ಗದಗ: ನೀರಿಗಾಗಿ ಹಾಹಾಕಾರದ ನಡುವೆ ಫ್ಲೋರೈಡ್ ಯುಕ್ತ ನೀರು ಪೂರೈಕೆ ಮಾಡುತ್ತಿರುವ ಹಿನ್ನೆಲೆ, ಗ್ರಾಮ ಪಂಚಾಯತಿ ವಿರುಧ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಘಟನೆ ನಡೆದಿದೆ. ಕಳೆದ ಎರಡು ತಿಂಗಳಿನಿಂದ ತಿಮ್ಮಾಪೂರ ಗ್ರಾಮದಲ್ಲಿ ಸಮರ್ಪಕ ನೀರಿಲ್ಲದೇ ಜನತೆ ಪರದಾಟ ನಡೆಸಿದ್ದಾರೆ. ಒಳ್ಳೆ ನೀರು ಪೂರೈಕೆ ಮಾಡೋ ಬದಲು ಟ್ಯಾಂಕರ್ ಮೂಲಕ ಪ್ಲೋರೈಡ್ ಯುಕ್ತ ನೀರು ಪೂರೈಕೆ ಮಾಡಲಾಗುತ್ತಿದೆ.
ನೀರಿಲ್ಲದೇ ಇರೋದ್ರಿಂದ ಅದೇ ನೀರನ್ನ ತುಂಬಿಕೊಳ್ಳಲು ಸಾಲುಗಟ್ಟಿ ಕೊಡ, ಬಿಂದಿಗೆ ಸಮೇತ ಮಹಿಳೆಯರು ಕ್ಯೂ ನಿಂತಿದ್ದಾರೆ. ನೀರಿಗಾಗಿ ಮಹಿಳೆಯರು ಜಗಳ ಮಾಡಿದ್ದಾರೆ. ಫ್ಲೋರೈಡ್ ಇಲ್ಲದ ಶುದ್ಧ ನೀರು ಸಪ್ಲೈ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


