ತಿರುವನಂತಪುರಂ: ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದಂತೆ ಕೇರಳದಲ್ಲಿ ಕಮಲ ಅರಳುವ ಸೂಚನೆಗಳು ಬಂದಿವೆ. ತ್ರಿಶ್ಶೂರ್ ಮತ್ತು ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಸಿನಿಮಾ ನಟರೂ ಆಗಿರುವ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ, ತ್ರಿಶ್ಶೂರಿನಲ್ಲಿ ಪ್ರಚಾರ ನಡೆಸುವಾಗ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ, ಈ ತ್ರಿಶ್ಶೂರ್ ಞಾನ್ ಇಂಙ್ ಎಡುಕ್ಕುವಾ, ಈ ತ್ರಿಶ್ಶೂರ್ ಎನಿಕ್ ತರಣಂ (ನಾನು ಈ ತ್ರಿಶ್ಶೂರ್ ನ್ನು ತೆಗೆದುಕೊಳ್ಳುತ್ತೇನೆ, ನೀವು ನನಗೆ ಈ ತ್ರಿಶ್ಶೂರ್ ಕೊಡಬೇಕು) ಎಂದು ಸಿನಿಮಾ ಸ್ಟೈಲ್ ನಲ್ಲಿ ಈ ಡೈಲಾಗ್ ಹೇಳಿದ್ದರು.
ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ಸುರೇಶ್ ಗೋಪಿ 69183 ಮತಗಳ ಮುನ್ನಡೆ ಸಾಧಿಸಿದ್ದಾರೆ. ತ್ರಿಶ್ಶೂರ್ ಗೆ ಕೇಂದ್ರ ಸಚಿವ ಸ್ಥಾನ, ಮೋದಿ ಗ್ಯಾರಂಟಿ ಎಂಬ ಘೋಷಣೆಯೊಂದಿಗೆ 65 ವರ್ಷದ ನಟ ತ್ರಿಶೂರ್ನಲ್ಲಿ ಮತಯಾಚನೆ ಮಾಡಿದ್ದರು. 2016 ರ ಅಕ್ಟೋಬರ್ ನಲ್ಲಿ ಸುರೇಶ್ ಗೋಪಿ ಬಿಜೆಪಿ ಸೇರಿದ್ದರು. ಅಂದಿನಿಂದ ಗೋಪಿ ಕೇರಳದ ಬಿಜೆಪಿಯ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾಗಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


