ಹೂವಿನ ಹಡಗಲಿ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಸತತ ಐದನೇ ಬಾರಿಗೆ ಮಾಗಳದ ಹಿರಿಯ ಜೈನ ಶ್ರಾವಕ ಶ್ರೀ ಯಶೋಧರ ಗೌಡ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಹಾವೀರ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಸನ್ಮಾನ ಸಭೆಯಲ್ಲಿ ಶ್ರೀ ಪಾರ್ಶ್ವನಾಥ ಟ್ರಸ್ಟ್ ಅಧ್ಯಕ್ಷರಾದ ಎಚ್.ಎಸ್ ಪ್ರಶಾಂತ್ ರವರು ಶ್ರೀಯಶೋಧರ ಗೌಡರವರನ್ನು ಸನ್ಮಾನಿಸಿದರು.
ಶ್ರೀ ಪಾರ್ಶ್ವನಾಥ ಟ್ರಸ್ಟ್ ಅಧ್ಯಕ್ಷ ಪ್ರಶಾಂತ ಮಾತನಾಡಿ, ಬ್ಯಾಂಕ್ ನಲ್ಲಿ ಜೈನ ಬಾಂಧವರು ಹೆಚ್ಚು ಹೆಚ್ಚು ಶೇರ್ ಗಳನ್ನು ಪಡೆದು ಸಂಘದಿಂದ ದೊರೆಯುವ ಸವಲತ್ತುಗಳ ಲಾಭ ಪಡೆಯಬೇಕೆಂದರು.
ಸನ್ಮಾನ ಸ್ವೀಕರಿಸಿದ್ದ ಯಶೋಧರ ಗೌಡ ಸಂತಸ ವ್ಯಕ್ತಪಡಿಸಿ ,ಸಮಾಜಕ್ಕೆ ಕೃತಜ್ಞತೆ ಸಲ್ಲಿಸಿದರು. ಮಹಾವೀರ ಸೊಸೈಟಿಯ ಜೆ.ಮಂಜುನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ವಿಜಯಕುಮಾರ್ , ಕಾರ್ಯದರ್ಶಿ ಪದ್ಮರಾಜುಜೈನ್, ಖಜಾಂಚಿ ಬಾಗೇಶ್ ಜೈನರ್ ಉಪಸ್ಥಿತರಿದ್ದರು.
ವರದಿ: ಜೆ.ರಂಗನಾಥ– ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx