕೈ ಎದೆಗೆ ಕಬ್ಬಿಣದ ರಾಡ್ ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಜಗಳ ಬಿಡಿಸಲು ಹೋದ ಅಬ್ದುಲ್ ಮೇಲೂ ಹಲ್ಲೆ ನಡೆದಿದ್ದು, ಗಾಯಾಳುಗಳು ತುಮಕೂರು ಜಿಲ್ಲಾಸ್ಪತ್ರೆ ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆ ನಡೆಸಿದ ಸಲ್ಮಾನ್, ನಾನು ರೌಡಿ, ಪೋಲಿಸ್ ಗೆ ದೂರು ನೀಡಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಹಲ್ಲೆಗೊಳಗಾದ ಇಕ್ಬಾಲ್ ಅಹಮದ್ ಹಾಗೂ ಅಬ್ದುಲ್ ಖಾದರ್ ಆರೋಪಿಸಿದ್ದಾರೆ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW