ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರ ಮೈಸೂರು, ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ಕೇಂದ್ರ ಮೈಸೂರು ಇವರ ವತಿಯಿಂದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹೆಚ್.ಡಿ.ಕೋಟೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಇವರ ಸಹಯೋಗದೊಂದಿಗೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ ಆಹಾರ ಸುರಕ್ಷತೆ ತರಬೇತಿ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವನ್ನು ಅಂಬೇಡ್ಕರ್ ಭವನದಲ್ಲಿ ಅಯೋಜಿಸಲಾಯಿತು.
ತಾಲೂಕು ದಂಡಾಧಿಕಾರಿಗಳಾದ ಶ್ರೀನಿವಾಸ್ , ಮೈಸೂರು ಜಿಲ್ಲೆ ಹಾಲು ಒಕ್ಕೂಟ ಸಂಘದ ನಿರ್ದೇಶಕರಾದ ಕೆ ಈರೇಗೌಡ್ರು ಮತ್ತು ದ್ರಾಕ್ಷಾಯಿಣಿ ಬಸವರಾಜಪ್ಪ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ರವಿಕುಮಾರ್ ಟಿ.ರವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ರವಿಕುಮಾರ್ ಮಾತನಾಡಿ, 2020ರಲ್ಲಿ ತರಬೇತಿ ಕಡ್ಡಾಯ ಕಾಯ್ದೆ ಜಾರಿಗೆ ಬಂದಿತು. ಮಾರಾಟಗಾರರು ಜನರಿಗೆ ಉತ್ತಮವಾದ ಆಹಾರವನ್ನು ಕೊಡಬೇಕು. ಜನರು ಬೇಕರಿ, ಹೋಟೆಲ್ , ಪ್ರಾವಿಷನ್ ಸ್ಟೋರ್, ಈ ಟೀ ಸ್ಟಾಲ್ ಹಾಗೂ ಜನರು ತಿನ್ನುವ ಯಾವುದೇ ಪದಾರ್ಥಗಳನ್ನು ಮಾರಾಟ ಮಾಡಬೇಕಾದರೆ ಕಡ್ಡಾಯವಾಗಿ FSSAI ಲೈಸನ್ಸ್ ನ್ನು ಪಡೆಯಬೇಕು. ಹಾಗೂ ಮಾರಾಟ ಮಾಡೋದಕ್ಕೂ ಮುಂಚಿತವಾಗಿ ಆಹಾರ ಬಗ್ಗೆ ತಿಳಿದುಕೊಳ್ಳಬೇಕು , ಲೈಸೆನ್ಸ್ ಪಡೆದೆ ಮಾರಾಟ ಮಾಡಿ ಹೆಚ್ಚು ಕಡಿಮೆ ಆದರೆ ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.
ನಂತರ ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕರಾದ ಈರೇಗೌಡ್ರು ಅವರು ಮಾತನಾಡಿ, ಉತ್ತಮವಾದ ಗುಣಮಟ್ಟದ ಆಹಾರ ಸಂರಕ್ಷಣೆ ನಿಮ್ಮ ಜವಾಬ್ದಾರಿ ಇರುತ್ತದೆ. ಮೈಸೂರು ಜಿಲ್ಲೆಯ 9 ತಾಲೂಕಿನಲ್ಲಿ ಒಂದು ದಿನಕ್ಕೆ ಒಟ್ಟು 9 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ಹಾಲು ಉತ್ಪಾದನೆಯಲ್ಲಿ ನಮ್ಮ ಹೆಚ್.ಡಿ.ಕೋಟೆ ತಾಲ್ಲೂಕು ಮೂರನೇ ಸ್ಥಾನದಲ್ಲಿದೆ. ಗುಣಮಟ್ಟದಲ್ಲಿ ಹೆಚ್.ಡಿ ಕೋಟೆ ತಾಲ್ಲೂಕು ಎರಡನೇ ಸ್ಥಾನದಲ್ಲಿದೆ.
4,80,000 ಲೀಟರ್ ನಷ್ಟು ಹಾಲು , ಮೊಸರು, ತುಪ್ಪ ,ಬೆಣ್ಣೆ, ಸ್ವೀಟ್ ಆಗಿ ಮಾರಾಟವಾಗುತ್ತಿದೆ. ಇನ್ನುಳಿದ ಹಾಲು ಪೌಡರ್ ಮಾಡಿ ಮಾರಾಟ ಮಾಡಲಾಗುತ್ತದೆ. ನಮ್ಮ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಒಟ್ಟು 186 ಸಂಘ ಸಂಸ್ಥೆಗಳಿವೆ. ಸಂಘ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಹಾಗೂ ನಿರ್ದೇಶಕರಿಗೆ ಏನಾದರೂ ಆರೋಗ್ಯ ಸಮಸ್ಯೆ ಕಂಡು ಬಂದರೆ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕ ಮಾಡಿ ಎಂದು ತಿಳಿಸಿದರು.
ನಂತರ ತಾಲ್ಲೂಕು ದಂಡ ಅಧಿಕಾರಿಗಳಾದ ಶ್ರೀನಿವಾಸ್ ಮಾತನಾಡಿ, ಇದು ಒಂದು ಉತ್ತಮವಾದ ಕಾರ್ಯಕ್ರಮ, ಜನರಿಗೆ ಉತ್ತಮವಾದ ಆಹಾರವನ್ನು ನೀಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ, ಈ ತರಬೇತಿ ಎಲ್ಲರಿಗೂ ಬೇಕು. ಎಲ್ಲರೂ ಕಡ್ಡಾಯವಾಗಿ FSSAI ಲೈಸನ್ಸ್ ಅನ್ನು ಪಡೆಯಬೇಕಾಗುತ್ತದೆ. ಹಾಗೂ ಎರಡು ತಾಲೂಕಿನಲ್ಲಿ ಜನರಿಗೆ ಗುಣಮಟ್ಟದ ಆಹಾರವನ್ನು ಒದಗಿಸಬೇಕಾಗುತ್ತದೆ. ಆದ್ದರಿಂದ ತರಬೇತಿ ಮುಖ್ಯ ಎಂದು ತಿಳಿಸಿದರು.
ರಾಘವೇಂದ್ರ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೈಸೂರು ಜಿಲ್ಲೆ ಹಾಲು ಒಕ್ಕೂಟದ ವ್ಯವಸ್ಥಾಪಕರಾದ ಕರಿ ಬಸವರಾಜು, ವಿಸ್ತರಣಾಧಿಕಾರಿಗಳಾದ ಆರೀಫ್ ಇಕ್ಬಾಲ್, ಜಯಂತ್ ಕುಮಾರ್, ರಾಮಪ್ಪ ಬಾರ್ಕಿ, ಯೋಗೀಶ್, ತಾಹೇರ ಗರಗ, ಜಗದಾಂಬ , ತರಬೇತಿದಾರರಾದ,ಸವಿತಾ, ರಾಘವೇಂದ್ರ ಶೆಟ್ಟಿ ,ರಶ್ಮಿ ಹಾಲು ಉತ್ಪಾದಕರ ಸಂಘದ ಸಂಘಗಳ ಸಿಬ್ಬಂದಿ ವರ್ಗದವರು ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx