ಡೆಂಘಿ ಜ್ವರ ಮುಖ್ಯವಾಗಿ ವೈರಸ್ ಗಳಿಂದ ಹರಡುತ್ತದೆ. DENV1, DENV2, DENV3, DENV4 ಎಂಬ ನಾಲ್ಕು ವಿಧದ ವೈರಸ್ ಗಳಿಂದ ಈ ಜ್ವರ ಕಾಣಿಸಿಕೊಳ್ಳುತ್ತದೆ. ಈ ಸೋಂಕಿನ ಜ್ವರ ಎಷ್ಟು ಅಪಾಯಕಾರಿ ಎಂದರೆ ಈ ಕಾಯಿಲೆ ಬಂದಾಗ ವ್ಯಕ್ತಿಯ ರಕ್ತದಲ್ಲಿನ ಪ್ಲೇಟ್ಲೆಟ್ ಗಳು ಹಾಗೂ ಬಿಳಿರಕ್ತ ಕಣಗಳನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ.
ಈ ರಕ್ತದ ಪ್ಲೇಟ್ ಲೆಟ್ ಗಳು ಅಥವಾ ಥ್ರಂಬೋಸೈಟ್ ಗಳು ಅಂದರೆ, ಇದು ನಮ್ಮ ರಕ್ತದಲ್ಲಿನ ಸಣ್ಣ ಜೀವಕೋಶದ ತುಣುಕುಗಳಾಗಿವೆ, ಅದು ಹೆಪ್ಪುಗಟ್ಟುವಿಕೆಯನ್ನು ರೂಪಿಸುತ್ತದೆ ಮತ್ತು ರಕ್ತಸ್ರಾವವನ್ನು ನಿಲ್ಲಿಸುತ್ತದೆ. ಡೆಂಗ್ಯೂ ಸೋಂಕಿನ ಪ್ರಕರಣಗಳಲ್ಲಿ ಸಾಮಾನ್ಯ ಪ್ಲೇಟ್ಲೆಟ್ ಸಂಖ್ಯೆ 1.5 ಲಕ್ಷದಿಂದ 4 ಲಕ್ಷವಿರುವುದು 20,000 40,000 ಪ್ಲೇಟ್ ಲೆಟ್ ಗಳಿಗೆ ಇಳಿಯಬಹುದು. ರಕ್ತದಲ್ಲಿ ಪ್ಲೇಟ್ ಲೆಟ್ ಎಣಿಕೆಯಲ್ಲಿ ಕಡಿಮೆ ಆದಂತೆ ರಕ್ತಸ್ರಾವದ ಜೊತೆಗೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದಕ್ಕಾಗಿ ದೇಶದಲ್ಲಿ ಡೆಂಘೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ರೋಗದಿಂದ ಚೇತರಿಸಿಕೊಳ್ಳಲು, ನಿಮ್ಮ ಪ್ಲೇಟ್‌ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಈ ಆಹಾರ ಪದಾರ್ಥ ಸೇವಿಸುವುದು ಉತ್ತಮ.
ಪಪ್ಪಾಯಿ ಎಲೆಗಳು: ಪಪ್ಪಾಯಿ ಎಲೆಗಳು ಡೆಂಘೆಯಿಂದ ಬಳಲುತ್ತಿರುವ ರೋಗಿಗಳಲ್ಲಿ ಅಪಾಯಕಾರಿ ಕಡಿಮೆ ಮಟ್ಟಕ್ಕೆ ಬೀಳುವ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಸಾಕಷ್ಟು ಜನರು ನಂಬುತ್ತಾರೆ. ಪಪ್ಪಾಯಿ ಎಲೆಗಳ ರಸ ತೆಗೆದು ಅದನ್ನು ಸ್ವಲ್ಪ ಜೇನುತುಪ್ಪದೊಂದಿಗೆ ದಿನಕ್ಕೆ 3 ಬಾರಿ ಸೇವಿಸಬಹುದು. ಅಥವಾ ಪಪ್ಪಾಯ ಹಣ್ಣಿನ ಬೀಜಗಳನ್ನು ಆಹಾರದಲ್ಲಿ ಬಳಸಿ ಸೇವಿಸಬಹುದು.
ಅರಿಶಿನ: ಅರಿಶಿನ ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಚಯಾಪಚಯ ವರ್ಧಕವಾಗಿದೆ. ಅದಕ್ಕಾಗಿ ಆಹಾರದಲ್ಲಿ ಅರಶಿನ ಸೇರಿಸಿ.
ಅಲೋವೆರಾ: ಅಶ್ವಗಂಧ, ತುಳಸಿ ಮತ್ತು ಅಲೋವೆರಾ ರಸವನ್ನು ನಿಮ್ಮ ಆಹಾರದಲ್ಲಿ ಸೇರಿಸಬಹುದು. ಇವು ಕೂಡಾ ಚೇತರಿಕೆಯ ಪ್ರಕ್ರಿಯೆಯಲ್ಲಿ ನಿಮ್ಮ ದೇಹವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತವೆ.
ಕಿತ್ತಳೆ ಹಣ್ಣು: ಹುಳಿ ಮಿಶ್ರಿತ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ. ಹುಳಿ ಮಿಶ್ರಿತ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶಗಳು ಹೆಚ್ಚಾಗಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗುತ್ತದೆ. ಅಂದರೆ ವಿಟಮಿನ್ ಸಿ ಯ ಸಮೃದ್ಧ ಮಿಶ್ರಣವಾಗಿರುವ ಕಿತ್ತಳೆ, ಸ್ಟ್ರಾಬೆರಿ, ನಿಂಬೆಹಣ್ಣು, ಪಪ್ಪಾಯಿ ಇತ್ಯಾದಿಗಳನ್ನು ಹೆಚ್ಚು ಹೆಚ್ಚು ಸೇವಿಸಿ.
ಮಸಾಲೆ ಪದಾರ್ಥಗಳು: ಶುಂಠಿ, ಬೆಳ್ಳುಳ್ಳಿ, ಮೆಣಸು, ದಾಲ್ಚಿನ್ನಿ, ಏಲಕ್ಕಿ ಮತ್ತು ಜಾಯಿಕಾಯಿ ಮುಂತಾದ ಮಸಾಲೆಗಳನ್ನು ಚೇತರಿಕೆ ಸಮಯದಲ್ಲಿ ಆಹಾರದೊಂದಿಗೆ ಸೇವಿಸಿ.
ಹಸಿರು ತರಕಾರಿಗಳು: ಹಸಿರು ತರಕಾರಿಗಳಲ್ಲಿ ವಿಟಮಿನ್ ಕೆ ಇರುವುದರಿಂದ ರಕ್ತದ ಪ್ಲೇಟ್‌ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಮಸಾಲಾ ಟೀ: ಗಿಡಮೂಲಿಕೆ ಚಹಾವು ಏಲಕ್ಕಿ, ಪುದೀನಾ, ದಾಲ್ಚಿನ್ನಿ, ಶುಂಠಿ ಮತ್ತು ನಿಂಬೆಯನ್ನು ಬಳಸಿ ತಯಾರಿಸುವುದಾಗಿದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಎಳನೀರು: ದೇಹದಲ್ಲಿ ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನಗೊಳಿಸಲು ಎಳನೀರನ್ನು ಸೇವಿಸಿ. ಇದು ದೇಹ ಡಿಹ್ರೈಡ್ರೇಟ್ ಆಗದಂತೆಯೂ ನೋಡಿಕೊಳ್ಳುತ್ತದೆ.
ಬೇವಿನ ಎಲೆ: ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಸೋಸಿ ಕುಡಿಯುವುದರಿಂದ ಸಹ ಡೆಂಘಿ ಜ್ವರದ ತೀವ್ರತೆಯನ್ನು ಇಳಿಸಬಹುದು. ಆದರೆ ಬೇವಿನ ಎಲೆಯನ್ನು ಕುದಿಸಿ ಕುಡಿಯುವುದರಿಂದ ಪ್ಲೇಟ್ಲೆಟ್ಗಳು ಹಾಗೂ ಬಿಳಿರಕ್ತ ಕಣಗಳು ಹೆಚ್ಚಾಗಿರುವುದು ಸಂಶೋಧನೆಯಿಂದ ಕಂಡುಕೊಳ್ಳಲಾಗಿದೆ. ಅದರ ಜೊತೆಗೆ ಯಾವುದೇ ಅನಾರೋಗ್ಯದ ಲಕ್ಷಣಗಳು ಕಂಡು ಬಂದಾಗ ವೈದ್ಯರನ್ನು ತಪ್ಪದೇ ಭೇಟಿಯಾಗಿ ಸಲಹೆಗಳನ್ನು ಪಡೆದುಕೊಳ್ಳುವುದು ಬಹುಮುಖ್ಯವಾದ ಅಂಶವಾಗಿದೆ.
ವರದಿ : ಆಂಟೋನಿ ಬೇಗೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA